ಪ್ರವಾಸ ಪ್ರಯಾಸ: ವಾಸ್ತವ ಚಿತ್ರಣ
ಕನ್ನಡಪ್ರಭದ ಪ್ರಧಾನ ಸಂಪಾದಕರಾದ ವಿಶ್ವೇಶ್ವರಭಟ್ರವರು ಪ್ರಪಂಚದಲ್ಲಿಯೇ ಅತ್ಯಧಿಕ ಲಾಭ ತಂದು ಕೊಡುವ ಪ್ರವಾಸೋದ್ಯಮದ ಕುರಿತಾಗಿ "ಪ್ರವಾಸೋದ್ಯಮವನ್ನು ಪ್ರಯಾಸದಲ್ಲೇ ಇಟ್ಟವರು ನಾವು!' ಎಂದು ಜುಲೈ 11ರ ನೂರೆಂಟು ನೋಟದಲ್ಲಿ ವಿಶ್ಲೇಷಿಸಿರುವುದು ಸಕಾಲಿಕ. ಬರಿ ಲಾಭದತ್ತ ಯೋಚಿಸಿ ಪಾರ್ಕಿಂಗ್ ಶುಲ್ಕಕ್ಕೆ ವಸೂಲಾತಿಗಾಗಿ ಇರುವ ಭದ್ರತೆ, ಅಪಾಯದಲ್ಲಿರುವವರನ್ನು ರಕ್ಷಿಸುವತ್ತ ಇಲ್ಲ. ಇದೆಂಥ ನಾಚಿಕೆಯಲ್ಲವೇ? ಸ್ಥಳಾವಕಾಶ ಅಭಾವದಿಂದಲೇ ಶೌಚಾಲಯಗಳನ್ನು ಮಾಡಲಿಲ್ಲವಾದರೂ, ಬಾಡಿಗೆ ಬರುವುದಾದರೆ ಮೂರ್ನಾಲ್ಕು ಅಡಿಯಲ್ಲಿ ಜಾಗಗಳು ಬಹುಮಹಡಿಗಳಾಗಿವೆ. ಬರಿ ಹಣವೇ ಪ್ರಧಾನವಾದರೆ? ಮಾನವೀಯತೆಗೆ ಮಾನ್ಯತೆ ಎಲ್ಲಿಂದ ಬರುತ್ತೆ ಹೇಳಿ? ಇಂತಹ ಚಾಳಿ ಮುಂದುವರೆಯಬೇಕೇ? ದೈನಂದಿನ ಬದುಕಿನ ಜಂಜಾಟ ಮರೆಯಲು ಪ್ರವಾಸಿ ತಾಣಗಳತ್ತ ಬರುವರಿಗೆ 'ನಿರಾಸೆ' ಬುತ್ತಿಯಾಗಬಾರದು. ಇತಿಹಾಸ ಅಜ್ಜಿ ಕತೆಯಾಗದೆ ಅಳುವಿನ ಅಂಚಿಗೆ ಹೋಗದೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ದೇಶ-ವಿದೇಶಗಳಿಂದ ಬರುವಂತಹ ಪ್ರವಾಸಿ ತಾಣಗಳಿಗೆ ರಕ್ಷಣೆಗಾಗಿ ಹೆಚ್ಚಿನ ಭದ್ರತೆಗಾಗಿ ಪ್ರವಾಸಿ ತಾಣಗಳ ಬಳಿ ಪೊಲೀಸ್ ಠಾಣೆಗಳನ್ನು ತೆರೆಯಬೇಕಾಗಿದೆ. ಕಳೆದ ಸರ್ಕಾರವು ಪ್ರವಾಸಿ ಗ್ರೀನ್ ಪೊಲೀಸ್ ಹುದ್ದೆ ಭರ್ತಿಗಾಗಿ ಅರ್ಜಿ ಕರೆಯಲಾಗಿದ್ದರೂ ನೆನೆಗುದಿಗೆ ಬಿದ್ದಿದೆ! ಖಾಸಗಿ ಸೆಕ್ಯುರಿಟಿಗಳಿಗೆ ದಬ್ಬಾಳಿಕೆಯಿಂದ ಭದ್ರತೆ ಇಲ್ಲದಾಗಿದ್ದು, ಪ್ರವಾಸಿ ಗೈಡ್ಗಳ ಮಾಸಿಕ ಗೌರವ ಧನದ ವಿಚಾರ ಹಣಕಾಸು ವಿಭಾಗದಲ್ಲಿ ಕೊಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಾದರೂ ಈ ವಿಷಯದಲ್ಲಿ ಆಸ್ಥೆ ವಹಿಸುವರೇ?
