ಯಶಸ್ವೀ ಮೆಗಾ ಲೋಕ ಅದಾಲತ್
ಕ.ಪ್ರ.ವಾರ್ತೆ ಕುಣಿಗಲ್ ನ. 24
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಐಒಬಿ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್, ವಿಮಾ ಕಂಪನಿಗಳಿಗೆ ಸಂಬಂಧಿಸಿದಂತ ಮೆಗಾ ಲೋಕ ಅದಾಲತ್ ಕಾರ್ಯಕ್ರಮಕ್ಕೆ ತೆರೆಬಿತ್ತು.
ಈ ಕಾರ್ಯಕ್ರಮದಿಂದ ಕೆಲವರಲ್ಲಿ ಋಣಮುಕ್ತರಾದ ಭಾವನೆ ಕಂಡುಬಂದರೆ, ಸಾಲ ವಸೂಲಾತಿಯಾದ ಹರ್ಷ ಬ್ಯಾಂಕ್ ಸಿಬ್ಬಂದಿಗಳಲ್ಲಿ ಕಂಡುಬಂತು. ಇಬ್ಬರಿಗೂ ಸಮರ್ಥ ನ್ಯಾಯದೊರಕಿಸಿಕೊಟ್ಟು, ನ್ಯಾಯಾಲಯದ ಹೊರೆಕಡಿಮೆ ಮಾಡಿದ ಸಂತಸ, ನ್ಯಾಯಾಧೀಶರು, ವಕೀಲರಲ್ಲಿ ಮೂಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಉಚ್ಚನ್ಯಾಯಾಲಯದ ಸೂಚನೆಯಂತೆ ಪಟ್ಟಣದ ನ್ಯಾಯಾಲಯದ ಅವರಣದಲ್ಲಿ ಇಂಡಿಯನ್ ಒವರ್ಸೀಸ್ ಬ್ಯಾಂಕ್ನ 280 ಪ್ರಕರಣಗಳು ಸೇರಿದಂತ ಎಸ್ಬಿಎಂನ 30 ಪ್ರಕರಣಗಳು, ವಿವಿಧ ವಿಮಾ ಕಂಪನಿಯ 30ಕ್ಕೂ ಹೆಚ್ಚು ಪ್ರಕರಣಗಳನ್ನು ಕಕ್ಷಿದಾರರ ಮನವೊಲಿಸಿ ರಾಜಿ ಸಂಧಾನದ ಮೂಲಕ ಖುಲಾಸೆಗೊಳಿಸಲಾಯಿತು. ಸಾಧ್ಯವಾದಷ್ಟು ಮಟ್ಟಿಗೆ ಪ್ರಕರಣಗಳನ್ನು ರಾಜಿ ಸಂಧಾನದಮೂಲಕ ಬಗೆಹರಿಸಲು ಅತ್ಯಲ್ಪ ಅವಧಿಯಲ್ಲೆ ನ್ಯಾಯಾಲಯ ಸಿಬ್ಬಂದಿ, ಕಕ್ಷಿದಾರರು, ವಕೀಲರು ಹಾಗೂ ಪೊಲೀಸರು ನ್ಯಾಯಾಧೀಶರ ಮನವಿ ಮೇರೆಗೆ ಶ್ರಮಿಸಿದ್ದರೆ, ಕೇವಲ 20 ದಿನಗಳ ಅವಧಿಯಲ್ಲಿ (ರಜೆದಿನ ಬಿಟ್ಟು) 601 ಪ್ರಕರಣಗಳು ಇತ್ಯರ್ಥವಾಗಿದ್ದು ತಾಲೂಕಿನ ಇತಿಹಾಸದಲ್ಲೆ ಲೋಕ ಅದಾಲತ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಂಧಾನ ಮೂಲಕ ಇತ್ಯರ್ಥ: ಸಮಾರೋಪ ಸಮಾರಂಭದಲ್ಲಿ ನ್ಯಾಯಾಧೀಶರಾದ ಆರ್.ಶಾರದ ಮಾತನಾಡಿ, ಮೂರು ಕೋರ್ಟ್ನಿಂದ ಒಟ್ಟಾರೆ 601 ಪ್ರಕರಣಗಳನ್ನು ಮೆಗಾ ಲೋಕಅದಾಲತ್ನಲ್ಲಿ ಸಂಧಾನದ ಮೂಲಕ ಬಗೆಹರಿಸಲಾಗಿದ್ದು,ಬಹುತೇಕ ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡಿದಂತಾಗಿದೆ. ಇದಕ್ಕ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ವಕೀಲರಿಗೆ ಅಭಿನಂದನೆ: ಮತ್ತೊಬ್ಬ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ, ಇಷ್ಟೊಂದು ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲು, ವಕೀಲರ ಸಹಕಾರ ಇಲ್ಲದಿದ್ದರೆ ಸಾಧ್ಯವಿಲ್ಲ. ಕಾರಣ ಒಂದು ಪ್ರಕರಣ ನಡೆಯುತ್ತಿದ್ದರೆ ಅದು ಪರೋಕ್ಷವಾಗಿ ವಕೀಲರ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತೆ. ಆದರೆ ವಕೀಲ ಮಿತ್ರರು ಇದನ್ನು ಲೆಕ್ಕಿಸದೆ ಪ್ರಕರಣಗಳ ಇತ್ಯರ್ಥಕ್ಕೆ ಮನಸ್ಸು ಮಾಡಿದ್ದಾರೆಂದರು.
