ಉಡುಪಿ

ಕೊಂಕಣಿ ಲೇಖಕರ ಸಮ್ಮೇಳನ

Published On :

ಉಡುಪಿ: ರಾಕ್ಣೊ ವಾರಪತ್ರಿಕೆ ಅಮೃತೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್‌ನಲ್ಲಿ ಕೊಂಕಣಿ ಲೇಖಕರ ಸಮ್ಮೇಳನ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿದರು. ಸಂಪಾದಕರ ಜವಾಬ್ದಾರಿ, ಓದುಗರ ಪತ್ರ, ಪ್ರಭಾವಿತ ಓದುಗರು ಹಾಗೂ ಲೇಖನ ಬರೆಯುವುದರ ಬಗ್ಗೆ ಮಾಹಿತಿ, ತರಬೇತಿ, ಸಂವಾದ ನಡೆಯಿತು. ಕೊಂಕಣಿ ಪುಸ್ತಕ ಹಾಗೂ ಪತ್ರಿಕೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಲ್ಯಾಣಪುರ- ಮಿಲಾಗ್ರಿಸ್ ಕೆಥೆಡ್ರಲ್‌ನ ರೆಕ್ಟರ್ ಸ್ಟೇನಿ ಬಿ. ಲೋಬೊ ಗೌರವ ಅತಿಥಿಯಾಗಿ ಹಾಜರಿದ್ದರು. ಕೊಂಕಣಿ ಲೇಖಕರಾದ ಚೇತನ್ ಕಾಪುಚಿನ್, ಫಾ. ವಲೇರಿಯನ್ ಫೆರ್ನಾಂಡಿಸ್, ವಿಲ್ಫ್ರೆಡ್ ಲೋಬೊ ಪಡೀಲ್ ಹಾಗೂ ಜೆ.ಎಫ್. ಡಿಸೋಜ ಅತ್ತಾವರ್ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು. ಕಥೆಗಾರ, ಲೇಖಕ ಡಾ. ಜೆರಾಲ್ಡ್ ಪಿಂಟೊ (ಜೆರಿ ನಿಡ್ಡೋಡಿ) ಸ್ವಾಗತಿಸಿದರು. ರಾಕ್ಣೊ ಸಂಪಾದಕ ಫಾ. ಫ್ರಾನ್ಸಿಸ್ ರೊಡ್ರಿಗಸ್ ಪ್ರಸ್ತಾವನೆಗೈದರು. ರಾಕ್ಣೊ ಅಮೃತೋತ್ಸವ ಆಚರಣೆ ಸಮಿತಿ ಸಂಯೋಜಕ ಸಿರಿಲ್ ಜಿ. ಸಿಕ್ವೇರಾ ವಂದಿಸಿದರು. ಲೇಖಕ ವಾಲ್ಟರ್ ಸಿರಿಲ್ ಪಿಂಟೊ ನಿರೂಪಿಸಿದರು. ಲೇಖಕರಾದ ಲೂವಿಸ್ ಅಲ್ಮೇಡಾ ಮಣಿಪಾಲ, ಕ್ಯಾಥರಿನ್ ರೊಡ್ರಿಗಸ್ ಕಟ್ಪಾಡಿ, ಜಾರ್ಜ್ ಕ್ಯಾಸ್ತಲಿನೊ ನಕ್ರೆ ಹಾಗೂ ಡೊ. ಜೆರಾಲ್ಡ್ ಪಿಂಟೊ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. 125ರಷ್ಟು ಲೇಖಕ- ಲೇಕಕಿಯರು ಭಾಗವಹಿಸಿದ್ದರು. ರಾಕ್ಣೊ ಅಮೃತೋತ್ಸವ ಸಾಹಿತ್ಯ ಪ್ರಶಸ್ತಿ ಪ್ರದಾನ ಜತೆಗೆ ಅಮೃತೋತ್ಸವ ಸಮಾರೋಪ ಡಿ.15ರಂದು ಮಂಗಳೂರಿನಲ್ಲಿ ನಡೆಯಲಿದೆ.

ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು: ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.29ರಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಬ್ರಿ ವ್ಯಾಪ್ತಿಯ ಕಳ್ತೂರು, ಸಂತೆಕಟ್ಟೆ, ಕರ್ಜೆ, ಹೊಸೂರು, ಹಲುವಳ್ಳಿ, ಕನ್ನಾರು, ತಡಾಲು, ಕಂಗಿಬೆಟ್ಟು, ಬಲ್ಲೆಬೈಲು, ಕೆಂಜೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಬೈಲೂರು, ಉದ್ಯಾವರ, ಪಿತ್ರೋಡಿ, ಕಡೆಕಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ವಿದ್ಯುತ್ ನಿಲುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.