ಸಂಪಾದಕೀಯ

ಮತದಾರ ಹೇಗೆ ಮತ ಹಾಕಿದ್ದಾನೆ?

Published On :

ಈ ಐದು ವರ್ಷದಲ್ಲಿ ಜನ ರೋಸಿ ಹೋಗಿದ್ದಂತೂ ನಿಜ. ದಿನ ಬೆಳಗಾದರೆ ಜಗಳ, ಹಗರಣಗಳ ಮಾತು. ಕೊನೆಕೊನೆಯಲ್ಲಂತೂ ಶಿಸ್ತಿನ ಪಕ್ಷದಲ್ಲಿ ಶಿಸ್ತು ಬಿಟ್ಟು ಎಲ್ಲಾ ಇತ್ತು. ಅದೇನೋ ಮದುವೆಯ ಗಾದೆ ಮಾತು 'ಎಲ್ಲಾ ಇದೆ ಅದೇ ಇಲ್ಲ' ಎನ್ನುವಂತೆ.
ಪರ್ಯಾಯವೇನು ಎನ್ನುವುದಕ್ಕಿಂತಲೂ ಇದನ್ನು ಕಿತ್ತೊಗೆಯಬೇಕು ಎನ್ನುವುದೇ ಜನಕ್ಕೆ ಮುಖ್ಯವಾಗಿತ್ತು. ಫಲಿತಾಂಶ ನೋಡಿದರೆ ಮತದಾರನನ್ನು ಮೆಚ್ಚಲೇ ಬೇಕು. ಜಾತಿ ಮತ ಎಲ್ಲವನ್ನೂ ಮರೆತು ಭ್ರಷ್ಟತೆಯ ವಿರುದ್ಧ ಆಡಳಿತ ನಿಷ್ಕ್ರಿಯತೆಯ ವಿರುದ್ಧ ಕಚ್ಚಾಟದ ವಿರುದ್ಧ ಮತ ನೀಡಿದ್ದಾನೆ. ಒಂದು ಪಕ್ಷಕ್ಕೆ ಬಹುಮತ ಕೊಡದಿದ್ದರೆ ಹಿಂದಿನ ಆಪರೇಷನ್ ಕಮಲಾ ನೋ ಆಪರೇಷನ್ ವಿಮಲಾನೋ ಗ್ಯಾರಂಟಿ ಎಂದುಕೊಂಡು ಒಂದೇ ಪಕ್ಷಕ್ಕೆ ಬಹುಮತ ನೀಡಿದ್ದಾನೆ ಎಂದು ಅಭಿಮಾನ ಉಂಟಾಗಿದೆ.
ಆದರೆ ಇದು ನಿಜವೇ? ನಾವು ಅಂದುಕೊಂಡಂತೆ ಮತ ಹಾಕಿದ್ದಾನೆ ಎಂದರೆ ಈ ಕೆಳಗಿನ ಅಂಕಿ ಅಂಶ ವಿಶ್ಲೇಷಣೆ ಏನು ಹೇಳುತ್ತದೆ?
ಟಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶೇ.34.76. ಅಂದರೆ ಕೇವಲ ಶೇ. ಎರಡು ಮತದಾರ ಹೆಚ್ಚಾಗಿದ್ದಾನೆ.
ಟಿ ಬಿಜೆಪಿ ತನ್ನ ಭ್ರಷ್ಟತೆ, ದುರಾಡಳಿತದಿಂದಾಗಿ ಹಿಂದೆ ಶೇ. 33.86 ಈಗ ಕೇವಲ 20.48 ಅಂದರೆ ಸುಮಾರು ಶೇ. ಹದಿಮೂರರಷ್ಟು ಕಳೆದುಕೊಂಡಿದೆ. ಆದರೆ ಆ ಮತಗಳು ಹೋಗಿರುವುದನ್ನು ಹೊಸ ಪಕ್ಷಗಳಾದ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಗೆ. ಆ ಪಕ್ಷಗಳು ಬೇರಾವೂ ಅಲ್ಲ. ಭ್ರಷ್ಟ ಬಿಜೆಪಿಯ ಸಿಡಿದ ಅಷ್ಟೇ ಭ್ರಷ್ಟ ಭಾಗಗಳೇ. ಅಂದರೆ ಬಿಜೆಪಿ ಮೂರು ಹೋಳಾಗಿ ಮೂರಾಬಟ್ಟೆಯಾಗಿದಿದ್ದರಿಂದ ಬಿಜೆಪಿ ಇಷ್ಟು ಕಡಿಮೆ ಸ್ಥಾನ ಗಳಿಸುತ್ತಿತ್ತೆ ಅಥವಾ ಹಿಂದಿನ ಸ್ಥಾನಗಳೇ ಮರುಕಳಿಸುತ್ತಿದ್ದವೆ? ಅದೂ ಒಂದು ಸಿಡಿದ ಪಕ್ಷದ ಹಿಂದೆಯೇ ಹೆಚ್ಚು ಕಡಮೆ ಒಂದೇ ಕೋಮು ನಿಂತಿರುವುದು ನೋಡಿದರೆ ನಮ್ಮ ಮತದಾರ ಕೋಮು ಮೀರಿ ಮತದಾನ ಮಾಡಿದ್ದಾನೆ ಎಂದು ಯಾವ ಆಧಾರದ ಮೇಲೆ ಹೇಳಲು ಸಾಧ್ಯ? ಇನ್ನೂ ಒಂದು ಆಶ್ಚರ್ಯ ಎಂದರೆ ಅತ್ಯಂತ ಭ್ರಷ್ಟರೆಂದು ಒಮ್ಮತದಿಂದ ತೀರ್ಮಾನವಾದ ವ್ಯಕ್ತಿ ಸೋತ ಕ್ಷೇತ್ರದ ಮತಗಳಿಕೆ ನೋಡಿದರೆ ಅಲ್ಲಿ ಬಿಜೆಪಿ ಕೆಜೆಪಿ ಮತ ಕೂಡಿದರೆ ಅವು ಭ್ರಷ್ಟತೆಯ ವಿರುದ್ಧ ಗೆದ್ದ ಅಭ್ಯರ್ಥಿಯ ಮತಕ್ಕಿಂತಲೂ ಗಣನೀಯವಾಗಿ ಹೆಚ್ಚಿದೆ ಅಂದರೆ ಏನು? ಮತದಾರ ಎಂದರೆ ಪಟ್ಟಣದ ಸಾಹಿತಿಯೂ ಆಗಬಹುದು. ಗ್ರಾಮಾಂತರದಲ್ಲಿರುವ ನೇಗಿಲಯೋಗಿಯೂ ಆಗಬಹುದು. ಇವೆಲ್ಲ ಒಬ್ಬನ ಕಲ್ಪನೆಯಲ್ಲ. ಪತ್ರಿಕೆಯಲ್ಲಿ ಬಂದಿರುವ ಅಧಿಕೃತ ಅಂಕಿ ಅಂಶಗಳ ಆಧಾರವಿದೆ. ಇದರ ಮೇಲೆ ಪಾರದರ್ಶಕ ವಿಶ್ಲೇಷಣೆ ಆಗಿ ಸತ್ಯಸಂಗತಿ ತಿಳಿದರೆ ಅದು ಮತದಾರನಿಗೆ ಕನ್ನಡಿಯಾದೀತು. ಪ್ರತಿಯೊಬ್ಬ ಮತದಾರನೂ ತಾನು ಇಂತಹವರಿಗೆ ಮತ ಹಾಕಿದ್ದು ಎಷ್ಟು ಸರಿ ಎಂದು ಚಿಂತಿಸತೊಡಗುತ್ತಾನೆ. ಮುಂದಿನ ಚುನಾವಣೆಯ ಹೊತ್ತಿಗೆ ಸರಿಯಾದ ದಾರಿ ಕಂಡುಕೊಂಡಾನು. ಭ್ರಷ್ಟರಿಗೂ ಮತ ಹಾಕುತ್ತಾನೆ ಎಂಬ ಭಾವನೆ ಬಂದರೆ ರಾಜಕೀಯದಲ್ಲಿ ಹಗರಣಗಳದ್ದೇ ಮೇಲು ಗೈ ಆಗಿ ಶುದ್ಧ ಆಡಳಿತ ಕನಸಾದೀತು.
-ಸತ್ಯಬೋಧ, ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.