- ಬಿ. ಮೊಹಿದ್ದೀನ್ಖಾನ್, ಚಿತ್ರದುರ್ಗ
ಕೆರೆಯೊಡಲು ತುಂಬಿಸಿದ್ದಕ್ಕೆ ಕೃತಜ್ಞತೆಗಳು
ಚಾಮರಾಜನಗರ ಜಿಲ್ಲೆ ಮಳೆಯಿಂದ ವಂಚಿತವಾಗಿ ಸತತ ಮೂರನೇ ವರ್ಷವೂ ಬರದ ನಾಡಾಗಿದೆ. ಸಮರ್ಪಕ ಮಳೆ ಕೊರತೆಯಿಂದಾಗಿ ಸುವರ್ಣಾವತಿ ಹಾಗೂ ಚಿಕ್ಕಾಹೊಳೆಗಳಲ್ಲಿ ನೀರು ಬಾರದಿರುವ ಹಿನ್ನೆಲೆಯಲ್ಲಿ ವೈನಾಡು, ತಲಕಾವೇರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಬಿನಿ ಕಾವೇರಿ ನದಿಗಳು ಮೈದುಂಬಿ ಹರಿದು ಜಲಾಶಯಗಳಲ್ಲಿ ನೀರು ಸಂಗ್ರಹ ಪ್ರಮಾಣ ಗಮನಾರ್ಹವಾಗಿ ಹೆಚ್ಚಳವಾದ ಕಾರಣ ಕಬಿನಿ ನದಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವುದರ ಬದಲಾಗಿ ಕಬಿನಿ ನದಿ ನೀರಾವರಿ ವ್ಯಾಪ್ತಿಯಲ್ಲಿ ಬರುವ ಚಾಮರಾಜನಗರ ಜಿಲ್ಲೆಯ ಭಾಗಗಳಲ್ಲಿ ಕಬಿನಿ ನದಿ ನೀರನ್ನು ಹರಿಸಿ ಚಾಮರಾಜನಗರ ಜಿಲ್ಲೆಯ ಕೆರೆಗಳ ಒಡಲು ತುಂಬಿಸಿ ಜನ, ಜಾನುವಾರು ಹಾಗೂ ಬೆಳೆಗಳಿಗೆ ನೀರೊದಗಿಸುವಂತೆ ಜಿಲ್ಲೆಯ ಜನತೆಯ ಪರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು.
ಈ ಬಗ್ಗೆ ಕನ್ನಡಪ್ರಭದ ಈ ಅಂಕಣದಲ್ಲಿ ಪತ್ರಮುಖೇನ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೆ ಕೆರೆಯೊಡಲು ತುಂಬಿಸಲು ಕ್ರಮ ಜರುಗಿಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಲಾಗಿತ್ತು. ಜಿಲ್ಲೆಯ ಜನತೆಯ ಪರವಾಗಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕಬಿನಿ ನದಿಯಿಂದ ಕಾಲುವೆಗಳ ಮುಖಾಂತರ ಜಿಲ್ಲೆಯ ಕಬಿನಿ ನದಿ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ಬಿಟ್ಟು ಕೆರೆಯೊಡಲು ತುಂಬಿಸುವ ಮೂಲಕ ಜನ-ಜಾನುವಾರು ಹಾಗೂ ಬೆಳೆಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಕಾರ್ಯಕ್ಕೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಕೆರೆಗಳನ್ನು ನೀರಿನಿಂದ ತುಂಬಿಸಿದ್ದರಿಂದ ಜಿಲ್ಲೆಯ ಅಂತರ್ಜಲ ಮಟ್ಟ ಕೂಡ ಏರಲಿದೆ. ಸಮಯೋಚಿತವಾಗಿ ಪತ್ರ ಪ್ರಕಟಿಸಿದ ಕ.ಪ್ರ.ಕ್ಕೆ ವಂದನೆಗಳು.
- ಬಸವರಾಜ ಹುಡೇದಗಡ್ಡಿ, ಕೊಳ್ಳೇಗಾಲ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

