ತುಮಕೂರು

ವೈಕಂ ಬಷೀರ್ ಮೋಹಕ ಕಥೆಗಾರ

Published On :

ತುಮಕೂರು: ಮಲೆಯಾಳಂ ಭಾಷೆಯ ವೈಕಂ ಮಹಮದ್ ಬಷೀರ್ ಮೋಹಕ ಕಥೆಗಾರ ಎಂದು ತುಮಕೂರು ವಿವಿ ಕುಲಪತಿ ಪ್ರೊ. ರಾಜಾಸಾಬ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ವೈಕಂ ಮಹಮದ್ ಬಷೀರ್ ಅವರ 'ಶಬ್ಧಗಳು' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವೈಕಂ ಮಹಮದ್ ಬಷೀರ್ ಅವರ ಕಥೆಗಳಲ್ಲಿ ಜೀವನ ಪ್ರೀತಿ ಮತ್ತು ಮಾನವೀಯತೆ ಹೆಚ್ಚಿರುತ್ತದೆ. ಇದು ಒಳ್ಳೆಯ ಲೇಖಕನ ವಿಶೇಷ ಎಂದು ಇದೇ ಸಂದರ್ಭದಲ್ಲಿ ಬಣ್ಣಿಸಿದರು. ಮನುಷ್ಯ ಸಂಬಂಧಗಳನ್ನು ಹುಡುಕುವುದು ವೈಕಂ ಅವರ ಕಥೆಯ ವಿಶೇಷತೆ. ಸರಳವಾಗಿ ಆದರೆ ತೀವ್ರವಾಗಿ ಬರೆಯುವ ವೈಕಂ ಅವರ ಕಥೆಗಳನ್ನು ನಮ್ಮನ್ನು ಆವರಿಸಿಕೊಳ್ಳುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವಾರು ಸದಭಿರುಚಿ ನಾಟಕಗಳನ್ನು ಝೆನ್ ಟೀಮ್ ಪ್ರದರ್ಶಿಸಿ ತುಮಕೂರಿನ ಜನತೆಗೆ ಪರ್ಯಾಯ ನಾಟಕಗಳನ್ನು ತೋರಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೇಷ್ಠ ಕೃತಿಗಳು ಯಾವತ್ತೂ ಹೊಸ ಸಾಧ್ಯತೆಯನ್ನು ಹುಟ್ಟು ಹಾಕುತ್ತಲೇ ಇರುತ್ತದೆ. ಒಂದು ಒಳ್ಳೆಯ ಕೃತಿ ಕೇವಲ ವರ್ತಮಾನದ ಜತೆ ವ್ಯವಹರಿಸದೇ ಭವಿಷ್ಯತ್ ಬಗ್ಗೆಯೂ ದಿಕ್ಸೂಚಿ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ವೈಕಂ ಮಹಮದ್ ಅವರ ಕೃತಿಗಳಲ್ಲಿ ಈ ಗುಣ ಇರುತ್ತದೆ. ವೈಕಂ ಅವರ ಕಥೆಗಳಲ್ಲಿ ಚಿಕಿತ್ಸೆಯ ಗುಣವಿರುತ್ತದೆ. ಈ ಗುಣವೇ ಅವರನ್ನು ದೇಶದ ಶ್ರೇಷ್ಠ ಕಥೆಗಾರರನ್ನಾಗಿ ಹೊರಹೊಮ್ಮಿಸಿದೆ ಎಂದು ತಿಳಿಸಿದರು.
ನಾಟಕಗಳ ಪ್ರದರ್ಶನ ನಮ್ಮಲ್ಲಿನ ಅಹಂಕಾರಗಳನ್ನು ಕೊಂದು ಮಾನವೀಯತೆ ಬೆಳೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಝೆನ್ ಟೀಮ್ ನ ವತಿಯಿಂದ ತುಮಕೂರಿನಲ್ಲಿ ಕಳೆದ 9 ವರ್ಷಗಳಿಂದ ವೇದಿಕೆ ರೂಪಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೈಕಂ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಎಸ್. ಗಂಗಾಧರಯ್ಯ ವೈಕಂ ಅವರ ಕಥೆಗಳಲ್ಲಿ ಪ್ರೀತಿಯ ಸ್ಥಾಯಿ ಭಾವ. ಅವರ ಕಥೆಗಳು ನಮ್ಮ ಅಂತ-ಕರಣಗಳನ್ನು ತಟ್ಟಿ ಬಿಡುತ್ತದೆ. ಈ ಕಾರಣಕ್ಕಾಗಿಯೇ ವೈಕಂ ಅದ್ಭುತ ಕಥೆಗಾರ ಎಂದು ಬಣ್ಣಿಸಿದರು. ಅವರ ಎಲ್ಲಾ ಕೃತಿಗಳಲ್ಲೂ ಕೂಡ ಈ ರೀತಿಯ ಪ್ರೀತಿ ಇದ್ದೇ ಇರುತ್ತದೆ. ವೈಕಂ ಭಾರತದ ಶ್ರೇಷ್ಟ ಕಥೆಗಾರರಲ್ಲಿ ಒಬ್ಬರು ಎಂದು ಇದೇ ಸಂದರ್ಭದಲ್ಲಿ ಪ್ರಶಂಸಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆಪಿನಕಟ್ಟೆ ಬಸವರಾಜು ಮಾತನಾಡಿ, ಝೆನ್ ಟೀಮ್ ಕಳೆದ 9 ವರ್ಷಗಳಿಂದ ತುಮಕೂರಿನಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಆರೋಗ್ಯಕರವಾದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಝೆನ್ ಟೀಮ್ ನಾಟಕಗಳು ಅಂದ ಕೂಡಲೇ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸುವಷ್ಟು ವೈವಿಧ್ಯತೆ ಮೆರೆಯುತ್ತಿದೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ರಂಗ ಗೌರವ ಸ್ವೀಕರಿಸಿ ಮಾತನಾಡಿದ ನಾಟಕ ಅಕಾಡೆಮಿ ಸದಸ್ಯ ಹಾಲ್ಕುರಿಕೆ ಶಿವಶಂಕರ್, ರಂಗಭೂಮಿ ಎಲ್ಲ ಕಲೆಗಳನ್ನು ಸಂವಾದಿಸುವ ಮಾಧ್ಯಮವಾಗಿದೆ. ಝೆನ್ ಟೀಮ್ ವತಿಯಿಂದ ನಡೆಯುತ್ತಿರುವ ಈ ರಂಗ ಗೌರವ ನನ್ನಲ್ಲಿ ಅತೀವ ಸಂಸತ ಉಂಟು ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್  ಮಾತನಾಡಿದರು.

ವೈಕಂ ಮಹಮದ್ ಬಷೀರ್ ಅವರ ಕಥೆಗಳಲ್ಲಿ ಜೀವನ ಪ್ರೀತಿ ಮತ್ತು ಮಾನವೀಯತೆ ಹೆಚ್ಚಿರುತ್ತದೆ. ಇದು ಒಳ್ಳೆಯ ಲೇಖಕನ ವಿಶೇಷ ಎಂದು ಇದೇ ಸಂದರ್ಭದಲ್ಲಿ ಬಣ್ಣಿಸಿದರು. ಮನುಷ್ಯ ಸಂಬಂಧಗಳನ್ನು ಹುಡುಕುವುದು ವೈಕಂ ಅವರ ಕಥೆಯ ವಿಶೇಷತೆ. ಸರಳವಾಗಿ ಆದರೆ ತೀವ್ರವಾಗಿ ಬರೆಯುವ ವೈಕಂ ಅವರ ಕಥೆಗಳನ್ನು ನಮ್ಮನ್ನು ಆವರಿಸಿಕೊಳ್ಳುತ್ತದೆ
-ಪ್ರೊ. ರಾಜಾಸಾಬ್,
ತುಮಕೂರು ವಿವಿ ಕುಲಪತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.