ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಅರಕೆರೆಯಿಂದ ಎಚ್.ಪಿ. ವಿಶ್ವನಾಥ ಶಾಸ್ತ್ರಿ ಅವರು ಬರೆಯುತ್ತಾರೆ- 'ನಿಮ್ಮ ಪತ್ರಿಕೆಯಲ್ಲಿ ಜು.18ರಂದು ಪುಟ 12ರಲ್ಲಿ ಪ್ರಕಟವಾದ 'ಮುಂಗಾರು ಮಳೆಯೇ' ವಿಭಾಗದಲ್ಲಿ ಚಿತ್ರಸಹಿತ ಮಲಪ್ರಭಾ ನವಿಲು ತೀರ್ಥದ ನೀರಿನ ಮಟ್ಟ ಅಂಕೆ-ಸಂಖೆ ನೋಡಿ ಕರ್ನಾಟಕದ ಜಲಾಶಯಗಳಲ್ಲಿ ಪವಾಡವಾಗುತ್ತಾ ಎಂಬ ಸಂಶಯ ಬಂದಿದೆ. ಉದಾ. 1 ಲೀಟರ್ ತುಂಬುವ ಪಾತ್ರೆಯಲ್ಲಿ ಒಂದೂವರೆ ಲೀಟರ್ ನೀರು ಇದೆ ಎಂದು ಹೇಳಿದಂತೆ. ಗರಿಷ್ಠ ಮಟ್ಟ -ಈಗಿನ ಮಟ್ಟ ಸಂಖ್ಯೆಗಳು ಮೇಲು ಕೆಳಗೆ, ತಿರುಗಾ- ಮುರುಗ ಪ್ರಿಂಟ್ ಆಗಿರಬಹುದು. ಇದನ್ನು ವ್ಯಂಗ್ಯ ಎಂದು ಭಾವಿಸಬೇಡಿ. ಅಥವಾ ತಪ್ಪು ಕಂಡು ಹಿಡಿದಿದ್ದಾರೆ ಎಂದು ತಿಳಿಯಬೇಡಿ. ಇದು ನನ್ನ ಗಮನಕ್ಕೆ ಬಂದ ವಿಚಾರ.'
'ಇನ್ನೊಂದು ವಿಚಾರ ಇದೇ ಕಾಲಂನಲ್ಲಿ ಘಟಪ್ರಭಾದ ಈಗಿನ ನೀರಿನ ಮಟ್ಟ ಸಹ 2121.30 ಅಡಿ ಹಾಗೆಯೇ ಮಲಪ್ರಭಾದಲ್ಲಿ ಸಹ 2121.30 ಅಡಿ ಎಂದು ನಮೂದಾಗಿದೆ. ದೇವರು ಎರಡೂ ಅಣೆಕಟ್ಟೆಗೆ ಸಮವಾದ ಕರುಣೆ ತೋರಿಸಿರುತ್ತಾನೋ ಹೇಗೆ ಗೊತ್ತಾಗಲಿಲ್ಲ' ಎಂದಿದ್ದಾರೆ.
ಬೆಂಗಳೂರಿನ ಬನಶಂಕರಿಯಿಂದ ಬಿ.ಎಸ್. ರಮೇಶ್ ಅವರು ಬರೆಯುತ್ತಾರೆ- 'ಪರ್ವಾಗಿಲ್ಲ- ತಪ್ಪುಗಳು ಕಡಿಮೆ ಆಗುತ್ತಿದೆ ಅಂತ ಅಂದುಕೊಳ್ಳುತ್ತಿರುವಾಗಲೇ, ಬೇಡ ಬೇಡವೆಂದರೂ ಬೈಟೂಕಾಫಿಯ (ಜು.16ರ ಸಂಚಿಕೆ) 'ಸಣ್ ಸ್ಟೋರಿ'ಯ 'ಪ್ರಾಣಿ ಪ್ರೀತಿ'ಯಲ್ಲಿ 2 ತಪ್ಪುಗಳಿವೆ. ಅಂಗವಿಕಲ ಮರಿಯೊಂದು ಕುಂಟುತ್ತಾ ನಿಧಾನವಾಗಿ ಅವನ 'ಬಲಿಗೆ' ಬಂದಿತು. ಇಲ್ಲಿ 'ಬಲಿ' ಬದಲು ಬಳಿ ಇರಬೇಕು. ಇದೇ ರೀತಿ ಕೊನೆಯ ಪ್ಯಾರಾದಲ್ಲಿ ನಾನು ಅದರ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ ಎನ್ನಲು, ಜಯಮಾನನಿಗೆ ಅಂತಿದೆ- ಇದು ಯಜಮಾನನಿಗೆ ಆಗಬೇಕಿತ್ತು. ಕಣ್ ತಪ್ಪಿನಿಂದ ಹೀಗೆ ಆಗಲೂ ಬಹುದು' ಎಂದಿದ್ದಾರೆ.
ಮೈಸೂರಿನಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ನಿತ್ಯ ಭವಿಷ್ಯದಲ್ಲಿ 'ಧನುಸ್' ಎಂಬ ರಾಶಿ ಕನ್ನಡಪ್ರಭದಲ್ಲಿದೆ. ಅದು ಧನುಸ್ ಅಲ್ಲ. ಧನು ಅಥವಾ ಧನಸ್ಸು ಆಗಬೇಕಾಗಿತ್ತು. ಧನುಷ್ ಆದ್ರೂ ಓ.ಕೆ.' ಎಂದಿದ್ದಾರೆ.
ಮೈಸೂರಿನಿಂದ ಸಿ. ದಿನಮಣಿ ರಾವ್ ಅವರು ಬರೆಯುತ್ತಾರೆ- 'ಜು.11ರ 'ಬೈಟುಕಾಫಿ'ಯ ಅನೇಕ ಶೀರ್ಷಿಕೆಯ ಪುಟದಲ್ಲಿ 'ತಿಳ್ಕೊಳ್ಳಿ ವಿಷ್ಯ'ದಲ್ಲಿ ಶಾಂತ ತಮ್ಮಯ್ಯ ಅವರು 'ಕಮಿಷನರೇಟ್' ಕುರಿತಂತೆ ನೀಡಿದ ಲೇಖನದಲ್ಲಿ '1963ರಲ್ಲಿ ಕಾರ್ನ್ವಾಲಿಸ್ ಇಲಾಖೆಯನ್ನು' ಹುಟ್ಟು ಹಾಕಿದರು ಎಂಬ ಮಾಹಿತಿ ನೀಡಿದ್ದಾರೆ.
ಬ್ರಿಟಿಷರ ಆಡಳಿತ ಅಂತ್ಯಗೊಂಡು, 1947ರಲ್ಲಿ -ಭಾರತ ಸ್ವತಂತ್ರವಾದದ್ದು ಸರ್ವವಿಧಿತ. ಅಂದ ಮೇಲೆ 1963ರಲ್ಲಿ ಕಾರ್ನ್ವಾಲಿಸ್ ಕಮಿಷನರೇಟ್ ವ್ಯಾಪ್ತಿ ಇಲಾಖೆಯನ್ನು ಹುಟ್ಟು ಹಾಕಿದರು ಎಂಬುದು ತಪ್ಪು ಮಾಹಿತಿ ಆಗುವುದಿಲ್ಲವೇ? ಇದು ಹೇಗೆ ಸಾಧ್ಯ?'
ಇದು ಲೇಖಕರ ತಪ್ಪೋ? ಸುದ್ದಿ ಸಂಪಾದಕರ ವಿಭಾಗದ ನಿರ್ಲಕ್ಷ್ಯವೋ? ನನ್ನ ತಿಳಿವಳಿಕೆಗೆ ಬಂದಂತೆ 1793ರ ಆಸುಪಾಸಿನಲ್ಲಿ ಲಾರ್ಡ್ ಕಾನ್ವಾಲಿಸ್ರು ಭಾರತದ ವೈಸ್ರಾಯ್ ಆಗಿದ್ದರು. (ಇದನ್ನೂ ಓದಿದ ನೆನಪು-ಇದು ಸರಿ ಇರಬಹುದು)' ಎಂದಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

