ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಈ ಅಂಕಣದಲ್ಲಿ ಯಾವತ್ತೂ ಚಟುವಟಿಕೆಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳುತ್ತ ಬಂದಿರುವ ಕೊಕ್ಕಡ ವೆಂಕಟ್ರಮಣ ಭಟ್ಟರು 'ಪತ್ರಪ್ರಭ'ದಲ್ಲಿ ಆಗಿರುವ ತಪ್ಪೊಂದರ ಬಗ್ಗೆ ತಮಾಷೆ ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ತಕರಾರು ಹೀಗಿದೆ- 'ಅಖಿಲೇಶ್ ಯಾದವ್ ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದಾರೆಯೇ? ಹೀಗೊಂದು ಜಿಜ್ಞಾಸೆ ಉಂಟುಮಾಡಿದ್ದು ಜುಲೈ 2ರ ಪತ್ರಪ್ರಭದಲ್ಲಿ ಪ್ರಕಟವಾದ ಕೌಸಲ್ಯಾದೇವಿ ಅವರ ಪತ್ರ! ಮ. ಪ್ರ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಂದು ಪತ್ರದಲ್ಲಿ ದಾಖಲಾಗಿದೆ. ಇದು ಕೌಸಲ್ಯಾದೇವಿಯವರ ತಪ್ಪು ಮಾಹಿತಿಯೋ ಅಥವಾ ಕಚೇರಿಯೊಳಗೆ ಆದ ಪ್ರಮಾದವೋ ಹೇಳಲಾರೆ! ನನಗೆ ತಿಳಿದಂತೆ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಮ.ಪ್ರ. ಎಂದರೆ ಮಧ್ಯಪ್ರದೇಶವೆಂದುಕೊಳ್ಳುತ್ತೇನೆ. ರಾಜ್ಯದ ಮುಖ್ಯಮಂತ್ರಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿ ಮತ್ತೊಂದು ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಸಾಧ್ಯವಿಲ್ಲ. ಸರ್ಕಾರಿ ನೌಕರರನ್ನು, ಅಧಿಕಾರಿಗಳನ್ನು ವರ್ಗಾವಣೆ, ಸ್ಥಾನಾಂತರ ಮಾಡುವ ಪ್ರವೃತ್ತಿ ಇದೆ. ಮಂತ್ರಿಗಳಿಗೆ ಪದಾಂತರ, ಸ್ಥಾನಾಂತರವಿದೆಯೇ ವಿನಾ ಮತ್ತೊಂದು ರಾಜ್ಯದ ಮಂತ್ರಿಯನ್ನಾಗಿಸುವ 'ಕರಾಮತ್ತು' ಸಾಧ್ಯವಿಲ್ಲ ಎಂದುಕೊಳ್ಳುತ್ತೇನೆ. ತಪ್ಪನ್ನು ತಿದ್ದಿಕೊಳ್ಳೋಣ ಅಲ್ಲವೆ!' ಎಂದಿದ್ದಾರೆ.
ವೆಂಕಟ್ರಮಣ ಭಟ್ ಅವರ ಗ್ರಹಿಕೆ ಸರಿಯಾಗಿಯೇ ಇದೆ. ಇದು ಯಾರ ಕಡೆಯಿಂದ ಆದ ತಪ್ಪು ಎಂಬ ಪ್ರಶ್ನೆ ಬರದು. ಲೇಖಕರೇ ತಪ್ಪಾಗಿ ಬರೆದಿದ್ದರೂ ಅದನ್ನು ಪ್ರಕಟಿಸುವಾಗ ಸರಿಪಡಿಸಬೇಕಾದ ಹೊಣೆ ಪುಟ ನಿರ್ವಹಣೆ ಹೊತ್ತವರದ್ದು. ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂಬುದು ಸಾಮಾನ್ಯ ಜ್ಞಾನ. ಹೀಗಾಗಿ ಆ ಬಗ್ಗೆ ಚೌಕಾಶಿಗಿಳಿಯದೆ ತಪ್ಪು ನಮ್ಮದೆ, ತಿದ್ಕೋತೀವಿ ಎನ್ನುತ್ತೇವೆ. ಇಂಥ ತಪ್ಪುಗಳು ಉಳಿದುಕೊಳ್ಳುವುದು ಅಪೇಕ್ಷಣೀಯವಲ್ಲ ಎಂಬ ಗಟ್ಟಿಧ್ವನಿಯನ್ನು ನಮಗೆ ಮುಟ್ಟಿಸಲೆಂದೇ ಕೊಕ್ಕಡ ಭಟ್ಟರು ತುಸು ವ್ಯಂಗ್ಯಧಾಟಿಯ ಮೊರೆ ಹೋಗಿದ್ದಾರೆ ಎಂಬುದನ್ನೂ ನಮ್ಮ ಸಂಪಾದಕೀಯ ತಂಡ ಅರ್ಥಮಾಡಿಕೊಳ್ಳುತ್ತದೆ.
