ತಪ್ಪಾಯ್ತು ತಿದ್ಕೋತೀವಿ
ಉಡುಪಿ ಜಿಲ್ಲೆ ಸಾಸ್ತಾನದಿಂದ ಪಿ.ಮಂಜುನಾಥ ಚಡಗ ಬರೆಯುತ್ತಾರೆ- 'ಅ.26ರ ಸಂಚಿಕೆಯ ಶಿವಮೊಗ್ಗ ಆವೃತ್ತಿಯ ಪುಟ 2ರ ಮೇಲಿನ ಸಾಲಿನ ದಪ್ಪ ಅಕ್ಷರದ ಶೀರ್ಷಿಕೆ 'ಅಜಿ ಆಹ್ವಾನ' ಎಂದಿದೆ. 5ನೇ ಸಾಲಿನಿಂದ ಭರ್ತಿ ಮಾಡಿದ ಅರ್ಜಿಯನ್ನು ಅ.31ರೊಳಗೆ.......' ಎಂದು ವಿಳಾಸಕೊಟ್ಟು ಬಿಡಲಾಗಿದೆ. ಇದರಿಂದ ವಾಕ್ಯ ಅಪೂರ್ಣವಾಗಿದೆ. (ನೀವೆ ತಿಳಿಸಿದಂತೆ 'ಪತ್ರಿಕೆಯ ಅಂಕಣಕ್ಕೆ ಜಾಗದ ಮಿತಿಯಿದೆ) ಓದುಗ 'ಅರ್ಜಿ' ಎಂದೂ, ಅ.31ರೊಳಗಾಗಿ....... ಇವರಿಗೆ ತಲುಪಿ ಸಬೇಕು ಎಂದೂ ಅರ್ಥೈಸಿಕೊಂಡಿದ್ದಾನೆ.'
'ಇನ್ನು ಅದೇ ಪುಟದಲ್ಲಿ ಭದ್ರಾವತಿ ಸುದ್ದಿ 'ಜೇನು ನೊಣ ದಾಳಿ...' ಇದರ ಬಾಕ್ಸ್ ಸುದ್ದಿಯಲ್ಲಿ 'ದಾಳಿ ನಡೆಸಿ ಪರಿಣಾಮ 20ಕ್ಕೂ ಹೆಚ್ಚು ಗಾಯ'. ಸುದ್ದಿ ವಿವರ 15 ಮತ್ತು 17ನೇ ಸಾಲು ಓದುವಾಗ ಅರ್ಥವಾಗುತ್ತದೆ. ಅದೇ ಸುದ್ದಿಯ 11ನೇ ಸಾಲಿನಲ್ಲಿ 'ಕಟಾವು ಮಾಡುವ ಮಾಡುತ್ತಿದ್ದಾಗ' ಎಂದಿದೆಯಲ್ಲ! ಇದರಲ್ಲಿ 'ಜನರು' ಮಾಯವಾದರೆ, 'ಮಾಡುವ' ಹೆಚ್ಚಿಗೆ ಸೇರಿಕೊಂಡಿದೆ.'
'ಒಟ್ಟಿನಲ್ಲಿ ನಿತ್ಯ ಪತ್ರಿಕೆ ಓದುವಾಗ ಹತ್ತು ಹಲವು ತಪ್ಪುಗಳು ಮೇಲ್ನೋಟಕ್ಕೆ ಕಂಡುಬರುತ್ತವೆ. ಓದುಗರು ಅದನ್ನು ಸರಿಪಡಿಸಿಕೊಂಡು ಅರ್ಥೈಸಿಕೊಂಡು ಓದುತ್ತಾರೆ. ಆದರೆ 'ಕನ್ನಡಪ್ರಭ'ದಲ್ಲಿ 'ತಪ್ಪಾಯ್ತು ತಿದ್ಕೋತೀವಿ' ಅಂಕಣ ಇದೆ. ಓದುಗ ಬರೆಯುತ್ತಾನೆ, ನೀವು ಪ್ರತಿಕ್ರಿಯಿಸುತ್ತೀರಿ.'
