ಸಂಪಾದಕೀಯ

ಸಿಗರೇಟಿನ ಮೇಲೆ 'ಆರೋಗ್ಯಕ್ಕೆ ಹಾನಿಕರ' ಅಂತ ಬರೆಯುವಂತೆ...

Published On :

ಫ್ಯಾಷನ್ ಡಿಸೈನರ್ ಮಧು, 9945737427
ಸಿಗರೇಟಿನ ಮೇಲೆ 'ಆರೋಗ್ಯಕ್ಕೆ ಹಾನಿಕರ' ಅಂತ ಬರೆಯುವಂತೆ, ಪ್ರೀತಿಯ ಮೇಲೆ 'ಹೃದಯಕ್ಕೆ ಹಾನಿಕರ' ಅಂತ ಬರೆಯೋದಿಲ್ವಲ್ಲ ಯಾಕೆ?
ಯಾಕೆಂದರೆ ಪ್ರೀತಿ ಯಾವುದೇ ಪ್ಯಾಕ್‌ನಲ್ಲಿ ಮಾರಾಟಲಾಗಲ್ವಲ್ಲ!

ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಸರ್ಕಾರಿ ಕಚೇರಿಗಳಲ್ಲಿ ನೌಕರರೇಕೆ ತಮ್ಮ ಟೇಬಲ್ ಬಳಿ ಬಂದ ವ್ಯಕ್ತಿಗಳನ್ನು ಕಂಡ ಕೂಡಲೇ ಸಿಡಿಮಿಡಿ, ಕೋಪ ಪ್ರದರ್ಶಿಸುತ್ತಾರೆ.
ಸಿಕ್ಕಾಪಟ್ಟೆ ಬ್ಯುಸಿ ಅಂತ ತೋರಿಸ್ಕೊಳ್ಳೋ ರೀತಿಯದು.

ಪಿ.ಜಿ.ರಾಜ್, ಶಿವಮೊಗ್ಗ, 9739263071
ನಾರಿ ಮುನಿದರೆ ಮಾರಿ. ಗಂಡು ಮುನಿದರೆ?
ಗುಂಡು!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿಗೂ, ಕದ್ದು ಮುಚ್ಚಿ ಪ್ರೀತಿಮಾಡುವ ಹುಡುಗಿಗೂ ವ್ಯತ್ಯಾಸವೇನು?
ಒಂದು ಹಾಲು ಕುಡಿಯೋದು, ಇನ್ನೊಂದು ಕುಡಿಸೋದು!

ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಎರಡನೇ ಹೆಂಡತಿ ಸಂಗ!?
ಹೆಜ್ಜೇನು ಕೆಣಕಿದಂತೆ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.