ನಾಗರಾಜಯ್ಯ ನೇಮಕಕ್ಕೆ ಸಂತಸ
ಕುಣಿಗಲ್: ತಾಲೂಕಿನ ವ್ಯಾಪ್ತಿಯ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿ ಹೋಗಿದ್ದ, ಕವಿ, ಸಾಮಾಜಿಕ ಹೋರಾಟಗಾರರಾದ ವಡ್ಡಗೆರೆ ನಾಗರಾಜಯ್ಯ ಅವರನ್ನು ಸಾಹಿತ್ಯ ಅಕಾಡಮಿ ಸದಸ್ಯರಾಗಿ ರಾಜ್ಯ ಸರ್ಕಾರ ನೇಮಕ ಮಾಡಿರುವುದಕ್ಕೆ ತಾಲೂಕಿನ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ. ವಡ್ಡಗೆರೆ ನಾಗರಾಜಯ್ಯನವರು ತಾವು ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಸಮಯದಲ್ಲೆ ಹಲವು ಕವನಸಂಕಲನ, ಪುಸ್ತಕಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದು, ರಾಜ್ಯ ಸರ್ಕಾರ ಅವರ ಸೇವೆಯನ್ನು ಗುರುತಿಸಿ ಅಕಾಡಮಿ ಸದಸ್ಯರನ್ನಾಗಿ ನೇಮಕ ಮಾಡಿದ್ದು ಅವರು ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ಲೇಖಕ ವೈ.ಜಿ.ವೆಂಕಟೇಶಯ್ಯ, ಸಾಹಿತಿ ಭಾರ್ಗವಿ ಸೋಮಶೇಖರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಫಯಾಜುಲ್ಲಾ, ಪದಾಧಿಕಾರಿಗಳಾದ ಸಿದ್ದಲಿಂಗಸ್ವಾಮಿ, ಗುರುಚರಣ ಸಿಂಗ್, ಆನಂದಸಿಂಗ್, ಮೋಹನ್, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಅಭಿನಂದಿಸಿದ್ದಾರೆ.
ಸೀತಾರಾಮ ಲಕ್ಷ್ಮಣ ಪ್ರತಿಷ್ಠಾಪನೆ
ಪಾವಗಡ: ಸೀತಾರಾಮಲಕ್ಷ್ಮಣ ದೇವರ ಪ್ರತಿಷ್ಠಾಪನೆ ಮತ್ತು ಅಂಜನೇಯಸ್ವಾಮಿ ದೇವಸ್ಥಾನದ ಗೋಪುರ ಕಳಸ ಸ್ಥಾಪನೆಯನ್ನು ಮೇ 31ರಿಂದ ಜೂ 2ರವರೆವಿಗೆ ತಾಲೂಕಿನ ಭೀಮನಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿರುವುದಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ತಾ.ಸಮಾಜ ಕಲ್ಯಾಣಧಿಕಾರಿ ವೈ.ಆರ್.ಚೌದರಿ ಅವರು ತಿಳಿಸಿದ್ದಾರೆ. ಭಕ್ತಾದಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಗರ್ಭಗುಡಿಯ ಮತ್ತು ಪಂಚಲೋಹ ಉತ್ಸವ ಮೂರ್ತಿಗಳ ದಾನಿಗಳಾದ ಶ್ರೀಮತಿ ಯಲ್ಲಂಕಿ ಹನುಮಕ್ಕ ಮತ್ತು ಯಲ್ಲಂಕಿ ಯಂಗಣ್ಣ ಜ್ಞಾಪಕರ್ಥವಾಗಿ ಸೀತಾರಾಮ ಲಕ್ಷ್ಮಣ ದೇವರ ಉತ್ಸವವನ್ನು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಮೂರು ದಿನಗಳು ನಡೆಯುವ ಈ ಉತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ಆಂಜನೇಯ ಜಾತ್ರಾ ಮಹೋತ್ಸವ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ನೆಲಗೊಂಡನಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವವು ಜೂ.2 ಮತ್ತು 3ರಂದು ನಡೆಯಲಿದೆ. ಜೂ.2ರಂದು ಧ್ವಜಾರೋಹಣ, ಗಂಗಾಪೂಜೆ, ಆವಿಗೆ ಪೂಜೆ ಜೂ.3ರಂದು ಅಗ್ನಿಕುಂಡೋತ್ಸವ, ಗುರುಪರುವು ಹಾಗೂ ಸ್ವಾಮಿಯ ಅಂಬಾರಿ ಉತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

