ಸಂಪಾದಕೀಯ

ರೈತರ ಕೇಸ್ ಹಿಂದೆ ಪಡೆಯಲಿ

Published On :

ಈಗ 3-4 ವರ್ಷಗಳ ಹಿಂದೆ ನಮ್ಮ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಕೆಲ ಮಂದಿ ಗಣಿಗಾರಿಕೆ ಮಾಡುವ ಸಂಬಂಧವಾಗಿ ಕಪ್ಪತ್ತಗುಡ್ಡಕ್ಕೆ ಹೊಂದಿಕೊಂಡಿರುವ ಹಿರೇವಡ್ಡಟ್ಟಿ ಗ್ರಾಮಕ್ಕೆ ಬಂದು ಹಿರೇವಡ್ಡಟ್ಟಿ ಗ್ರಾಮದ ಬಡಪಾಯಿ ರೈತರನ್ನು ಪುಸಲಾಯಿಸಿ ಅಷ್ಟೋ-ಇಷ್ಟೋ ಹಣವನ್ನು ಕೊಟ್ಟು ಕೆಲ ರೈತರ ಹೊಲಗಳನ್ನು ಮೂರು ವರ್ಷಕ್ಕೆ ಗಣಿಗಾರಿಕೆ ಮಾಡಲೆಂದೇ ಲೀಸ್‌ಗೆ ಪಡೆದುಕೊಂಡಿದ್ದರು. ಈ ಲೀಸ್ ಕೊಡಲು ಇಲ್ಲಿಯ ರೈತರಿಗೆ ಅನಿವಾರ್ಯತೆ ಇತ್ತು ಕೂಡ.
ಏಕೆಂದರೆ, ಈ ನಮ್ಮ ಮುಂಡರಗಿ ತಾಲ್ಲೂಕು ಪ್ರತಿ ವರ್ಷ ಬರಗಾಲ ಪೀಡನೆಯನ್ನು ಅನುಭವಿಸುವ ತಾಲ್ಲೂಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಪ ಈ ನಮ್ಮ ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿ ರೈತರು ತಮ್ಮ ಹೊಲ ಅಕ್ರಮ ಗಣಿಗಾರಿಕೆಗೆ ಕೊಡುತ್ತಿದ್ದೇವೆ ಎಂಬ ಸತ್ಯ ಅರಿಯದೇ ತಮ್ಮ ತಮ್ಮ ಹೊಲಗಳನ್ನು ಕೊಟ್ಟು ಸ್ವಲ್ಪ ಸಂಪಾದನೆಯ ಆಸೆಯಿಂದ ಮತ್ತು ಕಾಯ್ದೆ-ಕಾನೂನುಗಳನ್ನು ತಿಳಿಯದೇ ಇರುವುದರಿಂದ ತಮ್ಮ ತಮ್ಮ ಹೊಲಗಳನ್ನು ಲೀಜ್ ಕೊಟ್ಟಿದ್ದರು. ಕಾಲಕ್ರಮೇಣ ಇದಾದ ಸ್ವಲ್ಪ ದಿನಗಳಲ್ಲಿ ಬಳ್ಳಾರಿ ಗಣಿಯ ಅಕ್ರಮದ ಗಾಳಿ ಬಿಸಿ ಸಿಬಿಐ ದಾಳಿ ಅದು-ಇದು ಅಂತ ಸರ್ಕಾರ ಈ ಗಣಿಗಾರಿಕೆಯ ನೇಮಪಾಲನೆಯಲ್ಲಿ ಚುರುಕಾಯಿತು. ಆಗ ಈ ಗಣಿಗಾರಿಕೆಯ ನಿಯಮ-ನೀತಿಯ ಬಗ್ಗೆ ಜಾಗೃತವಾಗಿ ಅನುಮತಿರಹಿತ ಅಕ್ರಮ ಗಣಿಗಾರಿಕೆ ಮಾಡುವವರ ಮೇಲೆ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಯಿತು ಮತ್ತು ಅಕ್ರಮ ಗಣಿಗಾರಿಕೆ ಮಾಡುವುದು ತಪ್ಪು. ಹಾಗೆಯೇ ಅಕ್ರಮ ಗಣಿಗಾರಿಕೆಗೆ ತಮ್ಮ ತಮ್ಮ ಹೊಲಗಳನ್ನು ಕೊಡುವುದು ಅಪರಾಧ ಅಂತ ಈ ಗಣಿಗಾರಿಕೆ ಮೂಲ ನಿಯಮವನ್ನು ಜಾರಿ ಮಾಡಿ ಇದನ್ನು ಉಲ್ಲಂಘಿಸಿದವರ ಮೇಲೆ ರಾಜ್ಯಾದ್ಯಂತ ದಾಳಿ ಮಾಡಿತು. ಆಗ ತಮ್ಮ ತಮ್ಮ ಹೊಲಗಳನ್ನು ಲೀಸ್...