ತುಮಕೂರು

ಪೊಲೀಸರ ಕಿರುಕುಳ ತಪ್ಪಿಸಿ

Published On :

ಕುಣಿಗಲ್ : ಪೊಲೀಸರ ಕಿರುಕುಳ ತಪ್ಪಿಸಿ, ತಮ್ಮನ್ನು ನೆಮ್ಮದಿಯಿಂದ ವ್ಯಾಪಾರ ನಿರ್ವಹಣೆ ಮಾಡಲು ಅನುವು ಮಾಡಿಕೊಡಬೇಕೆಂದು ಫುಟ್ಪಾತ್ ವ್ಯಾಪಾರಿಗಳು ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ನೇತೃತ್ವದಲ್ಲಿ ಶಾಸಕ ಡಿ.ನಾಗರಾಜಯ್ಯನವರಲ್ಲಿ ಮೊರೆ ಇಟ್ಟ ಘಟನೆ ಸೋಮವಾರ ನಡೆಯಿತು.
ಪಟ್ಟಣದ ಮುಖ್ಯರಸ್ತೆಯಲ್ಲಿ ಒಂದು ಅಂಚಿನಲಿ ಹಣ್ಣಿನಕೈಗಾಡಿ ಇಟ್ಟುಕೊಂಡು ಕಳೆದ ಹಲವು ವರ್ಷಗಳಿಂದಲೂ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇವೆ, ಪೊಲೀಸರು ನಿಮ್ಮಿಂದಲೇ ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದು ಬಂದು ನಮ್ಮ ತಕ್ಕಡಿಗಳನ್ನು ತೆಗೆದುಕೊಂಡು, ನಮ್ಮನ್ನು ಬೆಳಗಿನಿಂದಲೂ ಸಂಜೆವರೆಗೂ ಠಾಣೆಯಲ್ಲಿ ಸುಮ್ಮನೆ ಕೂರಿಸುತ್ತಾರೆ. ನಂತರ ಕೇಸ್ ಹಾಕಿ ದಂಡಹಾಕುತ್ತಾರೆ. ಈ ರೀತಿಯಾದರೆ ನಾವು ಬದುಕೋದು ಹೇಗೆ, ನಮ್ಮ ಜೀವನ ನಿರ್ವಹಣೆ ಹೇಗೆ, ವಿನಾಕಾರಣ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಕೇಳಲು ಹೋದರೆ ವಿನಾಕಾರಣ ಕಾರಣ ಠಾಣೆಗೆ ಕರೆದೊಯ್ದು ಹಲ್ಲೆ ಮಾಡುತ್ತಾರೆ. ದಿನವೂ ಇವರ ಕಿರುಕುಳ ದಿಂದ ಬೇಸತ್ತಿದ್ದವೆ. ದಯಮಾಡಿ ಇವರ ಕಿರುಕುಳದಿಂದ ಪಾರು ಮಾಡಿ ಎಂದು ವ್ಯಾಪಾರಿಗಳಾದ ನವಾಬ್, ಅನ್ಸರ್, ಪಾಷ, ಉಮರ್ ಇತರರು ಸೋಮವಾರ ಬೆಳ್ಳಂಬೆಳಗ್ಗೆ ಶಾಸಕರ ಮನಗೆ ತೆರಳಿ ಮೊರೆ ಇಟ್ಟರು.
ಫುಟ್ಪಾತ್ ವ್ಯಾಪಾರಿಗಳ ಮನವಿ ಆಲಿಸಿದ ಶಾಸಕ ಡಿ. ನಾಗರಾಜಯ್ಯ, ಸಂತೇಮೈದಾನ, ಕೋಟೆ ಮುಖ್ಯರಸ್ತೆಯಲ್ಲಿ ಜನ ಓಡಾಡಲು ಆಗುತ್ತಿಲ್ಲ. ತುಮಕೂರು ರಸ್ತೆಯಲ್ಲಂತೂ ಪರಿಸ್ಥಿತಿ ಹೇಳುವ ಹಾಗಿಲ್ಲ. ಫುಟ್ಪಾತ್  ವ್ಯಾಪಾರಿಗಳು ಜನತೆಗೆ, ಸಂಚಾರ ವ್ಯವಸ್ಥೆಗೆ ತೊಂದರೆ ಆಗದಂತೆ ವ್ಯಾಪಾರ ಮಾಡಬೇಕು ಎನ್ನುವ ಕನಿಷ್ಠ ತಿಳಿವಳಿಕೆ ಇಲ್ಲ, ಪಟ್ಟಣದಲ್ಲಿ ಮೊದಲೆ ದಿನದಿನಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ. ರಸ್ತೆಯ ಒಂದು ಬದಿಯಲ್ಲಿ ವ್ಯಾಪಾರ ಮಾಡದೆ ಕೆಲಸಮಯ ರಸ್ತೆಬದಿಗೆ ಇಟ್ಟುಕೊಂಡು ವ್ಯಾಪಾರ ಮಾಡ್ತಿರೀ, ಪೊಲೀಸರು ಹಲವು ಬಾರಿ ಸೂಚನೆಕೊಟ್ಟರೂ ಗಣನೆಗೆ ತೆಗೆದುಕೊಳ್ಳಲ್ಲ, ಈಗ ನಿಮ್ಮದೆ ಆದ ಸಮಸ್ಯೆ ಹೇಳುತ್ತಿದ್ದೀರಾ, ರಸ್ತೆಯಲ್ಲಿ ಸಂಚರಿಸುವ ವಾಹನ, ಪಾದಚಾರಿಗಳ ಸುರಕ್ಷತೆ ಬಗ್ಗೆ ಆಲೋಚಿಸಿದ್ದೀರಾ.
ಟ್ರಾಫಿಕ್ ಕಿರಿಕಿರಿಯಾದರೆ ಜನತೆ ಪೊಲೀಸರನ್ನೆ ದೂರುವುದು ಹೊರತು ನಿಮ್ಮನ್ನಲ್ಲ. ಈ ವಿಷಯದಲ್ಲಿ ನೀವೂಗಳ ಜವಾಬ್ದಾರಿಯಿಂದ ಜನತೆಗೆ ತೊಂದರೆಯಾಗದಂತೆ ವ್ಯಾಪಾರ ನಿರ್ವಹಣೆ ಮಾಡುವ ಭರವಸೆ ನೀಡಿದರೆ ಮಾತ್ರ ನಾನು ಪೊಲೀಸ್ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಸಿದ್ಧವಿದ್ದೇನೆ. ಆದರೆ ನೀವು ಹೇಳೊದೊಂದು ಮಾಡೋದೊಂದು ಎಂದು ತರಾಟೆಗೆ ತೆಗೆದುಕೊಂಡರು. ಕೆಲಕಾಲ ವ್ಯಾಪಾರಿಗಳು ತಮ್ಮ ಸಮಸ್ಯೆ ತೋಡಿಕೊಂಡು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ ಮೇರೆಗೆ ಇನ್ನೆರಡು ದಿನದೊಳಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.