ಸಂಪಾದಕೀಯ

ಹೂಳೆತ್ತುವಿಕೆ ಆಗಲಿ

Published On :

ಈಗ ಬೇಸಿಗೆ ಧಗೆ ಎಲ್ಲೆಡೆ ಇದ್ದು, ದಿನೇ ದಿನೇ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದಕ್ಕೆ ನಾವು ಮರಗಿಡಗಳನ್ನು ಸಾಕಷ್ಟು ಬೆಳೆಸದೇ ಇರುವುದು ಹಾಗೂ ಕಾಡು ಪ್ರದೇಶವನ್ನು ಅಕ್ರಮವಾಗಿ ಕಬಳಿಸುವುದು ಸಕಾರಣವಾಗಿದೆ. ಇದರಿಂದಾಗಿ ನೀರಿಗೆ ಬರಗಾಲ ಎಲ್ಲೆಡೆ ಕಂಡು ಬರುತ್ತಿದೆ. ಬಾವಿಗಳು, ಕೊಳವೆ ಬಾವಿಗಳು, ನದಿಗಳು ನೀರಿಲ್ಲದೇ ಒಣಗುತ್ತಿದೆ. ಇದಕ್ಕೆ ಭೂಮಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಕಾರಣವಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಕಳೆದ 10 ವರ್ಷಗಳಲ್ಲಿ ಏಪ್ರಿಲ್ ತಿಂಗಳಲ್ಲಿ ನೀರಿರುತ್ತಿದ್ದ ನೀರಿನ ಮಟ್ಟದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದ್ದು, ಬೆಂಗಳೂರು, ಮೈಸೂರು, ಮಂಡ್ಯ ನಗರಗಳಲ್ಲಿ ಕುಡಿಯಲು ನೀರಿನ ಅಭಾವವಾಗುವ ಸಂಭವ ಜಾಸ್ತಿ ಇದೆ. ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಸಾಕಷ್ಟು ಫಲವತ್ತಾದ ಮಣ್ಣು ಶೇಖರಣೆಯಾಗಿದ್ದು, ಹೂಳು ಇರುವುದರಿಂದ ಕಾವೇರಿ ನೀರಿನ ಸಂಗ್ರಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಈಗಿರುವ ಅಳತೆಯಂತೆ ನಿಗದಿಪಡಿಸುವ ನೀರಿನ ಸಂಗ್ರಹಣೆಯಲ್ಲಿ ವ್ಯತ್ಯಯವಾಗುವ ಸಂದರ್ಭಗಳು ಜಾಸ್ತಿ ಇದೆ. ಆದ್ದರಿಂದ ಈಗ ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಕಡಿಮೆ ನೀರಿರುವಾಗಲೇ ಅಣೆಕಟ್ಟಿನಲ್ಲಿರುವ ಶೇಖರಣೆಯಾದ ಫಲವತ್ತಾದ ಮಣ್ಣು ಹಾಗೂ ಹೂಳೆತ್ತುವ ಕಾರ್ಯವನ್ನು ಸರ್ಕಾರವು ಪ್ರಥಮಾದ್ಯತೆ ಮೇರೆಗೆ ತೀರ್ಮಾನ ಕೈಗೊಂಡು, ಈಗಿನ ಆಧುನಿಕ ಜೆಸಿಬಿ ಮೂಲಕ ಅಗೆದು ತೆಗೆದು ಸುತ್ತಮುತ್ತಲಿನ ರೈತರಿಗೆ ನೀಡಿದರೆ, ರೈತರಿಗೆ ಹಾಗೂ ನೀರಿನ ಸಂಗ್ರಹಣೆಯಲ್ಲಿ ಗಮನಾರ್ಹವಾಗಿ ಹೆಚ್ಚಿನ ನೀರನ್ನು ಸಂಗ್ರಹಿಸಬಹುದಾಗಿದೆ. ಈ ಬಗ್ಗೆ ಸರ್ಕಾರವು ಏಕೆ ಗಮನ ಹರಿಸಬಾರದು.
-ಎಂ.ಎಸ್. ರಮೇಶ್, ಬೆಂಗಳೂರು

ಸೆಕ್ಯುರಿಟಿ ಗಾರ್ಡ್‌ಗಳ ಅತಿ ದುಡಿತ
ಏಜೆನ್ಸಿಗಳು ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಂಡು ಮಾಲೀಕರಿಗೆ 8 ಗಂಟೆ ಕೆಲಸ ಎಂದು ಹೇಳಿ ನಮಗೆ 12 ಗಂಟೆಗಳ ಕೆಲಸ ಕೊಡುತ್ತಾರೆ. ಮಾಲಿಕರು ಗಾರ್ಡ್‌ಗೆ 10ರಿಂದ 18 ಸಾವಿರದವರೆಗೆ ವೇತನ ಕೊಡುತ್ತಾರೆ. ಆದರೆ ಏಜೆನ್ಸಿಗಳು ನಮಗೆ 5ರಿಂದ 6 ಸಾವಿರ ಕೊಡುತ್ತವೆ. ರಜಾ ಸೌಲಭ್ಯ ಇಲ್ಲ. ಓಟಿ ಮಾಡಿದರೆ ಹೆಚ್ಚಿನ ವೇತನವಿಲ್ಲ. ಜಾಸ್ತಿ ಮಾತನಾಡಿದರೆ ಸಂಬಳ ಕೊಡೊಲ್ಲ. ಈ ಎಲ್ಲ ವಿಷಯಗಳಿಗೆ ನಾವು ಯಾರನ್ನು ಕಾಣಬೇಕು? ಕಾರ್ಮಿಕ ಇಲಾಖೆಯವರು ನಮ್ಮನ್ನು ಕೇಳುವುದಿಲ್ಲ. ಸೆಕ್ಯುರಿಟಿ ಕೆಲಸದಲ್ಲಿ 24 ಗಂಟೆ ದುಡಿದರೂ ವಿರಾಮವಿಲ್ಲ. ಪುನಃ ಕೆಲಸಕ್ಕೆ ಬರಬೇಕು. ಯಾವುದೇ ಸೌಲಭ್ಯಗಳೂ ಇಲ್ಲ. ಮುಂಗಡ ಹಣ ಕೇಳುವಂತಿಲ್ಲ.
-ಇಂತಿ ನೊಂದ ಗಾರ್ಡ್‌ಗಳು
ಸಿದ್ದಪ್ಪ, ಗುರುಪ್ರಕಾಶ್, ಶಿವಸ್ವಾಮಿ, ವೆಂಕಟೇಶ್, ನರಸಿಂಹರಾಜು, ಸತ್ಯಪ್ರಕಾಶ್ ಮತ್ತಿರರು. ಬೆಂಗಳೂರು.
ನುಡಿನಮನ
    ಭೂ ನಿವಾಸ ತೊರೆದು
    ಶ್ರೀ ನಿವಾಸ ಸೇರಿದೆ
    ಭವ ನಿನಗೆ ಹಿಂಗಿತು
    ಮಧುರ ಗಾಯನ ಮೆರೆದು
    ಕಂಠಸಿರಿ ತೋರಿದೆ
    ಬುವಿ ನಿನಗೆ ಬಾಗಿತು.
-ಎಚ್.ಆನಂದರಾಮಶಾಸ್ತ್ರಿ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.