ಕೆಜೆಪಿಗೆ ಜಯರಾಂ ಗುಡ್ ಬೈ?
ಕನ್ನಡಪ್ರಭ ವಾರ್ತೆ ತುರುವೇಕೆರೆ ಸೆ.1
ರಾಜ್ಯ ಕೆಜೆಪಿಯಲ್ಲಿ ಬಿ. ಎಸ್. ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆಯವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷವನ್ನು ಸದೃಢಗೊಳಿಸಲು ಮುಂದಾಗುತ್ತಿದ್ದಾರೆ. ಆದರೆ ಕಳೆದ ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸುಮಾರು 55 ಸಾವಿರ ಮತಗಳನ್ನು ಗಳಿಸಿದ್ದ ಮಸಾಲಾ ಜಯರಾಂ ಕೆಜಿಪಿಯನ್ನು ತ್ಯಜಿಸಲಿದ್ದಾರೆ. ಪಕ್ಷದ ವತಿಯಿಂದ ಸ್ಪರ್ಧೆ ಮಾಡಿ ಬಹಳ ಕಡಿಮೆ ಅಂತರದಿಂದ ಜೆಡಿಎಸ್ಗೆ ವಿರುದ್ಧ ಸೋಲು ಕಂಡಿದ್ದ ಮಸಾಲಾ ಜಯರಾಂ ಅವರಿಗೆ ಪಕ್ಷ ಗುರುತರವಾದ ಜವಾಬ್ದಾರಿ ನೀಡಿಲ್ಲದಿರುವುದರಿಂದ ಅವರಿಗೆ ಬೇಸರವಾಗಿದೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಕೆಜೆಪಿಗೆ ಬಲ ತಂದುಕೊಟ್ಟ ಹೆಗ್ಗಳಿಕೆ ಮಸಾಲಾ ಜಯರಾಂ ಅವರಿಗೆ ಇತ್ತು. ತಾಲೂಕಿನಲ್ಲಿ ಅತ್ಯಂತ ಪ್ರಬಲವಾಗಿದ್ದ ಜೆಡಿಎಸ್ ಹಾಗೂ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ್ದ ಜಯರಾಂ ಅವರಿಗೆ ತಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಮತಗಳು ಬಂದಿದ್ದವು. ಕೆಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿರುವ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಅವರ ಕೃಪಾಶೀರ್ವಾದದಿಂದಲೇ ಮಸಾಲಾ ಜಯರಾಂ ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದರು.
ಈಗ ಕೆಜೆಪಿ ಹಾಗೂ ರಾಜ್ಯ ಮುಖಂಡರ ಬಗ್ಗೆ ಬೇಸರಗೊಂಡಿರುವ ಮಸಾಲಾ ಜಯರಾಂ ಕೆಜೆಪಿಗೆ ಗುಡ್ ಬೈ ಹೇಳಲಿದ್ದಾರೆ.
ಸೆಳೆಯಲು ಯತ್ನ: ಮಸಾಲಾ ಜಯರಾಂ ಅವರು ಕೆಜೆಪಿ ತೊರೆಯುವುದು ಖಚಿತ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಮುಂದಾಗಿದ್ದಾರೆ. ಸುಮಾರು 55 ಸಾವಿರ ಮತಗಳನ್ನು ಗಳಿಸಿದ್ದ ಅವರು ಪಕ್ಷವನ್ನು ಸಂಘಟನೆ ಮಾಡಲು ಶಕ್ತರು ಎಂದು ಮನಗಂಡಿರುವ ಕಾಂಗ್ರೆಸ್ನ ಹಿರಿಯ ನಾಯಕರು ತಮ್ಮ ಪಕ್ಷಕ್ಕೆ ಬರ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಖುದ್ದು ಮಾತನಾಡಿ ಕಾಂಗ್ರೆಸ್ಗೆ ಸೇರ್ಪಡೆಯಾಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಸಚಿವ ಜಯಚಂದ್ರರವರೂ ಸಹ ಮಸಾಲಾ ಜಯರಾಂ ಅವರ ಪಕ್ಷ ಸೇರ್ಪಡೆಯಾಗಲು ಒಲವು ತೋರಿದ್ದಾರೆ ಎನ್ನಲಾಗಿದೆ.
ಬಿಜೆಪಿಗೆ ಆಹ್ವಾನ: ಮಸಾಲಾ ಜಯರಾಂ ಕೆಜೆಪಿಗೆ ಗುಡ್ ಬೈ ಹೇಳುವವರಿದ್ದಾರೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ತಮ್ಮ ಪಕ್ಷಕ್ಕೆ ಬರುವಂತೆ ಖುದ್ದಾಗಿ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದೆ ಜಯರಾಂ ಶೀಘ್ರದಲ್ಲೇ ತಮ್ಮ ಬೆಂಬಲಿಗರನ್ನು ಕರೆದು ತಾವು ಕಾಂಗ್ರೆಸ್ಗೆ ಹೋಗಬೇಕೋ ಅಥವಾ ಬಿಜೆಪಿ ಗೆ ಹೋಗಬೇಕೋ ಎಂದು ತೀರ್ಮಾನಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

