ಹರಳಹಳ್ಳಿ ಪುಟ್ಟರಾಜು, 9632838088
ಮನಸ್ಸಿನಲ್ಲಿರೋದು ಹೊರಬರೋಕೆ ಆಲ್ಕೋಹಾಲೇ ಬೇಕೆ?
ಹೊಟ್ಟೆಯಲ್ಲಿದ್ದಿದ್ದು ಹೊರಬರೋಕೂ ಅದನ್ನೇ ಓವರ್ಡೋಸ್ನಲ್ಲಿ ತೆಗೆದುಕೊಳ್ಳಬಹುದು.
ಆರೀಫ್ ದಾವಣಗೆರೆ 9964280609
ಕೆಲ ಹುಡುಗಿಯರು ಪ್ರೀತಿಸುವ ಹುಡುಗನ ಬಳಿ ವೇದಾಂತಿಗಳ ಹಾಗೆ ಮಾತಾಡ್ತಾರಲ್ಲಾ?
ಮದುವೆ ನಂತರ ಜೀವನಪೂರ್ತಿ ವೇದಾಂತಿಯಾಗೋ ಸರದಿ ಹುಡುಗನದ್ದಲ್ಲವಾ, ಅದ್ಕೆ!
ವಾದಿರಾಜ ಜಿ. ರಾಯ್ಕರ್
ಕಾಮವೇಕೆ ಕಾಳ್ಗಿಚ್ಚಿನಂತೆ ಉರಿಯುತ್ತಿದೆ?
ಅದೇನೋ ಹೇಳ್ತಾರಲ್ಲ, ಆರೋಕೆ ಮುಂಚೆ ಉರಿ ಜೋರು ಅಂತ!
ಫ್ಯಾಷನ್ ಡಿಸೈನರ್ ಮಧು, 9945737427
ಎಲ್ಲವನ್ನೂ ಮೀರಿದ ಅವ್ಯಕ್ತ ಭಾವನೆ ಮಾತ್ರ ಪವಿತ್ರ ಪ್ರೇಮ ಆಗಲು ಸಾಧ್ಯ ಅಲ್ಲವಾ?
ಹೇಳೋಕಾಗಲ್ಲ, ಇದು ವ್ಯಕ್ತಪಡಿಸಲಾಗದ ವಿಷಯ!
ವಿ. ಹೇಮಂತಕುಮಾರ್, 9035992900
ಪ್ರೇಮಿಗಳು ನಡೆದುಕೊಂಡೇ ಹೋಗಿದ್ದರೂ ಮನೆಬಿಟ್ಟು ಓಡಿ ಹೋದರು ಅಂತಾನೆ ಹೇಳ್ತಾರಲ್ಲ?
ಬಿಡ್ತು ಅನ್ನು, ಈಗಿನವರು ಕಾರ್ ಇರೋದು ಕನ್ಫರ್ಮ್ ಆದ್ಮೇಲೇ ಲವ್ ಮಾಡೋದು. ನಡೆಯೋ, ಓಡೋ ಮಾತೇ ಇಲ್ಲ.
- ಬಾಣಭಟ್ಟ