ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ತುಮಕೂರಿನ ಟುಡಾ ಬಡಾವಣೆಯಿಂದ ಕೆ.ಜಿ. ರಾಘವೇಂದ್ರ ಅವರು ಬರೆಯುತ್ತಾರೆ- 'ಜೂ.13ರಂದು ಕ್ರೀಡಾಪುಟದಲ್ಲಿ (ಪುಟ 12) 'ಉತ್ಸಾಹಿ ಆಂಗ್ಲರಿಗೆ ಸಿಂಹಳೀಯರ ಸವಾಲು' ಬಗ್ಗೆ ವಿಶ್ಲೇಷಣೆ ಮಾಡಿದಾಗ ಮೂರು ಚಿತ್ರಗಳನ್ನು ನೀಡಿದ್ದೀರಿ. ಅದರಲ್ಲಿ ಲಂಕಾದ ವೇಗಿ ಲಸಿತ್ ಮಾಲಿಂಗ ಬೌಲಿಂಗ್ ಚಿತ್ರವನ್ನು ನೀಡಿದ್ದು, ಕೆಳಗಡೆ ಪೆರೇರಾ ಎಂದು ನಮೂದಿಸಿದ್ದೀರಿ. ಚಿತ್ರದಲ್ಲಿ ಸ್ಪಷ್ಟವಾಗಿ ಮಾಲಿಂಗ ಎಂಬುದು ಗೊತ್ತಾಗುತ್ತದೆ. ಪೆರೇರಾ ಅಥವಾ ಮಾಲಿಂಗ ಎಂಬುದರಲ್ಲಿ ಯಾವುದು ಸರಿ? ಕ್ರೀಡಾ ಪುಟದಲ್ಲಿ ಇಂತಹ ತಪ್ಪುಗಳನ್ನು ಆಗಾಗ ಕಾಣುತ್ತಿರುತ್ತೇನೆ' ಎಂದಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- 'ಜೂ.14ರ ಮುಖಪುಟದಲ್ಲಿ 'ಜುಲೈನಲ್ಲಿ ಅಗ್ಗದ ಅಕ್ಕಿ' ಅಂತ ಸುದ್ದಿ ಪ್ರಕಟವಾಗಿದೆ. ಈ ಸುದ್ದಿಯ ಕೆಳಗಿನ ವಿವರದಲ್ಲಿ ಒಬ್ಬರೇ ಇರುವ ಬಿಪಿಎಲ್ ಕಾರ್ಡ್ಗೆ 10 ಕೆಜಿ. ಇಬ್ಬರಿದ್ದರೆ 20 ಕೆಜಿ ಹಾಗೂ ಇಬ್ಬರಿಗಿಂತ ಹೆಚ್ಚಿದ್ದರೆ 30 ಕೆಜಿ ಅಕ್ಕಿ ಅಂತಿದೆ. ಆದರೆ ಇದಕ್ಕೆ ತಾವುಗಳು 110ಕೆಜಿ, 220ಕೆಜಿ, 330ಕೆಜಿ ಎಂಬ ಶೀರ್ಷಿಕೆ ಕೊಟ್ಟಿದ್ದೀರಿ. ಇದರಲ್ಲಿ 330ಕೆಜಿ ಎಂದು ತಾವುಗಳು ಪ್ರಕಟಿಸಿರುವುದು ತಪ್ಪು ಎಂದು ನನ್ನ ಅನಿಸಿಕೆ.'
