ತುಮಕೂರು

ಕಾಟಾಚಾರದ ಕೆಡಿಪಿ ಸಭೆ ಬೇಡ

Published On :

ಚಿಕ್ಕನಾಯಕನಹಳ್ಳಿ: ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆರು ತಿಂಗಳಿಗೆ ನಡೆದರರೂ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬಾರದ ಅಧಿಕಾರಿಗಳನ್ನು ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ ತರಾಟೆಗೆ ತೆದುಕೊಂಡರು.
ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆರುತಿಂಗಳಿಗೆ ಪ್ರಾರಂಭವಾಗಿದೆ. ಸಭೆ ಮರ್ಯಾದೆ ನೀಡಬೇಕೆಂಬ ಕನಿಷ್ಠ ಸೌಜನ್ಯವು ನಿಮಗಿಲ್ಲ. 7 ದಿನಗಳ ಮುಂಚೆ ನೀಡಬೇಕಾದ ಪ್ರಗತಿ ವರದಿಯನ್ನು ಇಂದು ನೀಡುತ್ತಿದ್ದೀರಿ. ನಾವು ಯಾವ ರೀತಿ, ಯಾವ ವಿಷಯದ ಮೇಲೆ, ಚರ್ಚಿಸ ಬೇಕು. ಇಂತಹ ಬೇಜವಾಬ್ದಾರಿ ಕೆಲಸ ಮಾಡುವ ಬದಲು ಸಭೆಯಿಂದ ಹೊರಹೋಗಿ ಎಂದು ಖಾರವಾಗಿ ನುಡಿದರು.
ಭೂಸೇನಾ ನಿಗಮದ ಕಳಪೆ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದ ಜಿಪಂ ಸದಸ್ಯೆ ಲೋಹಿತಾ ಬಾಯಿ ಜೋಡಿಕಲ್ಲೇನಹಳ್ಳಿಯ ಕಾಂಕ್ರೀಟ್ ರಸ್ತೆಯನ್ನು ಅವೈಜ್ಞಾನಿಕವಾಗಿ ಮನೆಯೊಳಗೆ ನೀರು ನುಗ್ಗುವಂತೆ ಮಾಡಿದ್ದೀರಿ, ನಿಮ್ಮ ಇಲಾಖೆ ಕಾರ್ಯವೈಖರಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ದೂರಿದರು.
ಆರೋಗ್ಯಇಲಾಖೆಯಿಂದ ವೈದ್ಯರು ಬಾರದೆ ಸಹಾಯಕನನ್ನು ಕಳುಹಿಸಿದ ಬಗ್ಗೆ ಪಂಚಾಕ್ಷರಿಯವರು, ನಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವುದಾದರೆ ಸಭೆಯಲ್ಲಿರಿ ಎಂದರು. ಹಿಂದುಳಿದ ಪ್ರದೇಶದವಾದ ಕಂದಿಕೆರೆ ಹೋಬಳಿಯ ಬರಶಿಡ್ಲಹಳ್ಳಿಯ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 7 ತಿಂಗಳು ಕಳೆದರೂ ವಿಜ್ಞಾನ ಪಾಠ ಪ್ರಾರಂಭವಾಗಿಲ್ಲದಿರುವ ಬಗ್ಗೆ ಲೋಹಿತಾಬಾಯಿ ಸಭೆಯ ಗಮನ ಸೆಳೆದಾಗ ಕ್ಷೇತ್ರಶಿಕ್ಷಣಾಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾದರು.
15 ಶಾಲೆ ಬಂದ್: ಸಿಂಗದಹಳ್ಳಿ ರಾಜಕುಮಾರ್ ಅವರು ಮುಚ್ಚಿರುವ ಶಾಲೆಗಳ ಬಗ್ಗೆ ಮಾಹಿತಿ ಕೇಳಿದಾಗ ಕಳೆದ ಸಾಲಿನ ಶಾಲೆಗಳು ಸೇರಿ 15 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಉತ್ತರಿಸಿದರು. ರೇಷ್ಮೆ ಇಲಾಖೆ ಎನ್‌ಇಜಿ ಯೋಜನೆಯಡಿಯಲ್ಲಿ  ಕಾಮಗಾರಿ ಕೈಗೊಳ್ಳುವಲ್ಲಿ ವಿಫಲವಾಗಿರುವ ಬಗ್ಗೆ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಸದಸ್ಯೆ ಜಾನಮ್ಮ ರಾಮಚಂದ್ರಯ್ಯನವರು ಕಾಲುಬಾಯಿ ಜ್ವರದಿಂದ ಜಾನುವಾರುಗಳು ಸತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ, ಇದಕ್ಕೆ ದನಿಗೂಡಿಸಿದ ಪಂಚಾಕ್ಷರಿಯವರು ಅಣೇಕಟ್ಟೆ ಮಹಲಿಂಗಪ್ಪನವರ ಹಸು ಮೃತಪಟ್ಟು 4 ತಿಂಗಳಾದರು ಪಶುವೈದ್ಯ ಇಲಾಖೆ ಸಮರ್ಪಕ ವರದಿ ಸಲ್ಲಿಸದ ಪರಿಣಾಮ ರೈತನಿಗೆ ಪರಿಹಾರ ಸಿಕ್ಕಿಲ್ಲ ಎಂದಾಗ, ವೈದ್ಯಾಧಿಕಾರಿ ಕುಪ್ಪೂರು ವೈದ್ಯಾಧಿಕಾರಿಯ ಮೇಲೆ ಹೊಣೆ ಹೇರಿದರು.
ಆಕ್ಷೇಪ: ಇಲಾಖೆಯಲ್ಲಿ ಲಸಿಕೆ ಕೊರತೆಯಿದ್ದರೆ ಅದಕ್ಕೆ ವ್ಯವಸ್ಥೆ ಮಾಡುವುದಾಗಿ ಶಾಸಕರು ಹೇಳಿದರು. ಮಾಶಾಸನಗಳನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಅನೇಕ ಬಾರಿ ತಿಳಿಸಿದರೂ ನೀವು  ಕಾಯಗತಗೊಳಿಸುವಲ್ಲಿ ನಿರ್ಲಕ್ಷ ತಾಳಿದ್ದೀರಿ ಎಂದು ತೀವ್ರವಾಗಿ ಆಕ್ಷೇಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.