'ದಿನನಿತ್ಯ ಕಣ್ಣಿಗೆ ಕಾಣುವ ತಪ್ಪುಗಳನ್ನು ಬರೆದು ತಿಳಿಸಿದಲ್ಲಿ ಇವರಿಗೆ ತಪ್ಪುಗಳನ್ನು ಕಂಡುಹಿಡಿಯುವುದೇ ಉದ್ಯೋಗವೇನೋ ಎಂದು ನೀವು ಹೇಳಬಹುದೆಂದು ಬರೆದು ತಿಳಿಸುವುದನ್ನು ಕಡಿಮೆಮಾಡಬೇಕಾಗಿದೆ. ಆದರೆ ಕೆಲವೊಂದು ತಪ್ಪುಗಳು ಅಪಾರ್ಥ ಕೊಡುತ್ತವೆ. ಇನ್ನು ಕೆಲವು ತಪ್ಪು ಮಾಹಿತಿ ಕೊಡುತ್ತವೆ. ಕಳೆದ ವಾರದ ಪತ್ರಿಕೆಯಲ್ಲಿ 'ಆರೈಕೆ' ಬದಲು 'ಹಾರೈಕೆ' ಎಂದಾಗಿತ್ತು. ಎಲ್ಐಸಿ ವಾರ್ಷಿಕ ವಹಿವಾಟಿನ ಲೆಕ್ಕಾಚಾರ ಮತ್ತು ಮುಂದಿನ ವರ್ಷದ ವಹಿವಾಟಿನ ಗುರಿ, ಇವು ಲಕ್ಷ ಕೋಟಿಗಟ್ಟಲೇ ರುಪಾಯಿಗಳಲ್ಲಿ ವ್ಯತ್ಯಾಸವಾಗಿತ್ತು' ಎಂದು ಹೇಳಿದ್ದಾರೆ.
ಬೆಂಗಳೂರಿನ ಶ್ರೀನಿವಾಸ ನಗರದಿಂದ ಸಾಮಗ ದತ್ತಾತ್ರಿ ಬರೆಯುತ್ತಾರೆ, "ಇದನ್ನು ಯಾರಾದರೂ ನೀತಿ ಬೋಧನೆ ಎನ್ನುತ್ತಾರೆಯೇ?' 'ಒಳಸುರಳಿ' ಅಂಕಣ ಲೇಖನದಲ್ಲಿ ನುಸುಳಿರುವ ಕೆಲವು ತಪ್ಪುಗಳು. ಮೊದಲನೆಯ ಕಾಲಂನ 30ನೇ ಸಾಲಿನಲ್ಲಿ 'ಪಗಾರು' 'ಪಗಾರ' ಆಗಬೇಕು. 32ನೇ ಸಾಲಿನ 'ಮುನುಷ್ಯ' 'ಮನುಷ್ಯ'ನಾಗಬೇಕು. 42ನೇ ಸಾಲಿನಲ್ಲಿ 'ಧ್ವನಿಸುತ್ತದೆ' ಎನ್ನುವುದು 'ಧ್ವನಿಸುತ್ತವೆ' ಆಗಬೇಕಲ್ಲವೆ? 54ನೇ ಸಾಲಿನ 'ಜಗತ್ತನು' 'ಜಗತ್ತನ್ನು' ಆಗಬೇಕು. ಎರಡನೆಯ ಕಾಲಂನ 2ನೇ ಸಾಲಿನ 'ಬರದಲ್ಲಿ' 'ಭರದಲ್ಲಿ' ಆಗಬೇಕು. 6ನೇ ಸಾಲಿನ 'ಅಧ್ಯಕ್ಷಗಿರಿಯಂತ' '.....ಯಂಥ' ಅಥವಾ 'ಯಂತಹ' ಆಗಬೇಕಿತ್ತು.'
'ಇದೇ ಕಾಲಂನ 3ನೇ ಪ್ಯಾರಾದ 2ನೇ ಸಾಲಿನ 'ನೀಡುವಂತ' ನೀಡುವಂಥ ಅಥವಾ ನೀಡುವಂತಹ ಆಗುವುದು ಸೂಕ್ತ. ಮೂರನೆಯ ಕಾಲಂನ 5ನೇ ಪ್ಯಾರಾದ 5ನೇ ಸಾಲಿನ 'ಬಯಸುತ್ತಾನೆ' ಬದಲು 'ಬಯಸುತ್ತದೆ' ಆಗಬೇಕು. (ಜನ.... ಬಯಸುತ್ತದೆ) ಎಂದಾಗಬೇಕಿತ್ತು' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