ಗೆ ಕೊಟ್ಟ ರೈತರ ಮೇಲೆ ಕೇಸ್ ಹಾಕಿತು. ಇಂತಹ ಪ್ರಸಂಗದ ಪ್ರಕರಣವೇ ನಮ್ಮ ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದ ಕೆಲವಾರು ರೈತರ ಮೇಲೆ ಅಕ್ರಮ ಗಣಿಗಾರಿಕೆಗೆ ತಮ್ಮ ಹೊಲಗಳನ್ನು ಲೀಸ್ ಕೊಟ್ಟಿದ್ದಕ್ಕೆ 1-2 ಪ್ರಕರಣ ಅಂತ ಬೇರೆ ಬೇರೆ ಕೇಸಾಯಿತು. ಒಂದು ಮತ್ತು ಎರಡು ಕೇಸ್‌ನಲ್ಲಿ ಒಟ್ಟು 20ರಿಂದ 25 ಜನ ನಮ್ಮ ಹಿರೇವಡ್ಡಟ್ಟಿ ಗ್ರಾಮದ ರೈತರಿದ್ದಾರೆ ಮತ್ತು ಈ ಕೇಸಿನಲ್ಲಿ ಎರಡು-ಮೂರು ಮಹಿಳಾ ರೈತರು ಇದ್ದಾರೆ. ಈ ಸಂಬಂಧವಾಗಿ ಈಗಲೂ ಸಹ ಈ ಹಿರೇವಡ್ಡಟ್ಟಿ ಬಡಪಾಯಿ ರೈತರು ನಮ್ಮ ಮುಂಡರಗಿ ತಾಲ್ಲೂಕು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಆದರೆ ಇವರೆಲ್ಲಾ ಬಡಪಾಯಿ ರೈತರು ಮತ್ತು ನಮ್ಮ ಬರಗಾಲ ತಾಲ್ಲೂಕಿನ ಸಂಬಂಧದ ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೋಗಿ ಅಪರಾಧಿ ಪ್ರಕರಣಕ್ಕೆ ಸಿಕ್ಕಿ ಹಾಕಿಕೊಂಡವರು ಮುದ್ದಾಂ ಅಕ್ರಮ ಗಣಿಗಾರಿಕೆ ಮಾಡಲು ಹೋದವರಲ್ಲ ಮತ್ತು ಕಾಯ್ದೆ-ಕಾನೂನು ಅರಿಯದ ಮುಗ್ಧ ಜನ. ಏನೋ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ ಅಕ್ರಮ ಗಣಿಗಾರಿಕೆಗೆ ತಮ್ಮ ತಮ್ಮ ಹೊಲಗಳನ್ನು ಕೊಟ್ಟಿದ್ದಕ್ಕಾಗಿ ಅಪರಾಧಿ ಪ್ರಕರಣದಲ್ಲಿ ಸಿಲುಕಿಕೊಂಡವರು. ಈಗಲೂ ಸಹ 3-4 ವರ್ಷಗಳಿಂದ ನಮ್ಮ ಮುಂಡರಗಿ ತಾಲ್ಲೂಕು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ತನಗೆ ಅನುಕೂಲಸಿಂಧು ಸಂಘಟನೆಯ ಕೆಲ ಕಾರ್ಯಕರ್ತರ ಮೇಲೆ ರಾಜ್ಯದ ಕೆಲ ಭಾಗಗಳಲ್ಲಿ ಕೇಸ್ ಇದ್ದವುಗಳನ್ನು ಹಿಂಪಡೆದ ಉದಾಹರಣೆಗಳಿವೆ. ಅದರಂತೆ ಈ ನಮ್ಮ ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದ ರೈತರು ತಿಳಿಯದೇ ಮಾಡಿದ ಅಕ್ರಮ ಗಣಿಗಾರಿಕೆಯ ಕೇಸನ್ನು ಯಾಕೆ ಹಿಂಪಡೆಯಬಾರದು...?
- ಅಂದಪ್ಪ ಬಸಪ್ಪ ಬಿನ್ನಾಳ, ಮುಂಡರಗಿ, ಗದಗ ಜಿಲ್ಲೆ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.