ಸಂಘಟನೆಗಳ ನಿರಂತರ ಹೋರಾಟ
ಮಳವಳ್ಳಿ: ರಾಷ್ಟ್ರದಾದ್ಯಂತ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ 10 ಅಂಶಗಳ ಬೇಡಿಕೆಗಳಿಗಾಗಿ ಕಳೆದ 4 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬರುತ್ತಿವೆ ಎಂದು ಮೈಸೂರು ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಬಾಲಾಜಿರಾವ್ ತಿಳಿಸಿದರು. ಪಟ್ಟಣದ ಹೊರ ಕ್ರೀಡಾಂಗಣದಲ್ಲಿ ಕಾರ್ಮಿಕರ ಹಕ್ಕುಗಳ ಜಾಗೃತಿ ಜಾಥಾವನ್ನು ಬರಮಾಡಿಕೊಂಡ ನಂತರ ಕಾರ್ಮಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾತನಾಡಿದ ಅವರು, ನ್ಯಾಯ ಬದ್ಧ ಹಕ್ಕುಗಳಿಗಾಗಿ ಒತ್ತಾಯಿಸಲು ಸಂಘಟನೆಗಳ ಮೂಲಕ ಹೋರಾಟ ನಡೆಸಿದಾಗ ಆರಂಭಿಸಿದ ತಕ್ಷಣ ದಾಳಿ ದಬ್ಬಾಳಿಕೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಮ್ಮ ಮುಂದೆ ಬಂದಿದೆ. ಸಂಘಟನೆ ರಚಿಸಿದ ನಂತರ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಸಾಮೂಹಿಕ ಚೌಕಾಸಿಯ ಹಕ್ಕು ಇಲ್ಲದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ ಎಂದರು.
ಚರ್ಚೆ: ಕಾರ್ಮಿಕ ವರ್ಗದ ದುಡಿಯುವ ಜನತೆಯ ಹಾಗೂ ರಾಷ್ಟ್ರದ ಜನತೆಯ ಹಿತ ಕಾಯಲು ಮುಂದೆ ನಡೆಸಬೇಕಾದ ಹೋರಾಟಗಳ ಕುರಿತು ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಚಳವಳಿಯನ್ನು ಬಲಪಡಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು. ಜನರಲ್ ಕೌನ್ಸಿಲ್ ಸಭೆಯ ಅಂಗವಾಗಿ ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಕೆಜಿಎಫ್, ಬೀದರ್, ಬೆಳಗಾವಿ, ಕಾರವಾರ, ಚಾಮರಾಜನಗರದಿಂದ ಬಳ್ಳಾರಿವರೆಗೆ 5 ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾಗಳು ಇದೆ 14ರಂದು ಬಳ್ಳಾರಿ ನಗರದಲ್ಲಿ ನಡೆಯುವ ಬಹಿರಂಗ ರ್ಯಾಲಿ ಮತ್ತು ಸಮಾರೋಪದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ ಎಂದರು. ಜಾಥಾದಲ್ಲಿ ನಿಂಗರಾಜು, ಮೂರ್ತಿ, ಪುಟ್ಟಮಾದು, ಮಹದೇವಮ್ಮ, ಕುಮಾರಿ, ಕೃಷ್ಣೇಗೌಡ ಸೇರಿದಂತೆ ಹಲವಾರು ಸಿಐಟಿಯು ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

