ತುಮಕೂರು

ಉತ್ತಮ ಮುಂಗಾರು ಮಳೆಯಾಗಲಿ

Published On :

ತಿಪಟೂರು: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕೆರೆಗೋಡಿ-ರಂಗಾಪುರ ಕ್ಷೇತ್ರದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ 15ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಆಶೀರ್ವಾದ ಪಡೆದರು.
ಶ್ರೀ ಕ್ಷೇತ್ರದಲ್ಲಿ ಪ್ರತಿ ಅಮಾವಾಸ್ಯೆಯಲ್ಲೂ ನಾಡಿನಲ್ಲಿ ಶಾಂತಿ, ಸಮೃದ್ಧಿ ಮತ್ತು ಭಕ್ತರ ಇಷ್ಟಾರ್ಥಗಳು ಈಡೇರಲೆಂದು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ.
ನಿನ್ನೆ ಬಾದಾಮಿ ಅಮಾವಾಸೆ ಪ್ರಯುಕ್ತ ಸಂಜೆ 6ಗಂಟೆಯಿಂದ ರಾತ್ರಿ 10ಗಂಟೆ ವೇಳೆಗೆ ಸುಮಾರು 15ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳು ಈ ಸಂದರ್ಭದಲ್ಲಿ ಆಶೀರ್ವಾದ ನೀಡಿ ನಾಡಿಗೆ ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿ. ಆತಂಕದ ಜೀವನ ನಡೆಸುತ್ತಿರುವ ತೆಂಗು ಬೆಳೆಗಾರರು ಉತ್ತಮ ಮಳೆ-ಫಸಲಿನಿಂದ ನೆಮ್ಮದಿ ಜೀವನ ಸಾಗಿಸುವಂತಾಗಲಿ. ನಾಡಿನಾದ್ಯಂತ ಶಾಂತಿ-ಸಮೃದ್ಧಿ ನೆಲಸಲಿ ಎಂದು ತಿಳಿಸಿದರು.
ಎಂದಿನಂತೆ ಶ್ರೀ ಮಠದಲ್ಲಿ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿದ್ದು ಭಕ್ತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಸಾದ ವಿನಿಯೋಗಿಸಿದರು.

ಮಳೆ, ಗಾಳಿಗೆ ವಿದ್ಯುತ್ ಕಂಬಧರೆಗೆ, ಮನೆಗಳಿಗೆ ಭಾರಿ ಹಾನಿ
ಬೇಲೂರು: ತಾಲೂಕಿನ ಹೆಬ್ಬಾಳು ಸುತ್ತಮುತ್ತಲಿನಲ್ಲಿ ಇತ್ತೀಚೆಗೆ ಬಿದ್ದ ಮಳೆ ಮತ್ತು ಬಿರುಗಾಳಿಯಿಂದ ಅನೇಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಮನೆಗಳ ಹೆಂಚು ಮತ್ತು ಶೀಟುಗಳು ಹಾರಿವೆ. ತೆಂಗಿನ ಮರಗಳು ನೆಲಕ್ಕುರುಳಿವೆ.
ಮಳೆಯೊಂದಿಗೆ ಬೀಸಿದ ಬಿರುಗಾಳಿಯಿಂದ ಶಿವಾಲದಹಳ್ಳಿ ಗಡಿಯಲ್ಲಿರುವ ಶೇಷೇಗೌಡ ಅವರ ಮನೆಯ ಹತ್ತಿರದ ವಿದ್ಯುತ್ ಕಂಬ ಮನೆಯ ಮೇಲೆ ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಆ ವೇಳೆ ವಿದ್ಯುತ್ ಸರಬರಾಜು ಇಲ್ಲದ ಕಾರಣ ಯಾವುದೆ ಅವಘಡ ಸಂಭವಿಸಿಲ್ಲ.  ಮಲ್ಲಮ್ಮ ಎಂಬವರ ಮನೆಯ ಹೆಂಚು ಹಾರಿದೆ.  ಗೋಪೇಗೌಡ ಎಂಬುವರ ರೇಷ್ಮೆ ಮನೆಯ ಚಾವಣಿ ಹಾರಿಹೋದ ಪರಿಣಾಮ ರೇಷ್ಮೆಗೂಡಿಗೆ ತೊಂದರೆ ಆಗಿದೆ. ಶಿವಾಲದ ಹಳ್ಳಿಯಲ್ಲಿ ಮೂರ್ತಿ, ಕೃಷ್ಣೇಗೌಡ,  ಸೋಮೇಗೌಡ, ನಿಂಗೇಗೌಡ, ರಾಜೇಗೌಡ, ರಂಗೇಗೌಡ, ಚಂದ್ರೇಗೌಡ, ತಮೇಗೌಡ ಇವರಿಗೆ ಸೇರಿದ ಮನೆಗಳ ಚಾವಣಿ ಹಾನಿಗೊಳಗಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.