ಮಾರಿ ಕಣಿವೆಗೆ ಆರ್ಚ್ ಬೇಕು
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿಗೆ 20 ಕಿ.ಮೀ. ಅಣತಿ ದೂರದಲ್ಲಿ 1905ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆಯನು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯನವರ ತಂತ್ರಗಾರಿಕೆಯಲ್ಲಿ ನಿರ್ಮಿಸಿರುತ್ತಾರೆ. ಇದು ಕರ್ನಾಟಕದ ಮೊಟ್ಟ ಮೊದಲ ನೀರಾವರಿ ಅಣೆಕಟ್ಟೆಯು ಕೂಡ ಹೌದು! ಡ್ಯಾಂನ ಮೂರಾಕು ಕಡೆ ನಿಂತು ವೀಕ್ಷಿಸಿದರೆ "ಭಾರತ ದೇಶದ ನಕ್ಷೆ" ನೀರಿನಲ್ಲಿ ಗೋಚರಿಸುತ್ತದೆ. ಇದು ಭಾರತದಲ್ಲೇ ಅತ್ಯದ್ಭುತವಾಗಿದೆ. ಚಿತ್ರದುರ್ಗದ ಜೀವ ಜಲನದಿಯಾಗಿದೆ. ಈ ವೈಶಿಷ್ಟ್ಯವನು ವೀಕ್ಷಿಸಲು ರಾಜ್ಯ- ಅಂತಾರಾಜ್ಯ, ದೇಶ-ವಿದೇಶಗಳಿಂದಲೂ ಪ್ರವಾಸಿಗರು ದಿನದಿಂದ ದಿನಕ್ಕೆ ಲಗ್ಗೆ ಇಡುತ್ತಿದ್ದಾರೆ. ಇಲ್ಲಿನ ಜವಾಬ್ದಾರಿ ಹೊತ್ತ ಸಣ್ಣ ನೀರಾವರಿ ಇಲಾಖೆ ಅಭಿವೃದ್ಧಿಯತ್ತ ಮೌನ ತಾಳಿದೆ! ಮಾಹಿತಿ ಇರುವವರು ಮಾತ್ರ ತಡಕಾಡಿ ಡ್ಯಾಂ ಸೇರಬಹುದು. ಮಾಹಿತಿ ಇಲ್ಲದವರು ಹೋಗಲು ಆಗುವುದಿಲ್ಲ. ಈ ಮುಂಚೆ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಕಾರ್ಯದಲ್ಲಿದ್ದಾಗ, ಹಿರಿಯೂರು ಐ.ಬಿ. ಬಳಿ (ಪ್ರವಾಸಿ ಮಂದಿರದ ಎದುರು) ಮಾರಿ ಕಣಿವೆಗೆ ಹೋಗುವ ಹಾದಿಯಲ್ಲಿ ಒಂದು ದೊಡ್ಡ ಆರ್ಚ್ ಇತ್ತು. ಅದನು ರಸ್ತೆ ಅಗಲೀಕರಣಕ್ಕಾಗಿ ಒಡೆದು ಹಾಕಿದ್ದಾರೆ ವಿನಃ ಮುಂದೆ ಈ ಆರ್ಚ್ ಮಾಡಿಸುವ ಗೋಜಿಗೆ ಯಾರೂ ಹೋದಂತೆ ಕಾಣುತ್ತಿಲ್ಲ! ಮೊದಲಿನಂತೆ ಆರ್ಚ್ ಇದ್ದಿದ್ದರೆ ಪ್ರವಾಸಿಗರು ಯಾವುದೇ ಮುಜುಗರವಿಲ್ಲದೆ, ನೋಡಲಾರದವರು ಕೂಡ ನೋಡುವಂತಾಗುವುದರಲ್ಲಿ ಸೆಳೆಯುತ್ತದೆ. ಇದರತ್ತ ಈಗಲಾದರೂ ಸರ್ಕಾರ ಕಿಂಚಿತ್ತು ಗಮನ ಹರಿಸುವುದೇ?
-ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ
ಇಲಾಖೆಯ ಸ್ಪಷ್ಟೀಕರಣದ ಅಗತ್ಯವಿದೆ
ಪಡಿತರ ಕಾರ್ಡ್ ನವೀಕರಣ, ಹೊಸ ಕಾರ್ಡ್ ಪಡೆಯುವ ಮೊದಲು ಫೋಟೋ ತೆಗೆಸುವ ದಾಖಲೆಗಳನು ಪರಿಶೀಲಿಸುವ ಅನೇಕ ಕೇಂದ್ರಗಳನು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಾರಂಭಿಸಿದೆ. ಇದರ ಬಗ್ಗೆ ಆಗಾಗ ಪ್ರತಿಕಾ ಪ್ರಕಟಣೆ ಕೊಡಲಾಗುತ್ತಿದೆ. ಆದರೆ ಪಾವತಿ ಮಾಡಬೇಕಾದ ಶುಲ್ಕದ ಬಗ್ಗೆ ಪ್ರಸ್ತಾಪವಿರುವುದಿಲ್ಲ. ಕೇಂದ್ರಗಳಲ್ಲಿ ರುಪಾಯಿ 50 ಎಂಬುದಾಗಿ ಬೋರ್ಡ್ ಹಾಕಿದ್ದಾರೆ. ಆದರೆ ಅನೇಕ ಕೇಂದ್ರಗಳಲ್ಲಿ ಹೆಚ್ಚು ಹಣ, ಕೆಲವು ಕಡೆ ರುಪಾಯಿ 100 ವಸೂಲು ಮಾಡಲಾಗುತ್ತದೆ. ಫಾರ್ಮ್ಗೆ ರುಪಾಯಿ 5 ತೆಗೆದುಕೊಳ್ಳುತ್ತಾರೆ. ಕೊಡಲು ಒಪ್ಪದವರಿಗೆ ಬೇರೆ ಬೇರೆ ವಿಧದಲ್ಲಿ ಸತಾಯಿಸುತ್ತಾರೆ. ಕೆಲವು ಕೇಂದ್ರಗಳಲ್ಲಿ ಬಿ ಪಿಎಲ್ನವರನು ಸುಲಿಗೆ ಮಾಡಿ ಹಣಗಳಿಸುವ ದಂಧೆ ಪ್ರಾರಂಭಿಸಿರುತ್ತಾರೆ. ಈ ಬಗ್ಗೆ ಇಲಾಖೆ ಮೌನವಾಗಿರುವುದು ಆಶ್ಚರ್ಯ. ಬಡವರ ಹಿತದಿಂದ ಈ ವಿಚಾರವಾಗಿ ಇಲಾಖೆಯ ಶೀಘ್ರ ಸ್ಪಷ್ಟೀಕರಣದ ಅಗತ್ಯವಿದೆ. ಜನಪ್ರತಿನಿಧಿಗಳ ಸೂಚನೆ ಬೇಕಾಗಿದೆ.
-ಶ್ರೀನಿವಾಸ ಶೆಟ್ಟಿ ತೋನ್ಸೆ, ಉಡುಪಿ
ಒಳ್ಳೆಯ ಕಾರ್ಯಕ್ರಮ
ಝೀ ಟಿ.ವಿ.ಯಲ್ಲಿ ಸೃಜನ್ ಲೋಕೇಶ್ರವರು ತಮ್ಮ ತಂದೆ ದಿವಂಗತ ಲೋಕೇಶ್ ಪ್ರೊಡಕ್ಷನ್ನಲ್ಲಿ ನಡೆಸಿಕೊಟ್ಟ ಕಾಸಿ-ಗೆ-ಬಾಸು ಕಾರ್ಯಕ್ರಮ ಸಾಮಾಜಿಕ ಕಳಕಳಿಯಿಂದ ಕೂಡಿದ್ದು ಅಶಕ್ತ ಕಲಾವಿದರ, ನೊಂದವರ, ಸಮಾಜದಿಂದ ನಿಕೃಷ್ಟವಾಗಿ ಕಡೆಗಣಿಸಲ್ಪಟ್ಟವರ ಬದುಕಿಗೆ ಆಸರೆಯಾಗುವಂತಹ ಆಟ ಮತ್ತು ಮನರಂಜನೆಯ ಜೊತೆಗೆ, ಬದುಕಿನ ನೈಜತೆಯನು ಮನಮಿಡಿಯುವಂತೆ ನಿರೂಪಿಸುವಲ್ಲಿ ಸೃಜನ್ ಹಾಗೂ ಜಹಾಂಗೀರ್ ಯಶಸ್ವಿಯಾಗಿದ್ದಾರೆ. ಎರಡು ಕೈಗಳಿಲ್ಲದ ಆಂಜನೇಯ, ಆಸಿಡ್ ದಾಳಿಯ ಗೃಹಿಣಿ ಕುಬ್ಜ ದೇಹದ ಸರ್ಕಸ್ ಕಲಾವಿದ ಕಣ್ಣು ಕಾಣದ ಗೀತಾ, ಕಾಲು ಕತ್ತರಿಸಿದ ನಟ ನಟಿಯರನು ನೋಡಿದಾಗ ಸೃಜನ್ ಕಾರ್ಯ ಶ್ಲಾಘನೀಯವೆನಿಸದಿರದು. ತಮ್ಮ ಕಾರ್ಯಕ್ರಮದಲ್ಲಿ ವೀಕ್ಷಕರೂ ಸಹಾಯಹಸ್ತದ ಗುಣವನು ಬೆಳೆಸಿಕೊಳ್ಳುವಂತೆ ಅಪೇಕ್ಷಿಸಿದ್ದೀರಿ. ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ಖಂಡಿತಾ ತಮ್ಮ ವ್ಯಾಪ್ತಿಯಲ್ಲಿ ನಿಮ್ಮ ಕನಸನು ಕಾಣುತ್ತೇವೆ. ನಮ್ಮೆಲ್ಲರನು ಗೆದ್ದಿದ್ದೀರಿ. ದೂರದರ್ಶನದಲ್ಲಿ ಇಂಥ ಮೌಲ್ಯಯುತ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.
-ಪ್ರಮೀಳಾ ಮಹದೇವ್, ದೊಡ್ಡಬಳ್ಳಾಪುರ
ಕನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

