ಪತ್ತೆ ಇಲ್ಲದ ಶೌಚಾಲಯಗಳು
ನಿರ್ಮಲ ಭಾರತ್ ಅಭಿಯಾನ ಯೋಜನೆಯಂತೆ, ರಾಜ್ಯದಲ್ಲಿ ನಿರ್ಮಿಸಲಾಗಿತ್ತೆಂದು ಹೇಳಲಾದ 44 ಲಕ್ಷ ಶೌಚಾಲಯಗಳಲ್ಲಿ ಈಗ 19 ಲಕ್ಷ ಶೌಚಾಲಯಗಳು ಹುಡುಕಿದರೂ ಸಿಗುತ್ತಿಲ್ಲ. ಅವು ನಾಪತ್ತೆಯಾಗಿವೆ. ಕಳೆದ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಾರ್ಟಿಯೇ ಇದರ ಹೊಣೆಯನ್ನು ಹೊರಬೇಕೆಂದು ಈಗಿನ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಇಲಾಖೆಯ ಮಂತ್ರಿ ಎಚ್.ಕೆ. ಪಾಟೀಲರು ಹೇಳಿರುವುದರಲ್ಲಿ ಅರ್ಥವಿದೆ.
ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆ. ಆದರೆ ರಾಜ್ಯ ಸರ್ಕಾರ ಫಲಾನುಭವಿಗಳನ್ನು ಆರಿಸಿದೆ. ಈ ಯೋಜನೆಯಲ್ಲಿ ಶೌಚಾಲಯದ ನಿರ್ಮಾಣಕ್ಕೆ ಫಲಾನುಭವಿ ಕೊಡುವುದು 800 ರುಪಾಯಿ ಮಾತ್ರ. ಕೇಂದ್ರ ಸರ್ಕಾರ 4700 ರುಪಾಯಿಗಳನ್ನು ಒಂದು ಶೌಚಾಲಯಕ್ಕೆ ಕೊಡಲಿದೆ. ಇಂತಹ ಬೃಹತ್ ಹಾಗೂ ಬಡಜನರ ಪರವಾದ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸುವ ಹೊಣೆ ರಾಜ್ಯ ಸರ್ಕಾರದ್ದು. ಸರ್ಕಾರ ಈ ವಿಚಾರದಲ್ಲಿ ಪ್ರದರ್ಶಿಸಿದ ಅಲಕ್ಷ್ಯ, ಆಲಸಿಕೆಯ ಪರಿಣಾಮವಾಗಿ ಹತ್ತೊಂಭತ್ತು ಲಕ್ಷ ಶೌಚಾಲಯಗಳು ಪತ್ತೆಯೇ ಇಲ್ಲದಂತೆ ಆಗಿವೆ.
ಸಚಿವ ಪಾಟೀಲರ ಪ್ರಕಾರ ರಾಜ್ಯದಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಪರಾತಪರಾ ನಡೆದಿದೆ. ಸರ್ಕಾರಿ ಕಡತಗಳ ಪ್ರಕಾರ ಈ ಯೋಜನೆಯಂತೆ ರಾಜ್ಯದಲ್ಲಿ 3.52 ಲಕ್ಷ ಕಾಮಗಾರಿಗಳು ನಡೆದಿವೆ. ಹಾಗೆಂದು ದಾಖಲೆಗಳು ತಿಳಿಸುತ್ತವೆ. ಆದರೆ ವಿವರಗಳು ಸಿಕ್ಕಿರುವುದು ಸುಮಾರು 10,000 ಕಾಮಗಾರಿಗಳಿಗೆ ಮಾತ್ರ. ಉಳಿದ ಕೆಲಸಗಳ ಹೆಸರಿನಲ್ಲಿ ಹಣ ಪಡೆಯಲಾಗಿದೆ. ಗ್ರಾಮಸ್ಥರಿಂದ ಗ್ರಾಮಸ್ಥರಿಗಾಗಿಯೇ ರೂಪುಗೊಂಡಿರುವ ಪಂಚಾಯಿತಿ ರಾಜ್ಯ ವ್ಯವಸ್ಥೆ ಕರ್ನಾಟಕದಲ್ಲಿ ಕುಸಿದು ಬಿದ್ದಿರುವಂತಿದೆ. ನಿಜಕ್ಕೂ ಇದೊಂದು ದೊಡ್ಡ ದುರಂತವೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

