ತುಮಕೂರು

ಮುಂಗಾರು ರಂಗಸಂಭ್ರಮ ಯಶಸ್ವಿ

Published On :

ತುಮಕೂರು: ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಮುಂಗಾರು ರಂಗಸಂಭ್ರಮ ಯಶಸ್ವಿಯಾಯಿತು. ಜೂನ್ 27 ರ ಗುರುವಾರ ಸಂಜೆ ಆರು ಗಂಟೆಗೆ ಹಿರಿಯ ರಂಗಕರ್ಮಿ ಹೆಚ್.ಎಂ. ರಂಗಯ್ಯ ಮುಂಗಾರು ರಂಗಸಂಭ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮುಂಗಾರು ಉತ್ತರ ಭಾರತದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ. ಅದು ಸಂಭ್ರಮವಾಗಿ ಬದಲಾಗಲಿ ಎಂದು ಆಶಿಸಿದರು.
ಗುಬ್ಬಿ ಕಂಪನಿಯ ಹಿರಿಯ ಕಲಾವಿದ ಹೆಬ್ಬಾಕ ಸಿದ್ದಲಿಂಗಪ್ಪ, ಚನ್ನಬಸವಯ್ಯಗುಬ್ಬಿ ಉಪಸ್ಥಿತರಿದ್ದರು. ನಂತರ ರಾಜ್‌ಗುರು ಹೊಸಕೋಟೆ ಅವರಿಂದ ರಂಗಗೀತೆಗಳ ಗಾಯನ ನಡೆಯಿತು.ಸಂಜೆ ಏಳು ಗಂಟೆಗೆ ಬೆಂಗಳೂರಿನ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘವು ಯು.ಗೋವಿಂದೇಗೌಡರ ರಚನೆ ಮತ್ತು ನಿರ್ದೇಶನದಲ್ಲಿ ವಿಕಲ ವಿಲಾಸ ಎಂಬ ನಾಟಕವನ್ನು ಅಭಿನಯಿಸಿದರು.
ಕಬ್ಬು ಸಿಹಿಯಾಗಿದೆ ಎಂದ ಮಾತ್ರಕ್ಕೆ ಬೇರಿನ ಸಮೇತ ತಿನ್ನಲು ಸಾಧ್ಯವಿಲ್ಲ. ಹಾಗೆಯೇ ತಮಾಷೆ ಎಷ್ಟಿರಬೇಕೋ ಅಷ್ಟಕ್ಕೆ ಇರಲಿ. ಅತಿಯಾದರೆ ಅನಾಹುತಕ್ಕೆ ದಾರಿಯಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತ ನಾಟಕದ ಮೂಲಕ ಸೂಕ್ಷ್ಮವಾಗಿ ಪ್ರೇಕ್ಷಕರ ಮುಂದೆ ತೆರೆದಿಟ್ಟರು.
ಜೂನ್ 28 ರ ಶುಕ್ರವಾರ ಸಂಜೆ ರಂಗಸುಗ್ಗಿ ಟ್ರಸ್ಟ್ ಬೆಂಗಳೂರು ಇವರ ಗಂಗಾಂತರಂಗ ನೃತ್ಯರೂಪಕಕ್ಕೆ ಕಲಾಶ್ರೀ ಲಕ್ಷ್ಮಣದಾಸ್ ಚಾಲನೆ ನೀಡಿ ನಾಟಕವೆಂಬುದು ಸಂಕಟಗಳ ಸಂತೆ, ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ನಾಟಕಮನೆ ನಿರಂತರವಾಗಿ ನಾಟಕ ಪ್ರಯೋಗಗಳಲ್ಲದೆ ಉತ್ಸವಗಳನ್ನು ಆಯೋಜಿಸುತ್ತಿದೆ. ಅದು ತುಮಕೂರಿನ ಹೆಮ್ಮೆ ಎಂದರು. ಪತ್ರಿಕೋದ್ಯಮಿ ಎಸ್.ನಾಗಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ಮುನಿದರೆ ಮನುಷ್ಯನ ಆಟ ಏನು ನಡೆಯಲ್ಲ ಎಂಬುದಕ್ಕೆ ಉತ್ತರಖಂಡದ ಘಟನೆಯೇ ಸಾಕ್ಷಿ. ಇದಕ್ಕೆ ಪೂರಕವೆಂಬಂತೆ ಗಂಗಾಂತರಂಗ ನಾಟಕ ರೂಪಗೊಂಡಿದೆ.ಇದರ ಪ್ರಯೋಗ ಯಶಸ್ವಿಯಾಗಲೆಂದು ಹಾರೈಸಿದರು.
ಕಲಾವಿದ ಕೋಟೆ ಕುಮಾರ್ ಉಪಸ್ಥಿತರಿದ್ದರು. ನಂತರ ಹೆಚ್.ವಿ. ರಾಮಚಂದ್ರರಾವ್ ಅವರ ಗಂಗಾಂತರಂಗ ನೃತ್ಯರೂಪಕ ತುಮಕೂರು ಶಿವಕುಮಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.
ಜೂ.29 ರಂದು ಶನಿವಾರ ದೃಶ್ಯ ರಂಗತಂಡ ಬಸ್ತಿ ನಾಟಕ ದಾಕ್ಷಾಯಿಣಿ ಭಟ್ ನಿರ್ದೇಶನದಲ್ಲಿ ಮೂಡಿಬಂದಿತು. ನಂತರ ತುಮಕೂರಿನ ಪ್ರಯೋಗಶೀಲ ರಂಗದಾಟ ಕೇಂದ್ರವಾದ ನಾಟಕಮನೆ ಪ್ರಸ್ತುತ ಪಡಿಸಿದ ಜನ-ಮನ-ಗಣ ನಾಟಕವು ಧನ್ವಂತ್ರಿ ನಿರ್ದೇಶನದಲ್ಲಿ ಪ್ರಯೋಗಗೊಂಡಿತು.ಜನರ ಆಚಾರ-ವಿಚಾರಗಳನ್ನು ವಿಡಂಬನಾತ್ಮಕವಾಗಿ ರಂಗದ ಮೇಲೆ ಕಟ್ಟಿಕೊಡುವಲ್ಲಿ ಕಲಾವಿದರು ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.