ಸಂಪಾದಕೀಯ

ಮಿಡಿ ಹಾಕಬೇಡವೆಂದರೆ ಈ ಹುಡುಗಿಯರಿಗೇಕೆ ಸಿಡಿಮಿಡಿ?

Published On :

ವಿ. ಹೇಮಂತಕುಮಾರ, ಬೆಂಗಳೂರು, 9035992900
ಹಲ್ಲು ಇರುವವರೆಗೆ ಊಟ. ಕಣ್ಣು ಇರುವವರೆಗೆ ನೋಟ. ಯೌವ್ವನ ಇರುವವರೆಗೂ?
ಆಟ!


ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮಿಡಿ ಹಾಕಬೇಡವೆಂದರೆ ಈ ಹುಡುಗಿಯರಿಗೇಕೆ ಸಿಡಿಮಿಡಿ?
ನೀವು ಬಿಡಿಮಿಡಿ ಅಂದಿದ್ದಕ್ಕೆ ಅವರು ಸಿಡಿಮಿಡಿ!

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಸರ್ಕಾರಿ ನೌಕರರು ಹಾಗೂ ಖಾಸಗಿ ಸಂಸ್ಥೆ ನೌಕರರ ಬದುಕಿನ ಭಿನ್ನತೆ ಏನು?
ಒಬ್ಬರದ್ದು ಕೆಲಸದಲ್ಲಿದ್ದಾಗಲೂ ರಜೆ, ಇನ್ನೊಬ್ಬರದ್ದು ರಜೆ ಇದ್ದಾಗಲೂ ಕೆಲಸ.

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಬ್ರಾಹ್ಮಣರ ಫಲಾಹಾರ ಮಂದಿರ, ವೀರಶೈವಕಾಫಿ ಕ್ಲಬ್, ಗೌಡರ ಮುದ್ದೆ ಹೋಟೆಲ್ ಇವೆಲ್ಲಾ ಅನಿವಾರ್ಯವೇ?
ಹಾಗೇನಿಲ್ಲ. ಬೀಗರೂಟ ಹೋಟೆಲ್ ಬಂದಮೇಲೆ ಇವೆಲ್ಲ ಡಲ್ ಆಗಿವೆ.

ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಯ ಉಗಮ ಹೃದಯದಲ್ಲೋ, ಮನಸಿನಲ್ಲೋ?
ಉಗಮ ಎಲ್ಲೇ ಆಗಲಿ ಅಂತ್ಯಮಾತ್ರ ಮದುವೆಯಲ್ಲಿ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.