ತುಮಕೂರು

ಮಾನವನಿಂದ ಬರೇ ಸ್ವಾರ್ಥ

Published On :

ಕ.ಪ್ರ.ವಾರ್ತೆ ತುಮಕೂರು ಮೇ 16
ಮಾನವ ಸ್ವಾರ್ಥಿಯಾಗಿದ್ದಾನೆ. ಸ್ವಾರ್ಥದ ಪರಮಾವಧಿ ತಲುಪಿದ್ದಾನೆ. ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಬದುಕುತ್ತಿದ್ದಾನೆ ಎಂದು ಕೊರಟಗೆರೆ ನೂತನ ಶಾಸಕ ಪಿ. ಸುಧಾಕರ್ ಲಾಲ್ ವಿಷಾದಿಸಿದರು.
ಅವರು ಕೊರಟಗೆರೆ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಮತ್ತು ಬಸವ ಸಮಿತಿ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು. ಮಾನವನ ಸ್ವಾರ್ಥದಿಂದಾಗಿ ಪರಿಸರ ಹಾಳಾಗುತ್ತಿದೆ. ಪರಿಸರ ಕೇವಲ ಮಾನವನಿಗಾಗೇ ಇಲ್ಲ. ಎಲ್ಲ ಪ್ರಾಣಿ, ಪಕ್ಷಿಗಳಿಗಾಗಿ ಪರಿಸರ ಇದೆ ಎಂಬುದನ್ನು ಮಾನವ ಮರೆತಿದ್ದಾನೆ. ಇದೊಂದು ವಿಷಾದನೀಯ ಸಂಗತಿ ಎಂದರು. ಸ್ವಾರ್ಥದ ಪರಮಾವಧಿ ತಲುಪಿರುವ ಇಂದಿನ ಸಮಾಜಕ್ಕೆ ಬಸವಣ್ಣನವರ ತತ್ವಾದರ್ಶಗಳು ಅತ್ಯಗತ್ಯವಾಗಿವೆ. ಆದರೆ ಇಂದು ಬಸವಣ್ಣನವರ ತತ್ವಾದರ್ಶಗಳು ಕಣ್ಮರೆಯಾಗಿವೆ. ಇವುಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ ಸುಧಾಕರ್‌ಲಾಲ್, ಬಸವಣ್ಣನವರ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದರ ಮೂಲಕ   ಸ್ಪರ್ಧಾ ಪರೀಕ್ಷೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಡೆಸಿದಾಗ ಮಕ್ಕಳಲ್ಲಿ ಅರಿವು ಮೂಡುತ್ತದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಮಾತನಾಡಿ, ಸ್ತ್ರೀಯರ ಶೋಷಣೆ ಬಗ್ಗೆ ಹಾಗೂ ಸಾಮಾಜಿಕ ಪರಿವರ್ತನೆಯ ದೃಷ್ಟಿಯನ್ನಿಟ್ಟುಕೊಂಡು ಬಸವಣ್ಣನವರು ಮಾಡಿದ ಕಾರ್ಯ ಹಾಗೂ ಅವರು ನೀಡಿದ ಸಂದೇಶ ಶ್ಲಾಘನೀಯ ಎಂದರು. ಜಿಪಂ ಸದಸ್ಯೆ ದಾಕ್ಷಾಯಿಣಿ ರಾಜಣ್ಣ, ತಾಪಂ ಅಧ್ಯಕ್ಷೆ ಅನಿತಾ, ಸದಸ್ಯ ಪ್ರಕಾಶ್, ಜೆಡಿಎಸ್ ಅಧ್ಯಕ್ಷ ರಂಗಮುತ್ತಯ್ಯ, ಕಾರ್ಯಾಧ್ಯಕ್ಷ ನರಸಿಂಹರಾಜು, ತಹಶೀಲ್ದಾರ್ ರಾಮಚಂದ್ರಪ್ಪ, ಇ.ಓ ಗೋಪಾಲ್, ಬಿಇಓ ಮಹೇಶ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪಿ.ಆರ್. ಪರ್ವತಯ್ಯ, ಬಸವೇಶ್ವರ ವೀರಶೈವ ಸಂಘದ ಅಧ್ಯಕ್ಷ ಕೆ.ಬಿ. ಲೋಕೇಶ್, ವಿಜಯನರಸಿಂಹ, ಎಲ್. ಕಾಮಯ್ಯ ಮಹಾಲಿಂಗಪ್ಪ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.