ಅಬಲೆಯರನ್ನು ಬಡಿಯುವ ಪೊಲೀಸ್
ಅಸಹಾಯಕ, ಒಂಟಿ ಅಬಲೆಯರನ್ನು ಹಾಗೂ ಮಹಿಳಾ ಸಂಘಟನೆಗಳಿಗೆ ಸೇರಿದವರನ್ನು ಬಡಿಯುವ ಪೈಶಾಚಿಕ ಪ್ರವೃತ್ತಿ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸ್ ವಲಯಗಳಲ್ಲಿ ಕಾಣಿಸಿಕೊಂಡಿದೆ.
ಕೆಲವು ದಿನಗಳ ಹಿಂದೆ ಪಂಜಾಬ್ನ ಇಬ್ಬರು ಪೊಲೀಸ್ ಪೇದೆಗಳು ಒಬ್ಬ ಅನಾಥ ಮಹಿಳೆಯನ್ನು ಹಿಗ್ಗಾ-ಮುಗ್ಗಾ ಥಳಿಸಿ ಬೀದಿಯಲ್ಲೇ ಬಡಿದಿದ್ದನ್ನು ಅನೇಕರು ನೋಡಿದ್ದಾರೆ. ಮಾಧ್ಯಮ ಪ್ರಪಂಚದಲ್ಲೂ ಅದು ವರದಿಯಾಗಿದೆ. ಹತ್ತು ದಿನಗಳ ಹಿಂದೆ ಬಿಹಾರದ ರಾಜಧಾನಿ ಪಟನಾದಲ್ಲಿ ಶಿಕ್ಷಕಿಯರು ತಮ್ಮ ನ್ಯಾಯವಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಪಡಿಸಿ ಒಂದು ಟೆಂಟ್ನಲ್ಲಿ ಪ್ರದರ್ಶನ ನಡೆಸುತ್ತಿದ್ದಾಗ ಹಲವಾರು ಪೊಲೀಸರು ಅವರ ಮೇಲೆ ದಾಳಿ ಮಾಡಿ ಹಿಗ್ಗಾ-ಮುಗ್ಗಾ ಲಾಠಿ ಚಾರ್ಜ್ ಮಾಡಿದ ಪ್ರಕರಣವೂ ವರದಿಯಾಗಿದೆ.
ಆದರೆ, ಈ ಪ್ರಕರಣಗಳಲ್ಲಿ ಯಾರೂ ದೂರು ಕೊಟ್ಟಿಲ್ಲ, ಯಾವ ತನಿಖೆಯೂ ನಡೆದಿಲ್ಲ. ಹಲವು ಮಾನವ ಹಕ್ಕುಗಳ ರಕ್ಷಣಾ ಸಂಘಟನೆಗಳು ಪ್ರದರ್ಶನ ನಡೆಸಿದ್ದು ಉಂಟು. ಈ ಪರಿಸ್ಥಿತಿಯನ್ನು ಗಮನಿಸಿದ ಸುಪ್ರೀಮ್ ಕೋರ್ಟ್ ಸ್ವಪ್ರೇರಣೆಯಿಂದ ತಾನೇ ಒಂದು ರಿಟ್ ಅರ್ಜಿಯನ್ನು ದಾಖಲಿಸಿಕೊಂಡು ಪಂಜಾಬ್, ಬಿಹಾರ ರಾಜ್ಯ ಸರ್ಕಾರಗಳಿಂದ ವಿವರಗಳನ್ನು ಕೇಳಿದೆ. ಈ ಪ್ರಕರಣದಲ್ಲಿ ಹಿರಿಯ ವಕೀಲ ಹರೀಶ ಸಾಳ್ವೆ ನ್ಯಾಯಾಲಯದ ಮಿತ್ರನಂತೆ ವರ್ತಿಸಲು ಒಪ್ಪಿದ್ದಾರೆ. ಸುಪ್ರೀಮ್ ಕೋರ್ಟಿನ ಇಂತಹ ಕ್ರಮಗಳಿಂದಲೇ ಸಂವಿಧಾನದಲ್ಲಿ ಇನ್ನೂ ನಮ್ಮ ಶೋಷಿತ ವರ್ಗಗಳ ನೊಂದ ಜನ ವಿಶ್ವಾಸವನ್ನು ಇಟ್ಟುಕೊಂಡಿರುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

