ಪ್ರಚಾರಕ್ಕಾಗಿ ವಿವಾದ ಸಲ್ಲ
'ಮನರಂಜನೆ' ನೀಡಬೇಕಾದ ಸಿನೆಮಾಗಳು ಮನೋವಿಕಾರಗೊಂಡಂತೆ ವಿವಾದ ಎಬ್ಬಿಸುತ್ತಿರುವುದು ದುರಂತ. ಇಲ್ಲಿ ಎರಡು ಅಂಶಗಳು ಗಮನ ಸೆಳೆಯುತ್ತಿವೆ. ಒಂದು, 'ವೀರಬಸವಣ್ಣ' ಶೀರ್ಷಿಕೆಯಿಂದ 'ಬ್ರಾಹ್ಮಣ' ಬದಲಾವಣೆ ಹಾಗೂ 'ಚಲನಚಿತ್ರಪ್ರಶಸ್ತಿ' ಅವಾಂತರ! ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಇಂತಹ ಗಿಮಿಕ್ ಟೈಟಲ್ಗಳಿಂದ ಸಿನೆಮಾ ಓಡಿಸಲು ಪ್ರಯತ್ನಿಸುತ್ತಿರುವ ಗಿಮಿಕ್ ನಿರ್ದೇಶಕರು ಸಾಮಾಜಿಕ ಕಳಕಳಿಯ ಬಗ್ಗೆಯೂ ಗಮನ ಹರಿಸಬೇಕಿದೆ. ಒಂದು ಸಮುದಾಯದ ಇತಿಹಾಸ, ಪರಂಪರೆಯ ಬಗ್ಗೆ ಚಿತ್ರಿಸಿ, ಈ ಹೆಸರಿಟ್ಟಿದ್ದರೆ ಅದು ಸರಿಯಾಗಿರುತ್ತಿತ್ತು. ಆದರೆ ಕೈಯಲ್ಲಿ ಮಚ್ಚು-ಲಾಂಗು ಹಿಡಿದು ಆರ್ಭಟಿಸುವ ಪೋಸ್ಟರ್ಗಳನ್ನು ಪ್ರದರ್ಶಿಸುತ್ತಾ, ಬಸವಣ್ಣನವರಂತಹ ಆದರ್ಶ ವ್ಯಕ್ತಿಯ ಹೆಸರನ್ನೋ ಅಥವಾ ಗೌರವಾನ್ವಿತ ಬ್ರಾಹ್ಮಣ ಸಮಾಜದ ಹೆಸರನ್ನೋ ದುರ್ಬಳಕೆ ಮಾಡಿಕೊಳ್ಳುವುದು ನಾಗರಿಕ ಸಮಾಜಕ್ಕೆ ಸಹ್ಯವಲ್ಲ. ಉಪೇಂದ್ರರವರ 'ಎ' ಸಿನೆಮಾದಿಂದಲೇ "ಬುದ್ಧಿವಂತರಿಗೆ ಮಾತ್ರ" ಎಂಬ ಗಿಮಿಕ್ ಆರಂಭವಾಯಿತು. ತಾವು ದಡ್ಡರಲ್ಲ ಎಂದು ತೋರಿಸಿಕೊಳ್ಳಲು ಅನೇಕ ಮುಗ್ಧರು ಇಷ್ಟವಾಗದಿದ್ದರೂ- ಅರ್ಥವಾಗದಿದ್ದರೂ 'ಎ' ಸಿನೆಮಾಕ್ಕೆ ತಲೆದೂಗಿದರು. ಅಂತಹ ಗಿಮಿಕ್ಗಳನ್ನೇ ಬಂಡವಾಳ ಮಾಡಿಕೊಂಡು ಇಂತಹ ವಿವಾದ ಸೃಷ್ಟಿಸಿ ಸಿನೆಮಾದ ಬಗ್ಗೆ ಅಬ್ಬರ ಪ್ರಚಾರ ಎಬ್ಬಿಸುವ ಕೀಳುಮಟ್ಟದ ಅಭಿರುಚಿಯೇ ಸಿನೆಮಾರಂಗ ಹಾಳಾಗಲು ಮೂಲಕಾರಣವಾಗುತ್ತಿರುವುದು ಶೋಚನೀಯ ಸಂಗತಿ.
