ಚರಂಡಿ ವಾಸನೆ: ಓಡಾಟವೇ ಕಷ್ಟ
ಕುಣಿಗಲ್: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ಭೇಟಿ ನೀಡುವ ಗ್ರಾಹಕರು, ಮುಂಭಾಗದಲ್ಲಿ ಕಟ್ಟಿಕೊಂಡಿರುವ ಚರಂಡಿ ವಾಸನೆ ಸಹಿಸಲಾಗದೆ, ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪುರಸಭೆಗೆ ಕೂಗಳತೆ ದೂರದಲ್ಲಿರುವ ಎಸ್ಬಿಎಂ ಕಟ್ಟಡದ ಕೆಳಭಾಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೇಲ್ಭಾಗದಲ್ಲಿ ಮಕ್ಕಳ ಆಸ್ಪತ್ರೆ ಇದೆ. ಸದರಿ ಕಟ್ಟಡದ ಮುಂಭಾಗದಲ್ಲಿನ ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ನಿರ್ವಹಿಸದ ಕಾರಣ, ಚರಂಡಿ ನೀರು ಉಕ್ಕಿ ಹರಿಯುತ್ತಿದೆ. ಹಲವು ತಿಂಗಳೇ ಕಳೆದರೂ, ಇದೇ ಪರಿಸ್ಥಿತಿ ಇದ್ದು, ದಿನಂಪ್ರತಿ ಪುರಸಭೆಯ ವಿವಿಧ ವಿಭಾಗದ ಸಿಬ್ಬಂದಿ, ಅಧಿಕಾರಿಗಳು ಇದೇ ಮಾರ್ಗವಾಗಿ ಸಂಚರಿಸಿದರೂ, ಕಂಡೂ ಕಾಣದಂತಿರುವುದು, ಪುರಸಭೆಯ ನೈರ್ಮಲ್ಯ ನಿರ್ವಹಣೆ ವಿಭಾಗದ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.
ಚರಂಡಿ ನೀರು ಕಟ್ಟಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಗ್ರಾಹಕರು, ಆಸ್ಪತ್ರೆಗೆ ತೆರಳುವವರು ವಿಧಿ ಇಲ್ಲದೆ ಮೂಗುಮುಚ್ಚಿಕೊಂಡು ಹೋಗುವ ಅನಿವಾರ್ಯವಾಗಿದೆ. ಈ ಬಗ್ಗೆ ಹಲವು ಬಾರಿ ಬ್ಯಾಂಕಿನ ಸಿಬ್ಬಂದಿ ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆ ಹಾಗೂ ಬ್ಯಾಂಕಿಗೆ ದಿನನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದು, ಕೊಳಚೆ ನೀರಿನ ವಾಸನೆಯಿಂದ ಪರದಾಡುವಂತಾಗಿದೆ.
ಹೊಸ ವರ್ಷಾಚರಣೆ: ಅಸಭ್ಯವರ್ತನೆಗೆ ಕಡಿವಾಣ ಹಾಕಿ
ಕುಣಿಗಲ್: ರಾಜ್ಯ, ರಾಷ್ಟ್ರದಲ್ಲಿ ಸಮಸ್ಯೆಗಳು ಹೆಚ್ಚಿದ್ದು, ಹಲ್ಲೆ ನಡೆಯುವ ಸಾಧ್ಯತೆ ದಟ್ಟವಾಗಿರುವುದರಿಂದ, ಹೊಸವರ್ಷಾಚರಣೆ ನೆಪದಲ್ಲಿ ಯುವಜನತೆ ಮದ್ಯದ ಅಮಲಿನಲ್ಲಿ ಮನಬಂದಂತೆ ವರ್ತಿಸುತ್ತಾ, ಅಸಭ್ಯವರ್ತನೆಗೆ ಕಡಿವಾಣ ಹಾಕಿ, ನಮ್ಮ ಸಂಸ್ಕೃತಿ, ಸಂಸ್ಕಾರ ಪಾಲಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ತಾಲೂಕು ಪದಾಧಿಕಾರಿ ಪ್ರತಿಭಾ ಸುಧಾಕರ್ ಮನವಿ ಮಾಡಿದ್ದಾರೆ.
ನಮ್ಮ ಸಂಸ್ಕೃತಿಯ ಹಿರಿಮೆ, ಹಲವು ಕಾರಣಗಳಿಂದ ನ್ಮಮ ಸಂಸ್ಕೃತಿ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯ ಥಳುಕಿಗೆ ಮನಸೋತಿರುವ ಯುವಪೀಳಿಗೆಯಲ್ಲಿ ನಮ್ಮ ಸಂಸ್ಕೃತಿಯ ಹಿರಿಮೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಹಿಂದೂ ಜನಜಾಗೃತಿ ಸಮಿತಿ ಹಲವು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಿದೆ. ನಮ್ಮ ನಾಡಿನ ಯುವ ಪೀಳಿಗೆಯು, ಡಿ. 31ಕ್ಕೆ ನೂತನ ವರ್ಷಾಚರಣೆ ನೆಪದಲ್ಲಿ ಅಮಲು ಪದಾರ್ಥಗಳಿಗೆ ಬಲಿಯಾಗಿ, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು, ಭಾರತೀಯರಾದ ನಮಗೆ ಯುಗಾದಿ ಹೊಸ ವರ್ಷಾಚರಣೆಯಾಗಿದ್ದು, ಈ ದಿನವನ್ನು ನಮ್ಮ ನಿಯಮ, ಸಂಸ್ಕೃತಿ ಅಚರಣೆಯಂತೆ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