'ಏಕೆಂದರೆ ಇಬ್ಬರಿಗಿಂತ ಹೆಚ್ಚಿದ್ದರೆ 30ಕೆಜಿ ಅಕ್ಕಿ ಎಂಬ ವಿವರಣೆಗೆ 330ಕೆಜಿ ಎಂಬುದರ ಬದಲಾಗಿ 2೤30 ಕೆಜಿ ಎಂಬ ಬಳಕೆ ಹೆಚ್ಚು ಸೂಕ್ತವಾಗುತ್ತಿತ್ತು. 330ಕೆಜಿ ಅಂದರೆ ಮೂವರಿದ್ದರೆ 30 ಕೆಜಿ, ಹಾಗಾದರೆ 4 ಅಥವಾ 5 ಅಥವಾ ಅದಕ್ಕಿಂತ ಹೆಚ್ಚು ಜನರಿದ್ದರೆ ಎಷ್ಟು? ಎಂಬ ಪ್ರಶ್ನೆ ಆ ಶೀರ್ಷಿಕೆ ನೋಡಿದಾಗ ಮೂಡುತ್ತದೆ. 2೤30 ಕೆಜಿ ಎಂಬ ಪ್ರಯೋಗವೇ ಹೆಚ್ಚು ಸೂಕ್ತವಲ್ಲವೇ?'
'ಜೂ.15ರ ಪುಟ 3ರಲ್ಲಿ ಮಂಡ್ಯ ಸುದ್ದಿ ವಿಭಾಗದಲ್ಲಿ 'ಕೆಆರ್ಎಸ್ ಒಳಹರಿವು ಹೆಚ್ಚಳ: ರೈತರ ಹರ್ಷ' ಎಂಬ ಶೀರ್ಷಿಕೆಗೆ 'ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುಕ್ರವಾರ ಬೆಳಗ್ಗೆ ಕೆಆರ್ಎಸ್ಗೆ 1782 ಕ್ಯುಸೆಕ್ ಒಳಹರಿವು' ಎಂಬ ಉಪಶೀರ್ಷಿಕೆ ಕೊಟ್ಟು ಸುದ್ದಿಯೊಂದನ್ನು ಪ್ರಕಟಿಸಿದ್ದೀರಿ.'
'ಆದರೆ ಅದೇ ಸುದ್ದಿಗೆ ಸಂಬಂಧಿಸಿದ ಬಾಕ್ಸ್ನಲ್ಲಿ ಕೆಆರ್ಎಸ್ನಲ್ಲಿ ನೀರಿನ ಒಳಹರಿವು 3031 ಕ್ಯುಸೆಕ್ ಎಂದಿದೆ! ಇದು ಹೇಗೆ? ಒಂದೇ ಸುದ್ದಿಯಲ್ಲಿ ಎರಡು ಬೇರೆ ಬೇರೆ ಪ್ರಮಾಣದ ಕ್ಯುಸೆಕ್ ನೀರು ಹರಿಯಲು ಹೇಗೆ ಸಾಧ್ಯವಾಯಿತು?'
ಕೆಆರ್ಎಸ್ನಲ್ಲಿ ಮೊದಲು ಒಳಹರಿವು ಎಷ್ಟಿತ್ತು ಮತ್ತು ನಂತರ ಎಷ್ಟಾಗಿದೆ ಎಂಬುದನ್ನು ಸುದ್ದಿಯಲ್ಲಿ ನೀಡಲಾಗಿದೆ. ಶೀರ್ಷಿಕೆ ನೀಡುವಾಗ ಮೊದಲು ಒಳಹರಿವು ಎಷ್ಟಿತ್ತು ಎಂಬ ಅಂಕಿಯನ್ನು ನೋಡಿ, ಅದನ್ನೇ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಶೀರ್ಷಿಕೆ ನೀಡುವಾಗ ಸುದ್ದಿಯನ್ನು ಸರಿಯಾಗಿ ಓದದೇ ಹೋದರೆ ಇಂತಹ ತಪ್ಪುಗಳಾಗುತ್ತವೆ. ಶೀರ್ಷಿಕೆ ನೀಡುವ ಗಡಿಬಿಡಿಯಲ್ಲಿ ತಕ್ಷಣಕ್ಕೆ ಕಂಡ ಅಂಕಿಯನ್ನು ಯಾವುದು ಎಂದು ಪರೀಕ್ಷಿಸದೇ ಪ್ರಕಟಿಸಿದ್ದೇ ಈ ತಪ್ಪಿಗೆ ಕಾರಣ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.