ಇನ್ನು, ಸನ್ಮಾನ (ಪ್ರಶಸ್ತಿ) ದ ಹೆಸರಿನಲ್ಲಿ ಕಲಾವಿದರಿಗೆ ಮಾಡುತ್ತಿರುವ ಅವಮಾನ ನಿಜಕ್ಕೂ ಖೇದಕರ ಸಂಗತಿ. ಅರ್ಹರಿಗೆ ದೊರೆಯಬೇಕಾದ ಪ್ರಶಸ್ತಿಗಳು ಕಾಳಸಂತೆಯಲ್ಲಿ ಯಾವುದೋ ಮರ್ಜಿಗೆ ಮಾರಾಟವಾಗುತ್ತಿರುವುದನ್ನು ನೋಡಿದರೆ ವಾಕರಿಕೆ ಬರುತ್ತಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿರುವ ನ್ಯಾಯಾಲಯದ ತೀರ್ಪನ್ನು ಪ್ರಶಂಸಿಸಲೇಬೇಕು. ಸಾಧಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಪ್ರಶಸ್ತಿಗಳು ಸಾಧಕರನ್ನೇ ಅರಸುವಂತಹ ವ್ಯವಸ್ಥೆ ರೂಪುಗೊಳ್ಳಬೇಕು. "ನನಗೆ ಪ್ರಶಸ್ತಿ ನೀಡಿ" ಎಂದು ಕಾಡಿ-ಬೇಡುವ ಮಟ್ಟಕ್ಕೆ, ಇಲ್ಲವೇ ಅರ್ಜಿ ಹಾಕಿಕೊಳ್ಳುವ ಸಂಪ್ರದಾಯ ಮೊದಲು ತೊಲಗಬೇಕು. ಬೇಡಿ ಚಪ್ಪಾಳೆ ತಟ್ಟಿಸಿಕೊಳ್ಳುತ್ತಿರುವ ಈ ಪ್ರಸ್ತುತ ವ್ಯವಸ್ಥೆ ಬದಲಾಗಬೇಕು. ಒಂದೆರಡು ಸಿನೆಮಾ ಶತದಿನ ಪೂರೈಸಿದಾಕ್ಷಣ ಅದು 'ಯಶಸ್ವಿ ಚಿತ್ರ' - ಎಂಬ ಭ್ರಮೆ ಸಲ್ಲದು. ಕೀಳು ಅಭಿರುಚಿ ಹಾಗೂ ಅಶ್ಲೀಲ ಸನ್ನಿವೇಶಗಳನ್ನು ತುರುಕಿ ಸಿನೆಮಾ ಪಾಸ್ ಮಾಡಿಕೊಳ್ಳುವವರಿಗೂ ನಮ್ಮಲ್ಲಿ ಕೊರತೆ ಇಲ್ಲ. ಹೀಗಾಗಿ ಒಂದು ಸಿನೆಮಾವನ್ನು ಹತ್ತಾರು ದೃಷ್ಟಿಕೋನದಿಂದ ತೂಗಿ-ಅಳೆಯುವ ವಿಧಾನ ಜಾರಿಯಾಗಬೇಕಿದೆ.
- ಮಾಗಡಿ ಶ್ರೀನಿವಾಸ್, ರಾಮನಗರ
ಕಾರಣ ಏನು?
ದೇಶದ ಅನೇಕ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿನ ಪಿ.ಎಸ್.ಐ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ವಯೋವುತಿ ಅತಿ ಕಡಿಮೆ- 26 ವರ್ಷ (ಸಾಮಾನ್ಯ ವರ್ಗ). ಈ ಹುದ್ದೆಗಳಿಗೆ ಕಳೆದ ನಾಲ್ಕು ವರ್ಷಗಳಿಂದ ನೇಮಕಾತಿ ಆಗಿರುವುದಿಲ್ಲ. ಇದರಿಂದ ಹಳ್ಳಿಯ ಹೈದರಾದ ನಮ್ಮಂತ ಸಾವಿರಾರು ಪಿ.ಎಸ್.ಐ. ಆಕಾಂಕ್ಷಿಗಳಿಗೆ ಅವಕಾಶ ಸಿಗದೆ, ವಯೋವುತಿ ಮೀರಿ ಹೋಗಿದೆ. ಆದ್ದರಿಂದ ನಮ್ಮಂತಹ ಸಾವಿರಾರು ಅವಕಾಶ ವಂಚಿತ ಅಭ್ಯರ್ಥಿಗಳ ಕೂಗಿನಂತೆ, ಈಗಿರುವ ಕಡಿಮೆ ವಯೋವುತಿಯನ್ನು ಇತರೆ ರಾಜ್ಯಗಳಂತೆ ಹೆಚ್ಚಿಸದೇ ಇರುವುದಕ್ಕೆ ವೈಜ್ಞಾನಿಕ ಕಾರಣ ಏನು?
- ಗೋವಿಂದಗೌಡ, ಭೀಮನಗೌಡ, ವಿರೇಶ, ಧಾರವಾಡ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

