ಹುಡುಗೀರು ಪ್ರೇಮಪತ್ರಕ್ಕಿಂತ ಎಸ್ಸೆಮ್ಮೆಸ್ಸನ್ನೇ ಜಾಸ್ತಿ ಇಷ್ಟಪಡೋದೇಕೆ?

Updated on: 

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹುಡುಗೀರು ಪ್ರೇಮಪತ್ರಕ್ಕಿಂತ ಎಸ್ಸೆಮ್ಮೆಸ್ಸನ್ನೇ ಜಾಸ್ತಿ ಇಷ್ಟಪಡೋದೇಕೆ?
ಪ್ರೇಮಪತ್ರ ಬ್ಯಾಕ್‌ವರ್ಡ್, ಎಸ್‌ಎಂಎಸ್ ಫಾರ್‌ವರ್ಡ್!



ಸರಸ್ವತಿ ರಮೇಶ್-ಹನುಮನಾಳ
ಕೇರಿ ಜಗಳ -ಊರು ಜಗಳ ನಿಂತರೂ ಅತ್ತೆ-ಸೊಸೆ ಜಗಳ ನಿಲ್ಲುವುದಿಲ್ಲವೇಕೆ?
ಜಗಳ ಬಿಡಿಸಲು ಮಧ್ಯೆ ಯಾರೂ ನಿಂತಿರುವುದಿಲ್ಲವಲ್ಲ!



ಪವನಕುಮಾರ್, ಕೆ.ವಿ., ಬಳ್ಳಾರಿ
ಪ್ರತೀ ಪುರುಷನ ಯಶಸ್ಸಿನ ಹಿಂದೆ ಸ್ತ್ರೀ ಇರುತ್ತಾಳೆ ಎನ್ನುವರು. ಅಂತಹ ಸ್ತ್ರೀ ಹಿಂದೆ ಇರುವವರು ಯಾರಿಗೂ ಕಾಣದೆ ಉಳಿಯುವುದೇಕೆ?
ಅದು ಪರಸ್ತ್ರೀ ಇರಬೇಕು!



ಕೆ.ಎಂ. ಲಿಂಗರಾಜು, ನಂಜನಗೂಡು 9916021365
ಈಗಿನ ಸೂಪರ್‌ಸಾನಿಕ್ ಯುಗದಲ್ಲೂ ಕಾಂಗ್ರೆಸ್ ನಾಯಕರು ಕಾಲ್ನಡಿಗೆ ಮೇಲೆ ನಂಬಿಕೆ ಇಟ್ಟಿದ್ದಾರಲ್ಲಾ?
'ಕೈ'ಯಲ್ಲಾಗದ್ದಕ್ಕೆ ಕಾಲಿಗೆ ಬುದ್ಧಿ ಹೇಳ್ತಿದ್ದಾರೆ!



ಶೋಭಾ ಎಂ.ಆರ್. ಶಾಂತಿಗ್ರಾಮ, ಹಾಸನ
ಗಂಡು-ಹೆಣ್ಣು ಇಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಆ ತಪ್ಪನ್ನು ಹೆಣ್ಣಿನ ಮೇಲೆ ಹೇರುತ್ತಾರಲ್ಲಾ ಯಾಕೆ?
ಹೆಣ್ಣಿಗೆ ಹೊರುವ ಶಕ್ತಿ ಜಾಸ್ತಿ, ಭೂಮಿಯೇ ಹೆಣ್ಣಲ್ಲವೇ!


 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com