ಸಂಪಾದಕೀಯ

ಸಕ್ಕರೆ ಉದ್ಯಮದ ದುಸ್ಥಿತಿ

Published On :

ಇಡೀ ದೇಶದಲ್ಲಿ ಪ್ರಮುಖ ಸಕ್ಕರೆ ರಾಜ್ಯಗಳಲ್ಲಿ, ಸಕ್ಕರೆ ಉದ್ಯಮದ ಸ್ಥಿತಿಗತಿ ಕುರಿತ ದೊಡ್ಡ ಚರ್ಚೆಯೇ ನಡೆದಿದೆ. ಇದು ಕೇವಲ ಕಬ್ಬಿನ ಪೂರೈಕೆಗೆ ಸಂಬಂಧಿಸಿದ ವಿಚಾರ ಅಲ್ಲ. ಇಡೀ ಉದ್ಯಮ ಎದುರಿಸುತ್ತಿರುವ ಸಮಗ್ರ ಸ್ವರೂಪದ ದುಸ್ಥಿತಿಯ ಸಮಸ್ಯೆ.
ಕರ್ನಾಟಕದಲ್ಲೇ ಈಗ ಕೆಲವು ಸಕ್ಕರೆ ಕಾರ್ಖಾನೆಗಳು, ಪ್ರಧಾನವಾಗಿ ಸಹಕಾರ ವಲಯದ ಕಾರ್ಖಾನೆಗಳು, ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿರುವುದೂ ನಿಜ. ಹಿಂದೆ, ಅತ್ಯುತ್ಸಾಹದಿಂದ ಸರ್ಕಾರವೇ ಕೆಲವು ಕಾರ್ಖಾನೆಗಳನ್ನು ಆರಂಭಿಸಿ, ಅವುಗಳಲ್ಲಿ ಕೆಲವು ಸ್ಥಗಿತವಾಗಿವೆ.
ಎರಡು ಸಕ್ಕರೆ ತಯಾರಿಕಾ ಘಟಕಗಳಲ್ಲಿ ಕಾರ್ಮಿಕರಿಗೆ ಕೊಡಬೇಕಾದ ವೇತನದ ಬಾಕಿಯನ್ನು ಕೊಡುವುದಕ್ಕೆ ಆಗಿಲ್ಲ.
ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಸರ್ಕಾರಿ ಸಕ್ಕರೆ ಕಾರ್ಖಾನೆಗಳನ್ನು ಗುತ್ತಿಗೆಗೆ ವಹಿಸಿಕೊಡಲು ಜಾಹಿರಾತು ಮಾಡಿದರೂ, ಉದ್ಯಮಿಗಳು ಯಾರೂ ಮುಂದೆ ಬಂದಿಲ್ಲ, ಹೀಗಾಗಿ ಆ ಕಾರ್ಖಾನೆಗಳನ್ನು ಈಗಿರುವ ಸ್ಥಿತಿಯಲ್ಲೇ ಹರಾಜು ಹಾಕಲು ನಿರ್ಧರಿಸಲಾಗಿದೆ ಎಂದು ವಿಧಾನ ಮಂಡಲದಲ್ಲೇ ಪ್ರಕಟಿಸಲಾಗಿದೆ.
ಇದು ರಾಜ್ಯದಲ್ಲಿ ಸಕ್ಕರೆ ಉದ್ಯಮದ ಒಂದು ನಗ್ನ ಚಿತ್ರ. ಆದರೆ ಎಲ್ಲ ಸಕ್ಕರೆ ಕಾರ್ಖಾನೆಗಳ ಸ್ಥಿತಿಯೂ ಹೀಗೇ ಇದೆ ಎಂದೇನೂ ಅಲ್ಲ. ಚೆನ್ನಾಗಿ ನಡೆದು ಲಾಭ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆಗಳೂ ಇವೆ. ಆದರೂ ಈಗ ಉದ್ಯಮವನ್ನು ಕಾಡಿರುವ ಸಮಸ್ಯೆಗಳ ಪರಿಹಾರದತ್ತ ಗಮನಹರಿಸುವುದು ಸೂಕ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.