ಭೂ ಸ್ವಾಧೀನ: ಒಮ್ಮತವಿಲ್ಲ
ಈಗ ದೇಶದಲ್ಲಿ ಸಾರ್ವಜನಿಕ ಉದ್ದೇಶಗಳಿಗೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರವನ್ನು ಚಲಾಯಿಸುತ್ತಿರುವುದಕ್ಕೆ ಬಳಕೆಯಾಗುತ್ತಿರುವುದು ಬ್ರಿಟಿಷರ ಕಾಲದಲ್ಲಿ, ಅಂದರೆ 1894 ರಲ್ಲಿ ರಚನೆಯಾದ ಶಾಸನದ ಮೂಲಕ.
ಬದಲಾದ ದೇಶ-ಕಾಲ ಪರಿಸ್ಥಿತಿಗೆ ಅನುಗುಣವಾಗಿ ಈ ಕಾಯಿದೆ ಬದಲಾಗಲೇಬೇಕೆನ್ನುವ ಒತ್ತಾಯ ದೇಶದ ಎಲ್ಲ ಕಡೆಗಳಿಂದ, ಎಲ್ಲ ಪಕ್ಷಗಳಿಂದಲೂ ಕೇಳಿಬಂದಿದೆ. ಕೇಂದ್ರ ಸರ್ಕಾರ ಈ ಉದ್ದೇಶದಿಂದಲೇ ಕಾಯಿದೆಯ ಕರಡನ್ನು ತಯಾರಿಸಿದೆ.
ಆದರೆ ಅನೇಕ ವಿಚಾರಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡುವುದು ಕಷ್ಟವಾಗಿದೆ. ಒಮ್ಮತದಿಂದ ಕಾಯಿದೆಯನ್ನು ರೂಪಿಸುವ ದೃಷ್ಟಿಯಿಂದ ಸರ್ವಪಕ್ಷಗಳ ಸಮಿತಿಯೊಂದರ ರಚನೆಯೂ ಆಗಿದೆ. ಆದರೂ ಒಮ್ಮತ ಮೂಡುತ್ತಿಲ್ಲ, ಎಲ್ಲ ಪಕ್ಷಗಳೂ ಒಪ್ಪುವಂತಹ ವಿಧಿ-ನಿಯಮಗಳ ಸಂಖ್ಯೆ ಹಿಗ್ಗುತ್ತಿದ್ದರೂ, ಸರ್ವಸಮ್ಮತ ಸ್ವರೂಪದಲ್ಲಿ ಕರಡು ಕಾಯಿದೆ ಇನ್ನೂ ಸಿದ್ಧವಾಗಿಲ್ಲ. ಮಂಗಳವಾರದ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲೂ ಒಮ್ಮತವನ್ನು ರೂಪಿಸುವುದು ಸಾಧ್ಯವಾಗಲಿಲ್ಲ.
ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ದ ಸುಷ್ಮಾ ಸ್ವರಾಜ್, ಸರ್ಕಾರ ಭೂಸ್ವಾಧೀನಕ್ಕೇ ಒತ್ತು ಕೊಡುವುದಕ್ಕೆ ಬದಲಾಗಿ, ಪರ್ಯಾಯ ಕ್ರಮಗಳನ್ನೂ, ಉದಾಹರಣೆಗೆ ಭೂಮಾಲಿಕರಿಂದ ಭೂಮಿಯನ್ನು ಗುತ್ತಿಗೆಗೆ ಪಡೆಯುವಂತಹ ಕ್ರಮಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದ್ದಾರೆ.
ಒಂದು ಮಾತು ನಿಜ. ಈಗಿನ ಭೂ ಸ್ವಾಧೀನ ಪ್ರಕ್ರಿಯೆ ತೀರ ಕೆಟ್ಟಿದೆ. ಅದನ್ನು ತುರ್ತಾಗಿ ದುರಸ್ತಿ ಮಾಡುವ ಹೊಣೆಗಾರಿಕೆಯನ್ನು ಸಂಸತ್ತು ಹೊರಲೇಬೇಕು. ಸರ್ಕಾರದ್ದೇ ಅಂತಿಮ ಮಾತೇನೂ ಅಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