ಬೆಂಗಳೂರಿನ ವಿ. ಹೇಮಂತಕುಮಾರ್ ಬರೆಯುತ್ತಾರೆ- 'ಜೂನ್ 30ರ ಸಾಪ್ತಾಹಿಕ ಪ್ರಭದಲ್ಲಿ 'ಪೊಲೀಸರ ಸಾಹಿತ್ಯ ಬೇಟೆ' ಶೀರ್ಷಿಕೆಯ ಲೇಖನದಲ್ಲಿ ಬೀchi ಅವರು ಪೊಲೀಸ್ ಇಲಾಖೆಯಲ್ಲಿ ಅಟೆಂಡರ್ ಆಗಿದ್ದರು ಎಂದು ಪ್ರಕಟವಾಗಿದೆ. ನನಗೆ ತಿಳಿದಂತೆ ಹಾಸ್ಯಬ್ರಹ್ಮ ಬೀchi ಅವರು ಪೊಲೀಸ್ ಇಲಾಖೆಯಲ್ಲಿ ಸುಪರಿಂಟೆಂಡೆಂಟ್ ಆಗಿದ್ದರು. ಹಾಸ್ಯ ಸಾಹಿತಿಯಾಗಿದ್ದ ಅವರು ಕರ್ತವ್ಯದಲ್ಲಿ ತುಂಬ ಸ್ಟ್ರಿಕ್ಟ್ ಹಾಗೂ ಮುಲಾಜಿಗೆ ಒಳಗಾಗದೆ ಕರ್ತವ್ಯದಲ್ಲಿ ಶಿಸ್ತು ಪಾಲಿಸುವವರಾಗಿದ್ದರು. ¸ಬೀchi ಯವರು ಸುಪರಿಂಟೆಂಡೆಂಟ್ ಆಗಿದ್ದರೇ ಹೊರತು ಎಂದೂ ಅಟೆಂಡರ್ ಆಗಿರಲಿಲ್ಲ' ಎಂದಿದ್ದಾರೆ.
ನಿಜ. ಬೀchi ಯುವರು ಅಟೆಂಡರ್ ಆಗಿದ್ದರು ಎಂದು ಬರೆದಿರುವುದು ಸೂಕ್ತವಲ್ಲ. ಅಂತೆಯೇ ಎಂದೂ ಅಟೆಂಡರ್ ಆಗಿರಲೇ ಇಲ್ಲ ಎನ್ನುವಂತೆಯೂ ಇಲ್ಲ. ವಿಕಿಪೀಡಿಯಾದಲ್ಲಿ ಅವರ ಕುರಿತ ಮಾಹಿತಿಯಲ್ಲಿ, 'ಎಸ್‌ಎಸ್‌ಎಲ್‌ಸಿ ಮುಗಿಸುತ್ತಲೆ ಅಟೆಂಡರ್ ಆಗಿ ಸರ್ಕಾರಿ ಕೆಲಸಕ್ಕೆ ಸೇರಿದರು. ನಂತರ ಸಿಐಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರು' ಎಂದಿದೆ. ಲೇಖಕರೂ ಇದೇ ಮಾಹಿತಿ ಆಧಾರವಾಗಿರಿಸಿಕೊಂಡು ಬರೆದಿದ್ದಾರೆ.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.