ಪಂಚಾಯಿತಿ ರಾಜ್ಯ: ಬೆಳ್ಳಿ ಹಬ್ಬ
ಸುಮಾರು 25 ವರ್ಷಗಳ ಹಿಂದೆ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಂಚಾಯಿತಿ ರಾಜ್ಯಕ್ಕೆ ಸಂಬಂಧಿಸಿದಂತೆ, ಅಧಿಕಾರದ ವಿಕೇಂದ್ರೀಕರಣದಲ್ಲಿ ಬಹುಮುಖ್ಯ ಹೆಜ್ಜೆ ಎನ್ನುವಂತಿರುವ ಸಂವಿಧಾನದ ಮಾರ್ಪಾಟಿನ ವಿಧಿ ಏಪ್ರಿಲ್ 24 ರಂದು ಜಾರಿಗೆ ಬಂದಿತ್ತು. ಇಡೀ ದೇಶ ಈ ದಿನವನ್ನು ಒಂದು ದೊಡ್ಡ ಹಬ್ಬದ ರೀತಿಯಲ್ಲಿ ಆಚರಿಸಬೇಕಾದ ಅಗತ್ಯವಿದ್ದರೂ, ದೇಶದಲ್ಲಿ ಹೇಳಿಕೊಳ್ಳುವ ಸಂಭ್ರಮವೇನೂ ಕಂಡುಬಂದಿಲ್ಲ. ಪಂಚಾಯಿತಿ ರಾಜ್ಯ ವ್ಯವಸ್ಥೆಯ ಸಾಧನೆ, ಸೋಲನ್ನು ಕುರಿತ ಅಧ್ಯಯನ ನಡೆಸಿದ ರಾಜೀವ ಗಾಂಧಿ ಮಿತ್ರ, ಮಾಜಿ ಸಚಿವ ಮಣಿಶಂಕರ ಅಯ್ಯರ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ವ್ಯವಸ್ಥೆಯ ದುರವಸ್ಥೆಯನ್ನು ಚಿತ್ರಿಸಿದೆ.
ಆ ಸಮಿತಿಯ ಅಧ್ಯಕ್ಷ ಮಣಿಶಂಕರ ಅಯ್ಯರ್ ಅವರ ಪ್ರಕಾರ ಪಂಚಾಯಿತಿ ರಾಜ್ಯ ವ್ಯವಸ್ಥೆ ಅಧಿಕಾರದ ವಿಕೇಂದ್ರೀಕರಣ ಆಗದೇ ಇರುವ ಸನ್ನಿವೇಶದಲ್ಲಿ ಸರಪಂಚ ರಾಜ್ಯ ವ್ಯವಸ್ಥೆಯಾಗಿ ಪರಿವರ್ತನೆಯಾದಂತಿದೆ.
ವಾಸ್ತವದಲ್ಲಿ ಅಧಿಕಾರ ಇಂದಿಗೂ ಅಧಿಕಾರಿಗಳ ಕೈಯಲ್ಲೇ ಇದೆ. ಪಂಚಾಯಿತಿಗಳನ್ನು ಬಲಪಡಿಸಿರುವುದು ಕೇವಲ ಕಾಗದದ ಮೇಲಷ್ಟೇ. ಆ ಸಮಿತಿಯ ವರದಿಯ ಪ್ರಕಟಣೆ ಬುಧವಾರ. ಈ ಸಮಯದಲ್ಲೇ ಸಂಸತ್ತಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನಿರಾಶಾದಾಯಕ ಸ್ವರೂಪದ ಆಡಿಟರ್ ಜನರಲ್ರ ವರದಿಯನ್ನು ಸರ್ಕಾರ ಮಂಡಿಸಿದೆ. ಈ ವರದಿಯೂ ಸರ್ಕಾರವನ್ನು ಬಡಿಯಲು ಪ್ರತಿಪಕ್ಷಗಳಿಗೆ ಸಿಕ್ಕ ಇನ್ನೊಂದು ಬಡಿಗೆಯಂತೆ ಆಗಿದೆ. ಸರ್ಕಾರವನ್ನು ಬಡಿಯಬಹುದು. ಆದರೆ ಪಂಚಾಯಿತಿಗಳ ಗತಿ ಹೇಳಿ ಎನ್ನುವುದಕ್ಕಾದರೂ ಸಂಸತ್ತಿನ ಕಾರ್ಯ ಕಲಾಪ ನಡೆಯಬೇಕಲ್ಲಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

