ಸಂಪಾದಕೀಯ

ಮಂತ್ರಿ ಸ್ಥಾನದ ಗೌರವ ಉಳಿಸಿ

Published On :

ಈಚೆಗೆ ಬೆಳಗಾವಿಗೆ ಭೇಟಿ ನೀಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ಅವರು ಅಲ್ಲಿನ ಒಂದು ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡ ಭಾಷಿಕರನ್ನು ಕೆರಳಿಸಬಹುದಾದ ಹಲವು ವಾಕ್ಯಗಳಿದ್ದವು.
  ಈಗಾಗಲೇ ಈ ವಿಚಾರದಲ್ಲಿ ಗೊಂದಲವಾಗದೇ ಇದ್ದರೂ, ಸಾಕಷ್ಟು ಖಾರವಾದ ಪದಗಳ ವಿನಿಮಯ ನಡೆದಿದೆ. ಹಲವಾರು ಪತ್ರಿಕೆಗಳಲ್ಲಿ ಈ ಘಟನೆ ದೊಡ್ಡ ರೀತಿಯಲ್ಲೇ ಪ್ರಸ್ತಾಪವಾಗಿರುವುದೂ ನಿಜ. ಕರ್ನಾಟಕ ಪೊಲೀಸರು ನಿಯಮದಂತೆ, ಮಹಾರಾಷ್ಟ್ರದ ಗೃಹಮಂತ್ರಿ ಪಾಟೀಲರ ವಿರುದ್ಧ ಜನರ ಭಾವನೆಗಳನ್ನು ಕೆರಳಿಸುವಂತಹ ರೀತಿಯಲ್ಲಿ ಭಾಷಣ ಮಾಡಿದ ವಿಚಾರ ಕುರಿತು ಮೊದಲ ಮಾಹಿತಿಯನ್ನು ಸಲ್ಲಿಸಿದ್ದೂ ಆಗಿದೆ. ಈಗ ವಿವಾದ ಕರ್ನಾಟಕದಲ್ಲಿ ನ್ಯಾಯಾಂಗದ ಮುಂದಿದೆ. ಇದು ಮಹಾರಾಷ್ಟ್ರ ಸರ್ಕಾರಕ್ಕೆ ನಿಜವಾಗಲೂ ನುಂಗಲಾಗದ ತುತ್ತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ವಿಚಾರದ ಪ್ರಸ್ತಾಪವಾಗಿ ಹಲವು ಸದಸ್ಯರು ತೀವ್ರ ಸ್ವರೂಪದ ಭಾಷಣಗಳನ್ನು ಮಾಡಿದರೂ, ಕಾಯಿದೆಯ ಜ್ಞಾನವಿರುವ ಹಲವು ಹಿರಿಯರ ಸಲಹೆ ಮೇರೆಗೆ, ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಂತ್ರಿಯ ವಿರುದ್ಧ ಕರ್ನಾಟಕ ಸರ್ಕಾರದ ಪೊಲೀಸರು ಹೂಡಿರುವ ಮೊದಲ ಮಾಹಿತಿಯ ವರದಿಯನ್ನು ಹಿಂದಕ್ಕೆ ಪಡೆದು ಪ್ರಕರಣವನ್ನು ಅಲ್ಲಿಗೇ ಮುಗಿಸಬೇಕೆನ್ನುವ ಸಲಹೆ ಅಂಗೀಕೃತವಾಗಿದೆ.
  ಅದೇನೂ ದೊಡ್ಡ ವಿಷಯವಲ್ಲ. ಉಭಯ ರಾಜ್ಯಗಳ ನಡುವೆ ಮಧುರ ಬಾಂಧವ್ಯದ ದೃಷ್ಟಿಯಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಮಂತ್ರಿಗಳಾದವರು ವಿವಾದಗಳಲ್ಲಿ ಪಾಲುಗೊಳ್ಳಲೇ ಬೇಕಾದರೆ ಮಂತ್ರಿ ಸ್ಥಾನದ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಆ ಪಾಠವನ್ನು ಎಲ್ಲ ಮಂತ್ರಿಗಳೂ ಕಲಿಯಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.