ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಫೆ.18ರಂದು ಮುಖಪುಟದಲ್ಲಿ 'ವೀರಪ್ಪನ್ ಸಹಚರರಿಗೆ ಯಾವ ಕ್ಷಣದಲ್ಲೂ ಗಲ್ಲು' ಸುದ್ದಿ ಪ್ರಕಟವಾಗಿದೆ. 'ಗಲ್ಲಿನ ಸುದ್ದಿ ಗುಲ್ಲಾಗಿರುವ' ಇಂದಿನ ಸನ್ನಿವೇಶದಲ್ಲಿ ಮೇಲ್ಕಂಡ ಶೀರ್ಷಿಕೆ 'ವೀರಪ್ಪನ್ ಸಹಚರರಿಗೆ ಯಾವುದೇ ಕ್ಷಣದಲ್ಲಿ ಗಲ್ಲು' ಎಂದು ಇದ್ದಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ?'
'ಇನ್ನು ಸುದ್ದಿಯಲ್ಲಿ ಜ್ಞಾನ ಪ್ರಕಾಶನನ್ನು ವೀರಪ್ಪನ್ ಸಹೋದರ ಎಂದು ಹೇಳಲಾಗಿದೆ. ಇದು ಸರಿಯಲ್ಲವೆಂದು ಕಾಣುತ್ತೆ. ವೀರಪ್ಪನ್ ಸುದ್ದಿ ಮಾಡಿದ ದಿನದಿಂದ ಪತ್ರಿಕೆಗಳನ್ನು ಓದುತ್ತ ಬಂದಿದ್ದೇನೆ. ವೀರಪ್ಪನ್ಗೆ ಒಬ್ಬ ಸೋದರಿ ಮಾರಿ ಅಂತ ಇದ್ದಳು. ಅವಳು ಸಂಶಯಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನೊಬ್ಬ ಸಹೋದರ ಅರ್ಜುನ ಪೊಲೀಸ್ ವಶದಲ್ಲಿದ್ದಾಗಲೇ ಸತ್ತನು. ವೀರಪ್ಪನ್ಗೆ ಇರುವ ಮತ್ತೊಬ್ಬ ಸಹೋದರ ಮಾದಯ್ಯ. ಅವನನ್ನು 'ಕೂಸೆ ಮಾದಯ್ಯ' ಎಂದು ಕರೆಯಲಾಗುತ್ತಿತ್ತು. ಆದರೆ ಕ.ಪ್ರ.ದಲ್ಲಿ ಮೀಸೆ ಮಾದಯ್ಯ ಎನ್ನಲಾಗುತ್ತಿದೆ. ಅವನು 'ಕೋಸೆ' ಇಲ್ಲ 'ಮೀಸೆ' ಮಾದಯ್ಯ ಆಗಲಿ, ಅವನೇ ವೀರಪ್ಪನ್ನ ಅಳಿದುಳಿದ ಏಕೈಕ ಸಹೋದರ' ಎಂದಿದ್ದಾರೆ.
ಉತ್ತರ ಕನ್ನಡದ ಸಿದ್ದಾಪುರದಿಂದ ವಿನಾಯಕ ಕಾಮತ್ ಅವರು ಬರೆಯುತ್ತಾರೆ- 'ಫೆ.20ರ ಮುಖಪುಟದಲ್ಲಿ ಪ್ರಾಸಬದ್ಧವಾಗಿ 'ಬಂದ್' ಬಗ್ಗೆ ತಲೆಬರಹ 'ಬಂದಿ'ದೆ. ಆದರೆ ಸಾಲುಗಳ ವಿನ್ಯಾಸದಿಂದಾಗಿ ಅರ್ಥ ವ್ಯತ್ಯಾಸದ ಸಂಭವ ಜೋರಾಗಿಯೇ ಇದೆ.
