ಸಂಪಾದಕೀಯ

ಚುನಾವಣೆ ಆಯೋಗಕ್ಕೆ ಸಲಾಮ್

Published On :

ರಾಜ್ಯ ವಿಧಾನಸಭೆಯ ಚುನಾವಣೆಯನ್ನು ತುಂಬಾ ಚೆನ್ನಾಗಿ, ಅಚ್ಚುಕಟ್ಟಾಗಿ, ಚಾಕಚಕ್ಯತೆಯಿಂದ ನಿರ್ವಹಿಸಿದ ಚುನಾವಣೆ ಆಯೋಗ ಹಾಗೂ ಕರ್ನಾಟಕದಲ್ಲಿನ ಅದರ ಪರವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಲೇ ಬೇಕು.
 ಚುನಾವಣೆ ಆಯೋಗದ ವಿರುದ್ಧ ಯಾವ ರಾಜಕೀಯ ಪಕ್ಷವೇ ಆಗಲಿ ಅಥವಾ ಬೇರೆ ಯಾರೇ ಆಗಲಿ ಪಕ್ಷಪಾತದ ಆರೋಪವನ್ನು ಮಾಡದೇ ಇದ್ದಿದ್ದು, ಇದೇ ಮೊದಲ ಬಾರಿಗೆ. ಹಿಂದೆಲ್ಲ ಆಯೋಗದ ವಿರುದ್ಧ ಬೇಕಾದಷ್ಟು ಆರೋಪಗಳು ಇರುತ್ತಿದ್ದವು. ಆದರೂ ಈ ಬಾರಿ ಚುನಾವಣೆಯ ಪೂರ್ವದಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹಾಗೂ ಪಟ್ಟಿಯಲ್ಲಿ ಆಗಬೇಕಾಗಿದ್ದ ಬದಲಾವಣೆಗಳನ್ನು ಮಾಡುವುದರಲ್ಲಿ ಲೋಪದೋಷಗಳು ಕಂಡುಬಂದಿವೆ.
 ಇದಕ್ಕೆ ಕಾರಣ ಆ ಕೆಲಸವನ್ನು ಆಯೋಗವೇ ಮಾಡಬೇಕಾದರೂ, ಅದರ ಹೊಣೆಯನ್ನು ಹೊರಬೇಕಾದ್ದು ಸ್ಥಳೀಯ ಸಂಸ್ಥೆಗಳೇ. ಅಲ್ಲಿನ ಸಿಬ್ಬಂದಿಗೆ ಈ ಹೆಚ್ಚಿನ ತಲೆ ನೋವು ಬೇಕಾಗಿಲ್ಲ. ಆದರೂ ಬೇರೆ ವ್ಯವಸ್ಥೆ ಇಲ್ಲವಲ್ಲ. ಚುನಾವಣೆ ಸನ್ನಿಹಿತವಾದಾಗಲೇ ಎಲ್ಲ ಕೆಲಸ ಮಾಡುವುದನ್ನು ಬಿಟ್ಟು, ಚುನಾವಣೆ ಸಂಬಂಧದ ಕೆಲಸಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಶಾಶ್ವತ ವ್ಯವಸ್ಥೆಯನ್ನು ರೂಪಿಸಿದರೆ, ಮತದಾರರ ಪಟ್ಟಿ, ಗುರ್ತಿನ ಕಾರ್ಡ್ಗಳ ಗೊಂದಲ ಕಡಿಮೆಯಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.