ಸಂಪಾದಕೀಯ

ರಾಜಕಾರಣಿಗಳು ಕೇದಾರನಾಥದಲ್ಲಿ ತಂಗಿದ್ದರೆ ಪ್ರವಾಹವೇ ಉದ್ಭವಿಸುತ್ತಿರಲಿಲ್ಲ ಅಲ್ಲವೇ?

Published On :

ಚಿರಪ್ರಭ ನಂಜನಗೂಡು, 8553783107
ಭಯೋತ್ಪಾದನೆಗೆ ಬಲಿಯಾದ ಲಕ್ಷಾಂತರ ಮುಗ್ದ ಜೀವಿಗಳಿಗೆ ಮಿಡಿಯದವರು, ಇಶ್ರತ್ ಜಹಾನ್‌ಳಿಗಾಗಿ ಕಣ್ಣೀರು ಸುರಿಸುತ್ತಿದ್ದಾರಲ್ಲಾ?
ಮನಸ್ಸುಗಳು ಕೂಡ ಜಾತಿ, ಧರ್ಮ ನೋಡಿ ಮಿಡಿಯಲಾರಂಭಿಸಿವೆ!

ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು
ರಾಜಕಾರಣಿಗಳು ಕೇದಾರನಾಥದಲ್ಲಿ ತಂಗಿದ್ದರೆ ಪ್ರವಾಹವೇ ಉದ್ಭವಿಸುತ್ತಿರಲಿಲ್ಲ ಅಲ್ಲವೇ?
ಪ್ರವಾಹ ಉದ್ಭವಿಸಿದ್ದರೂ ನಮಗದು ತುಂಬ ಕೆಟ್ಟ ಘಟನೆಯೆಂದು ಅನ್ನಿಸದೇ ಇರುವ ಸಾಧ್ಯತೆ ಹೆಚ್ಚಿತ್ತು!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಶವದ ಮುಂದೇಕೆ ಪಟಾಕಿ ಹೊಡೀತಾರೆ?
ಎದ್ದು ಬರೋದಾದ್ರೆ ಬಂದ್ಬಿಡ್ಲಿ ಅಂತ!

ಫ್ಯಾಷನ್ ಡಿಸೈನರ್ ಮಧು, 9945737427
ಕಸದಲ್ಲೂ ಆಹಾರ ಹುಡುಕಿ ತಿನ್ನುವ 'ಕೋಳಿ'ಗೆ ಇರುವ ಬುದ್ಧಿವಂತಿಕೆ ಮನುಷ್ಯನಿಗೇಕಿಲ್ಲ?
ಮನುಷ್ಯನಿಗಿದೆಯಲ್ಲ ಕೋಳಿ ತಿನ್ನುವ ಬುದ್ದಿ!

ಬರ್ಕಲಿ ರಮೇಶ್, ಕಿರಗಂದೂರು, ಮಂಡ್ಯ, 9008741348
ಮನುಜರಲ್ಲಿ ಸ್ವಾರ್ಥಿಗಳೆಂದರೆ ಯಾರು?
ಮನುಜ ಅಂದರೆ ಸಾಕು. ಪ್ರತ್ಯೇಕವಾಗಿ ಸ್ವಾರ್ಥಿ ಎಂದು ಹೇಳುವ ಅಗತ್ಯವಿಲ್ಲ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.