ನಾಮಕರಣಕ್ಕೆ ವಿಳಂಬ ಕೂಡದು
ವಿಶ್ವವಿದ್ಯಾನಿಲಯಗಳಲ್ಲಿ ಸೆನೆಟ್ ಮತ್ತು ಸಿಂಡಿಕೇಟ್ಗಳಿಗೆ ಮಹತ್ವವಿದೆ. ವಿಶ್ವವಿದ್ಯಾನಿಲಯದ ಕಾರ್ಯಯೋಜನೆಗಳೆಲ್ಲ ಅನುಷ್ಠಾನಕ್ಕೆ ಮೊದಲು ಇವುಗಳಲ್ಲಿ ಚರ್ಚೆಗೆ ಬರುತ್ತವೆ. ಈ ಸಿಂಡಿಕೇಟ್ಗಳಿಗೆ ರಾಜ್ಯ ಸರ್ಕಾರವು ವಿವಿಧ ಮೀಸಲಾತಿಗಳಿಗೆ ಒಳಪಟ್ಟು ಆರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ಈ ಸದಸ್ಯರು ಸಿಂಡಿಕೇಟ್ ಸಭೆಗಳಲ್ಲಿ ಸರ್ಕಾರದ ನಿಲವನ್ನು ಪ್ರತಿಪಾದಿಸಬಲ್ಲರು.
ಕಳೆದ ಜೂನ್ ತಿಂಗಳಿನಲ್ಲಿ ಈಗಿನ ಕಾಂಗ್ರೆಸ್ ಸರ್ಕಾರವು ಈ ನಾಮನಿರ್ದೇಶಿತ ಸದಸ್ಯರನ್ನು ವಜಾ ಮಾಡಿತು. ಅವರ ಅವಧಿ ಈ ನವೆಂಬರ್ 20ರ ವರೆಗೂ ಇದ್ದುದರಿಂದ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ. ಈಗ ನಾಮನಿರ್ದೇಶನ ಮಾಡಲು ಯಾವುದೇ ಅಡ್ಡಿಯಿಲ್ಲ.
ಸರ್ಕಾರದಿಂದ ನಾಮನಿರ್ದೇಶನ ಹೊಂದಲು ಹಲವರು ಉತ್ಸುಕರಾಗಿದ್ದು ಅದಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಾಬಿ ನಡೆಸುವುದು ತಪ್ಪೇನೂ ಅಲ್ಲ. ಖಾಲಿ ಇರುವ ಸ್ಥಾನಗಳಿಗೆ ಸರ್ಕಾರ ಯಾರನ್ನಾದರೂ ಕೂಡಲೇ ನಾಮನಿರ್ದೇಶನ ಮಾಡಬೇಕು.
ಹಿಂದೆ ಇದ್ದವರಿಗೆ ಈ ತಿಂಗಳ ಕೊನೆಯ ವರೆಗೂ ಮುಂದುವರಿಯಲು ಬಿಟ್ಟಿದ್ದರೆ ಏನೂ ನಷ್ಟವಾಗುತ್ತಿರಲಿಲ್ಲ. ಸ್ವಲ್ಪ ರಾಜಕೀಯ ಉದಾರಬುದ್ಧಿಯನ್ನು ತೋರಿಸಬೇಕಿತ್ತು. ಒಮ್ಮೆ ತೆರವು ಮಾಡಿದ ಮೇಲೆ ಅದನ್ನು ತಕ್ಷಣ ತುಂಬದೇ ಇರುವುದು ತಪ್ಪು. ಈಗ ಸಿಂಡಿಕೇಟ್ ಸಭೆಗಳು ಸರ್ಕಾರದ ನಾಮನಿರ್ದೇಶನದ ಆರು ಸದಸ್ಯರ ಕೊರತೆಯೊಂದಿಗೇ ನಡೆಯುತ್ತಿದೆ. ಇದನ್ನು ಹೀಗೆಯೇ ಖಾಲಿ ಇಡುವುದರಿಂದ ಲಾಬಿ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆಯೇ ಹೊರತು ಮತ್ತೇನೂ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

