ಕಾಡಾನೆಗಳ ದಾಳಿ: ಬೆಳೆ ನಾಶ
ಗುಬ್ಬಿ: ಕಳೆದ ಮೂರು ದಿನಗಳ ಹಿಂದೆಯಷ್ಟೆ ಗುಬ್ಬಿ ಕೆರೆಯಲ್ಲಿ ವಾಸ್ತವ್ಯ ಹೂಡಿದ್ದ ಐದು ಕಾಡಾನೆಗಳ ಹಿಂಡು ತಗ್ಗೆಹಳ್ಳಿ ಅರಣ್ಯ ಪ್ರದೇಶದಲ್ಲಿ ತಂಗಿದ್ದು ಆನಂತರ ಸಂಪಿಗೆವರೆಗೆ ಸಂಚರಿಸಿ, ಅತ್ತಿಕಟ್ಟೆ, ಬೆಣ್ಣೂರು, ಕಡಬಾ ಮಾರ್ಗವಾಗಿ ಮಲ್ಲಪ್ಪನಹಳ್ಳಿ ಕೆರೆಗೆ ಬಂದಿವೆ. ಈ ಮಾರ್ಗದುದ್ದಕ್ಕೂ ಬಾಳೆ, ತೆಂಗು ಮತ್ತು ಅಡಿಕೆ ಬೆಳೆಗಳನ್ನು ನಾಶಪಡಿಸಿದ್ದು ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನುಂಟುಮಾಡಿವೆ. ಮಲ್ಲಪ್ಪನಹಳ್ಳಿಯ ಗಂಗಯ್ಯ ಎಂಬುವರ ಸುಮಾರು 200 ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದ್ದು ಜಿಪಂ.ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ಎಂಬುವರರ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ತುಳಿದು ನಾಶಪಡಿಸಿವೆ.
ರೈತರ ಆತಂಕ: ಕಾಡಾನೆಗಳ ದಾಳಿಯಂದಾಗಿ ರೈತರು ತೀವ್ರ ಆತಂಕ್ಕೀಡಾಗಿದ್ದಾರೆ. ಈವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾಡಾನೆಗಳ ಹಿಂಡನ್ನು ಸುಕ್ಷಿತವಾಗಿ ಅರಣ್ಯಕ್ಕೆ ಓಡಿಸಲು ಅರಣ್ಯಾಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ಮಲ್ಲಪ್ಪನಹಳ್ಳಿ ಕೆರೆಯಲ್ಲಿ ನೀರಿಲ್ಲದಿರುವುದರಿಂದ ಕಾಡಾನೆಗಳು ಕೆರೆಯಲ್ಲಿ ಬೆಳೆದಿರುವ ಗಣೇಶಕಡ್ಡಿಯಲ್ಲಿ ಅವಿತುಕೊಂಡಿವೆ. ಅಲ್ಲದೆ ಗಣೇಶಕಡ್ಡಿ ದಟ್ಟವಾಇಲ್ಲದಿದ್ದರಿಂದ ಎಲ್ಲೆಂದರಲ್ಲಿ ಕೆರೆಯ ತುಂಬೆಲ್ಲ ಚಲ್ಲಾಟವಾಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