'ಇಂದು-ನಾಳೆ ಬಂದು, ಇಲ್ಲ
ರಿಕ್ಷಾ, ಬಸ್ಸು,
ಶಾಲೆ-ಕಾಲೇಜು ಡೌಟು', ಎಂದಿದೆ...ಮೊದಲ ಸಾಲು ಮಾತ್ರ ಓದಿದವರು ಇಂದು ಬಂದ್ ಇಲ್ಲ ಎಂದು ಓದಿಕೊಳ್ಳುವ ಸಂಭವವೇ ಹೆಚ್ಚು.' ಬದಲಾಗಿ 'ಇಲ್ಲ'ವನ್ನು ಎರಡನೇ ಸಾಲಿಗೆ ಇಳಿಸಿದ್ದರೆ...
(ಇಂದು ನಾಳೆ ಬಂದು
ಇಲ್ಲ ರಿಕ್ಷಾ, ಬಸ್ಸು
ಶಾಲೆ-ಕಾಲೇಜು ಡೌಟು)
ಎಂದು ಬರೆದಿದ್ದರೆ ತಲೆಬರಹ ಇನ್ನೂ ಸ್ಪಷ್ಟವಾಗಿಯೂ, ಪ್ರಾಸಬದ್ಧವಾಗಿಯೂ ಇರುತ್ತಿತ್ತಲ್ಲವೇ?'
ಬೆಂಗಳೂರಿನಿಂದ ರಾಜೀವ್ ಪಟವರ್ಧನ್ ಅವರು ಬರೆಯುತ್ತಾರೆ- 'ಫೆ.26ರ ಮುಖಪುಟದಲ್ಲಿ 'ಸರಳ ನೆಗೆತ' ಚಿತ್ರದ ಕಿರುಶೀರ್ಷಿಕೆಯಲ್ಲಿ 'ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ವೇದಿಕೆಯಿಂದ ಮೊದಲ ಉಡಾವಣೆ' ಎಂದಿದೆ. ಆದರೆ 'ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ವೇದಿಕೆಯಿಂದ ಉಡಾವಣೆ' ಎಂದಾಗಬೇಕಿತ್ತು ಅಲ್ಲವೇ?'
'ಹಾಗೇ ವರದಿಯಲ್ಲಿ 'ಸರಲ್'ನ ವಿಸ್ತೃತ ರೂಪದ ಮಾಹಿತಿ ಒದಗಿಸಿಲ್ಲ. 'ಸರಲ್' ಎಂದರೆ 'ಸ್ಯಾಟಲೈಟ್ ವಿದ್ ಅರ್ಗೋಸ್ ಮತ್ತು ಅಲ್ಟಿಕ್' ಎಂದು.'
'ಫೆ.26ರ ಪುಟ 13ರಲ್ಲಿ 'ನಿರಾಣಿ-ಕಾರಜೋಳ ಡಿಶುಂಡಿಶುಂ' ಎಂದಿದೆ. ಆದರೆ, ವರದಿ ಓದಿದಾಗ ಅವರಿಬ್ಬರ ಮಧ್ಯೆ ಕೇವಲ ವಾಕ್ಸಮರ ನಡೆದಿದೆ. ಡಿಶುಂಡಿಶುಂ ಎಂದರೆ ಕೈ-ಕೈ ಮಿಲಾಯಿಸುವುದು ಅಥವಾ ತೋಳು ಏರಿಸುವುದು ಎಂದಾಗುತ್ತದೆ.'
'ಪುಟ 14ರಲ್ಲಿ 'ಸೂರ್ಯನೆಲ್ಲಿ; 111 ಮಂದಿ ವಿರುದ್ಧ ಕೇಸು' ಎಂದಿದೆ. ಆದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ 120 ಮಂದಿಯನ್ನು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿದೆ ಹೊರತು, ಅವರ ವಿರುದ್ಧ ಕೇಸು ದಾಖಲಿಸಿಲ'್ಲ ಎಂದಿದ್ದಾರೆ.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

