ಫ್ಯಾಷನ್ ಡಿಸೈನರ್ ಮಧು, 9945737427
ಹೃದಯದ ಮಾತುಗಳಿಗೆ ಭಾಷೆಯೇ ಇಲ್ಲವಂತೆ ನಿಜವೇ?
ಹೃದಯಕ್ಕೆ ಅರ್ಥವಾಗುವುದು ರಕ್ತದ ಭಾಷೆ ಮಾತ್ರ!
ಉಜ್ಜನಿ ಜಲೇಂದ್ರ 8971857200
ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ 'ಬಾಣಭಟ್ಟ'ರಾಗಿರುವ ನೀವು ಪ್ರಶ್ನೆ ಕಳುಹಿಸುವವರಿಗೆ ಏನು ಹೆಸರಿಡುತ್ತೀರಾ?
ಉತ್ತರ ಕುಮಾರರು ಅಂತ ಕರೆದ್ರೆ ಚೆನ್ನಾಗಿರುತ್ತಾ ನೀನೇ ಹೇಳು!
ವಿಷ್ಣುಶಂಕರ್, ಶಿವಮೊಗ್ಗ
ಭಟ್ರೇ ನಿಮಗೆ ನೂರೆಂಟು ಐಡಿಯಾಗಳು ಯಾವ ಸಮಯದಲ್ಲಿ ಹೊಳೆಯುತ್ತವೆ?
ಐಡಿಯಾ ಸಿಮ್ ಅಂತೂ ತಂಗೊಂಡಿಲ್ಲ ನೋಡಿ.
ಪವನ ಕುಮಾರ ಕೆ. ವಿ. ಬಳ್ಳಾರಿ
ಪೋಲಿಯೋಗೂ ಪೋಲಿಗೂ ವ್ಯತ್ಯಾಸವೇನು?
ಒಂದು ಬಾಲ್ಯದ ಹಂತಕ್ಕೆ ಸಂಬಂಧಿಸಿದ್ದು, ಇನ್ನೊಂದು ಮಗುತನ ಕಳೆದುಕೊಂಡಿರುವುದರ ಪ್ರತೀಕ!
ಓಂ ಚೆನ್ನೇಶ್ ಭದ್ರಾವತಿ, 9901257131
ಮದ್ಯಪಾನ ಮಾರಾಟವನ್ನೂ ರಾಜ್ಯಾದ್ಯಂತ ನಿಷೇಧಗೊಳಿಸಿದರೆ ಹೇಗೆ?
ನಿನ್ನ ಪ್ರಸ್ತಾವನೆಯಲ್ಲಿ ಕಿಕ್ ಇಲ್ಲ ಬಿಡು!
- ಬಾಣಭಟ್ಟ