ತುಮಕೂರು

ರೇಲ್ವೆ ಬಜೆಟ್ 2013 ಏನಂತಾರೆ...?

Published On :

ಈ ಬಾರಿಯ ರೈಲ್ವೆ ಬಜೆಟ್ ತೀವ್ರ ನಿರಾಸೆ ಮೂಡಿಸಿದೆ. ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೇ ಬಿಂಬಿಸಲ್ಪಟ್ಟಿರುವ ತುಮಕೂರು ಪದೇ -ಪದೇ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ.
-ರಮೇಶ್, ಜೆಡಿಎಸ್ ಮುಖಂಡ

ಹೊಸ ರೈಲುಗಳಿರಲಿ. ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕುರಿತು ಯಾವುದೇ ಪ್ರಸ್ತಾಪವಾಗದಿರುವುದು ವಿಷಾದನೀಯ. ರೈಲ್ವೆ ದರ ಏರಿಸಿದರಷ್ಟೇ ಸಾಲದು. ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
-ಸೈಯದ್ ಅಲ್ತಾಫ್, ಜಿಲ್ಲಾ ಕಾರ್ಯದರ್ಶಿ

ಈ ಬಾರಿಯ ರೇಲ್ವೆ ಬಜೆಟ್ ತುಮಕೂರಿಗೆ ಕರಾಳ ದಿನ. ಕಳೆದ ಬಾರಿ ಹೇಳಿದ್ದ ಹಳೇ ಯೋಜನೆಗಳನ್ನೇ ಮತ್ತೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹೊಸದೇನೂ ಇಲ್ಲ. ಹೊಸ ರೈಲ್ವೆ ಯೋಜನೆಗಳೂ ಇಲ್ಲ.
- ರಮೇಶ್, ಹೋರಾಟಗಾರ

ಭಾನುವಾರ ಮಧ್ಯಾಹ್ನ ತುಮಕೂರಿನಿಂದ ಬೆಂಗಳೂರಿಗೆ ಫುಷ್‌ಪುಲ್  ರೈಲು ಬಿಟ್ಟಿರುವುದು ಸಂತೋಷದ ವಿಷಯ. ಅದು ಬಿಟ್ಟರೆ ತುಮಕೂರಿಗೆ ಬೇರೆ ವಿಶೇಷ ಯೋಜನೆ ದೊರೆತಿಲ್ಲ.
-ಪಂಡಿತ್ ಜವಾಹರ್, ರೈಲ್ವೆ ಪ್ರಯಾಣಿಕ

ತುಮಕೂರಿಗೆ ಈ ಬಾರಿ ವಿಶೇಷವೇನಿಲ್ಲ. ಹೊಸ ಯೋಜನೆಗಳೂ ಇಲ್ಲ. ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಪ್ರಸ್ತಾಪವೂ ಇಲ್ಲ.
-ಸುಬ್ರಹ್ಮಣ್ಯ, ಕಾರ್ಮಿಕ ಮುಖಂಡ

ಹಳೇ ಯೋಜನೆಗಳನ್ನೇ ಮತ್ತೆ ಈ ರೈಲ್ವೆ ಬಜೆಟ್‌ನಲ್ಲಿ ಪ್ರಕಟಿಸಿರುವುದು ಹಳೇ ಮದ್ಯ, ಹೊಸ ಶೀಷೆಯಂತೆ ಎಂಬಂತಾಗಿದೆ. ಕನಿಷ್ಠ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ, ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರಸ್ತಾಪವನ್ನಾದರೂ ಮಾಡಬೇಕಿತ್ತು. ತುಮಕೂರಿನ ಜನತೆಗೆ ನಿರಾಸೆಯಾಗಿದೆ.
-ರವೀಂದ್ರನಾಥ ಠಾಗೂರ್, ವಕೀಲ

ಕೇಂದ್ರ ಸರ್ಕಾರ ಚುನಾವಣೆ ಮೇಲೆ ಕಣ್ಣಿಟ್ಟು ರೇಲ್ವೆ ಬಜೆಟ್ ಮಂಡಿಸುವ ಮೂಲಕ ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದು ಕರ್ನಾಟಕದ ಜನತೆಗೆ ಈ ಬಜೆಟ್ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿ ಕಂಬಿಗಳಿಲ್ಲದೆ ರೇಲು ಓಡಿಸುತ್ತಿರುವ ಬಜೆಟ್ ಇದಾಗಿದೆ.
-ಪ್ರೊ.ಮೂರ್ತಿ, ಹಿರಿಯ ಸಾಹಿತಿ

ಕೇಂದ್ರ ಸರ್ಕಾರ ಕರ್ನಾಟಕದ ಹಿತ ದೃಷ್ಟಿಯಿಂದ ಹೊಸ ಮಾರ್ಗಗಳನ್ನು ಪ್ರಾರಂಭಿಸಿ ಜನ ಸಾಮಾನ್ಯರು ಸುಲಭವಾಗಿ ಸಂಚರಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.
-ಎಂ..ಕೆ.ನಂಜುಂಡಯ್ಯ ಪುರಸಭೆ ಮಾಜಿ ಅಧ್ಯಕ್ಷ

ಕೇಂದ್ರ ಸರ್ಕಾರ ಸದಾ ಕಾಲ ಕರ್ನಾಟಕ ಮತ್ತು ತುಮಕೂರು ಜಿಲ್ಲೆ ಪರವಾಗಿ ರೇಲ್ವೆ ಬಜೆಟ್ ಮಂಡಿಸುವ ಮುಖೇನ ಬಡವರ ಪರವಾಗಿ ಧ್ವನಿ ಎತ್ತಿ ಹೊಸ ರೇಲ್ವೆ ಮಾರ್ಗಗಳನ್ನು ಆರಂಭಿಸುವ ಮೂಲಕ  ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದೆ.
-ಕೆ.ಎನ್.ರಾಜಣ್ಣ , ಅಧ್ಯಕ್ಷರು, ಸಹಕಾರ ಬ್ಯಾಂಕ್

ಕರ್ನಾಟಕದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದ ರೇಲ್ವೆ ಇಲಾಖೆ ಕಲಿಯುವುದು ಸಾಕಷ್ಟಿದೆ. ಆನ್‌ಲೈನ್ ಸೇವೆ, ಎಸ್‌ಎಮ್‌ಎಸ್ ಮಾಹಿತಿ, ಮುಂದಿನ ನಿಲ್ದಾಣದ ಕುರಿತು ಘೋಷಣೆ, ಸಮಯಪಾಲನೆ ಬಗ್ಗೆ ಕರ್ನಾಟಕದ ಸಂಸ್ಥೆಗಳಿಂದ ರೇಲ್ವೆ ಕಲಿಯಬೇಕು.
-ರೂಪೇಶ್ ಶಿರಾ, ಉದ್ಯೋಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.