ಸುಂದರವಾದ ಹೆಣ್ಣನ್ನು ಕಣ್ಣೆತ್ತಿ ನೋಡದ ಗಂಡು ಇದ್ದಾನಾ?
ಸುಂದರವಾದ ಹೆಣ್ಣನ್ನು ಕಣ್ಣೆತ್ತಿ ನೋಡದ ಗಂಡು ಇದ್ದಾನಾ?
ಇದ್ದಾರೆ. ಆದರೆ ಅವರು ಗಂಡು ಹೌದೋ ಅಲ್ಲವೋ ಗೊತ್ತಿಲ್ಲ.
ತಲವಾಟ್ ಮಂಜುನಾಥ, ಸಾಗರ, 9480931611
ಮುನಿಸಿಕೊಂಡ ಹೆಂಡತಿಯ ಮುಖವರಳಿಸಲು ಏನು ಮಾಡಬೇಕು?
'ಮುದುಡಿದ ತಾವರೆ ಅರಳಿತು' ಸಿನಿಮಾ ತೋರಿಸಿ ಟ್ರೈ ಮಾಡಿ.
ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ಕನ್ನಡದ ಕೋಟ್ಯಾಧಿಪತಿ ಪುನೀತ್ ಕೇಳುವ ಪ್ರಶ್ನೆಗೂ ನಾವು ಕೇಳುವ ಪ್ರಶ್ನೆಗೂ ವ್ಯತ್ಯಾಸವೇನು?
ಪುನೀತ್ ಪ್ರಶ್ನೆಗೆ ಉತ್ತರಿಸಿದರೆ ನಗದು, ನಿಮ್ಮ ಪ್ರಶ್ನೆಗೆ ಉತ್ತರಿಸಿದರೆ ನಗು.
ಜಗದೀಶ ಎಸ್. ಬೆಳಗಾವಿ, 8722444410
ಮೋಡ ಕಪ್ಪಾದರೆ ಮುಂಗಾರು ಮಳೆ. ಹುಡುಗಿಯ ಕೆನ್ನೆ ಕೆಂಪಾದರೆ?
ಮುತ್ತುಗಳ ಸುರಿಮಳೆ.
ಜಗದೀಶ ಎಸ್. ಬೆಳಗಾವಿ, 8722444410
ತಂದೆ-ತಾಯಿ ಕೈ ತುತ್ತನ್ನೇ ಮರೆತು ಮುತ್ತು ಕೊಡೋ ಹುಡುಗರ ಹಿಂದೆ ಹೋಗೋ ಹುಡುಗಿಯರಿಗೆ ನಿಮ್ಮ ಕಿವಿ ಮಾತೇನು?
ಬಟ್ಟೆ ತೆಗೆಯೋನು ಬಂದಾಗ, ಬಟ್ಟೆ ಹಾಕೋದು ಕಲಿಸಿದೋಳ್ನ ಮರೀಬೇಡಿ!
ಆರೀಫ್ (ಅಪ್ಪು) ದಾವಣಗೆರೆ, 9964280609
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

