ಗ್ರಾಮಸಭೆ ಮರ್ಯಾದೆ ಕಾಪಾಡಿ
ಪಂಚಾಯಿತಿ ರಾಜ್ಯ ವ್ಯವಸ್ಥೆಯ ಬೇರುಮಟ್ಟದ ಜನತಂತ್ರ ಸಂಸ್ಥೆಗಳ ಕಲ್ಪನೆಯನ್ನು ಸಂವಿಧಾನದ ವಿಧಿನಿಯಮಗಳಲ್ಲಿ ಅಳವಡಿಸಿದಾಗ, ಇಡೀ ವ್ಯವಸ್ಥೆಯ ಬುನಾದಿ ಗ್ರಾಮ ಸಭೆಯೇ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಗ್ರಾಮ ಸಭೆಯನ್ನು ಕರೆಯುವುದು ಪಂಚಾಯಿತಿ ಅಧ್ಯಕ್ಷರ ಮೊದಲ ಕರ್ತವ್ಯ. ಆದರೆ ಬಹುತೇಕ ಗ್ರಾಮ ಸಭೆಗಳು ನಡೆಯುತ್ತಲೇ ಇಲ್ಲ.
ಬಹಿರಂಗವಾಗಿ ಗ್ರಾಮದ ವ್ಯವಹಾರಗಳನ್ನು ಕುರಿತು ಗ್ರಾಮಸ್ಥರ ಸಮ್ಮುಖದಲ್ಲೇ ನಿರ್ಣಯಗಳನ್ನು ಕೈಗೊಳ್ಳುವಂತಹ ವ್ಯವಸ್ಥೆಯನ್ನು ಬಲಪಡಿಸಲು ಕರ್ನಾಟಕ ಸರ್ಕಾರ ರೂಪಿಸಿರುವ ಕಾಯಿದೆಯ ಬದಲಾವಣೆಯಲ್ಲಿ ಗ್ರಾಮ ಸಭೆ ಕರೆಯದೇ ಇರುವ ಪಂಚಾಯಿತಿಯ ಅಧ್ಯಕ್ಷರು ಆ ಸ್ಥಾನಕ್ಕೆ ಅನರ್ಹರಾಗುತ್ತಾರೆ.
ಈ ವಿಧಿಯ ವಿರುದ್ಧ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ದೊಡ್ಡ ಆಂದೋಲನವನ್ನೇ ಹಮ್ಮಿಕೊಳ್ಳಲು ಮುಂದಾಗಿರುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ದೇಶದ ಕಟ್ಟಕಡೆಯಲ್ಲಿನ ಗ್ರಾಮ ಸಮುದಾಯಕ್ಕೆ ನೇರವಾಗಿ ಜನತಾಂತ್ರಿಕ ಅಧಿಕಾರವನ್ನು ಸಾಕ್ಷಾತ್ಕಾರಗೊಳಿಸುವ ವ್ಯವಸ್ಥೆಯ ಅವಹೇಳನಕ್ಕೆ ಆ ಪಕ್ಷ ಮುಂದಾಗಬಾರದು. ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವುದನ್ನು ಬಿಟ್ಟು ಶಿಕ್ಷೆ ವಿಧಿಸುವ ನಿಯಮವನ್ನೇ ರದ್ದುಪಡಿಸಬೇಕೆನ್ನುವುದು ಸರಿಯಲ್ಲ.
ಇನ್ನು ಮುಂದೆ ಎಲ್ಲ ಗ್ರಾಮಸಭೆಗಳ ಕಾರ್ಯಕಲಾಪವನ್ನೂ ವಿಡಿಯೋ ಮೂಲಕ ಸೆರೆ ಹಿಡಿದು, ಸಾರ್ವಜನಿಕರಿಗೆ ಐವತ್ತು ರುಪಾಯಿಗೆ ಸಿಡಿಯನ್ನು ಒದಗಿಸುವ ಸೌಲಭ್ಯವನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಗ್ರಾಮೀಣ ಜನತಾಂತ್ರಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹಾಗೂ ಹೊಣೆಗಾರಿಕೆಯನ್ನು ಮೂಡಿಸುವ ಈ ಪ್ರಯತ್ನ ನಿಜವಾಗಲೂ ಸ್ವಾಗತಕ್ಕೆ ಅರ್ಹ. ಅದು ಎಷ್ಟು ಬೇಗ ಜಾರಿಗೆ ಬಂದರೆ ಅಷ್ಟು ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