ನ್ಯಾಯಾಧೀಶರಾದ ಎನ್.ಮುನಿರಾಜು,ಇದೊಂದು ರೀತಿಯ ಉತ್ತಮ ಬೆಳವಣಿಗೆಯಾಗಿದ್ದು, ಬ್ಯಾಂಕಿಂಗ್ ಸೇವೆ ಅಲ್ಲದೆ ಇತರೆ ಪ್ರಕರಣಗಳಲ್ಲೂ ರಾಜಿಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಂಡು ನೆಮ್ಮದಿಯುತಜೀವನ ನಿರ್ವಹಣೆ ಮಾಡಬೇಕೆಂದರು.
ಅದ್ಭುತ ಯಶಸ್ಸು: ವಕೀಲರ ಸಂಘದ ಅಧ್ಯಕ್ಷ ದಯಾನಂದ್, ನ್ಯಾಯಾಲಯದ ಸಿಬ್ಬಂದಿಗಳು ಉತ್ತಮ ಸಹಕಾರದಿಂದ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿದೆ ಎಂದರು. ಹಿರಿಯ ವಕೀಲ ಎ.ಆರ್.ರಂಗಸ್ವಾಮಿ ಕಾರ್ಯಕ್ರಮದ ಬಗ್ಗೆ ವಕೀಲರು ಸೇರಿದಂತೆ ಬಹುತೇಕರಿಗೆ ಪೂರ್ವಮಾಹಿತಿ ಇಲ್ಲವಾಗಿದ್ದು, ಮೊದಲೆ ತಿಳಿಸಿದ್ದರೆ ಮತ್ತಷ್ಟು ಪ್ರಕರಣ ಬಗೆಹರಿಸಬಹುದಿತ್ತು ಎಂದರು. ಐಒಬಿ ಬ್ಯಾಂಕ್ನ ವ್ಯವಸ್ಥಾಪಕ ಶ್ರೀನಿವಾಸ, ಗುರುರಾಜ್, ಎಸ್ಬಿಎಂ ವ್ಯವಸ್ಥಾಪಕ ವಿಶ್ವನಾಥ್, ವಕೀಲರಾದ ನಿಸ್ಸಾರ್ ಅಹಮದ್, ಲೋಕೇಶ್, ಸುರೇಶ, ಚಂದ್ರೇಗೌಡ, ಸತ್ಯನಾರಾಯಣ ಒಡೆಯರ್, ಎಪಿಪಿಗಳಾದ ಲಕ್ಷ್ಮಿ, ಸುರೇಕಾ ಹಿರೇಮಠ ಇತರರು ಉಪಸ್ಥಿತರಿದ್ದರು.
ಲೋಕ್ ಅದಾಲತ್ ಕಾರ್ಯಕ್ರಮದಿಂದ ಐಒಬಿ ಬ್ಯಾಂಕ್ನ 160 ಪ್ರಕರಣಗಳಿಂದ ಸುಮಾರು ಒಂದು ಕೋಟಿ ಮೊತ್ತದ ಸಾಲ ವಸೂಲಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

