28.5 ಕೆಜಿಯಷ್ಟೇ ಅನ್ನಭಾಗ್ಯ!
ಕ.ಪ್ರ.ವಾರ್ತೆ ತುರುವೇಕೆರೆ ಜು.23
ಸರ್ಕಾರ ಬಡ ಜನರಿಗಾಗಿ ಪ್ರತಿ ತಿಂಗಳು ಪಡಿತರ ನೀಡುವ ಸಂಕಲ್ಪ ಮಾಡಿದೆ. ಇತ್ತೀಚೆಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ. ಇಬ್ಬರಿಗೆ 20 ಹಾಗೂ ಮೂವರಿಗಿಂತ ಹೆಚ್ಚಿರುವವರಿಗೆ 30 ಕೆಜಿ ಅಕ್ಕಿ ನಿಗದಿ ಮಾಡಿದೆ. ಆದರೆ, ಇಲ್ಲಿಗೆ ಸಮೀಪದ ಮಲ್ಲಾಘಟ್ಟದ ಪಡಿತರ ವಿತರಣಾ ಕೇಂದ್ರದಲ್ಲಿ ಕಾರ್ಯದರ್ಶಿ ಅಕ್ಕಿ ವಿತರಣೆಯಲ್ಲಿ ಲೋಪ ಮಾಡುತ್ತಿರುವ ಘಟನೆ ನಡೆದಿದೆ. ಇಲ್ಲಿ ಪ್ರತಿ ತೂಕಕ್ಕೆ 1 ರಿಂದ 1.50 ಕೆಜಿಯಷ್ಟು ಕಡಿಮೆ ತೂಕ ನೀಡಲಾಗುತ್ತಿದೆ ಎಂದು ದೂರಿ ಕೆಲ ಕಾಲ ಗ್ರಾಹಕರು ಪ್ರತಿಭಟನೆ ಮಾಡಿದರು.
ಕೆಜಿ ಅಕ್ಕಿಗೆ 1ನಂತೆ 30 ಕೆಜಿಗೆ 30 ಪಡೆಯಲಾಗುತ್ತದೆ. ಆದರೆ, ಅಕ್ಕಿ ಕೊಡುವ ವೇಳೆ 28.50 ಕೆಜಿ ಅಕ್ಕಿ ಮಾತ್ರ ಕೊಟ್ಟು ಮೂವತ್ತು ರುಪಾಯಿ ಪಡೆಯಲಾಗುತ್ತದೆ ಎಂದು ಗ್ರಾಹಕರು ಪಡಿತರ ವಿತರಣಾ ಅಂಗಡಿ ಮುಂದೆ ತಗಾದೆ ತೆಗೆದರು. ತಮಗೆ ನೀಡುವ ಅಕ್ಕಿಯಲ್ಲೇ ತೂಕ ಕಡಿಮೆ ಇರುತ್ತದೆ. ಚೀಲದ ತೂಕ ಹಾಗೂ ಸಾರಿಗೆ ವೆಚ್ಚಕ್ಕಾಗಿ 1 ರಿಂದ 1.50 ಕೆಜಿ ಅಕ್ಕಿ ಹಿಡಿದು ಕೊಡಲಾಗುವುದು ಎಂದು ಕಾರ್ಯದರ್ಶಿ ಶೇಖರ್ ಹೇಳುತ್ತಾರೆ ಎಂದು ಸಾರ್ವಜನಿಕರು ದೂರಿದರು.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಗ್ರಾಹಕರಿಗೆ ನೀಡಬೇಕಾದ ಪಡಿತರವನ್ನು ಸರಿಯಾದ ತೂಕದಲ್ಲಿ ನೀಡಲು ಕಾರ್ಯದರ್ಶಿ ಮುಂದಾದರು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕ ಶಿವಶಂಕರ್, ಕಾರ್ಯದರ್ಶಿ ಶೇಖರ್ ರಿಗೆ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ದೂರು ಆಲಿಸಿದ ಆಹಾರ ನಿರೀಕ್ಷಕ ಶಿವಶಂಕರ್, ಪಡಿತರ ವಿತರಣೆಯನ್ನು ಕಾನೂನಿನನ್ವಯ ವಿತರಣೆ ಮಾಡಬೇಕು. ಕೇವಲ 3 ದಿನ ಮಾತ್ರ ಬಾಗಿಲು ತೆಗೆದು ಗೊಂದಲ ಉಂಟು ಮಾಡಿದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

