ಅನ್ನಭಾಗ್ಯದ ಬೇಡದ ಕಾಣಿಕೆ
ಬಡವರಿಗೆ, ಕಡು ಬಡವರಿಗೆ ಹಸಿವೆಯಿಂದ ಮುಕ್ತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ 'ಅನ್ನಭಾಗ್ಯ', 'ಅಮ್ಮ ಭಾಗ್ಯ' ಯೋಜನೆಗಳಿಂದ ಅನಪೇಕ್ಷಿತವಾಗಿ ದೊರೆಯಬಹುದಾದ ಕಾಣಿಕೆ ಎಂದರೆ ಧಾನ್ಯ ಪೇಟೆಯ ಕಳ್ಳ ಮಾರಾಟ ಹಾಗೂ ಬೆಲೆ ಕುಸಿತ.
ಜಗತ್ತಿನಲ್ಲಿ ಯಾವ ದೇಶದಲ್ಲೂ ಇಂತಹ ಮಹಾನ್ ಯೋಜನೆ ಜಾರಿಯಲ್ಲಿಲ್ಲ. ಆದ್ದರಿಂದ ಈ ಯೋಜನೆಯನ್ನು ರೂಪಿಸುವಾಗ, ಬಡವರೆಂದರೆ ಯಾರು, ಅವರಿಗೆ ನಿಜವಾಗಲೂ ಬೇಕಾದ ಧಾನ್ಯದ ಪ್ರಮಾಣ ಎಷ್ಟು ಎನ್ನುವ ಅಂಕಿಯನ್ನು ಸರಿಯಾಗಿ ಸಂಗ್ರಹಿಸಬೇಕು ಹಾಗೂ ಕಡುಬಡವರಿಗೆ ನಿಜವಾಗಲೂ ಎಷ್ಟು ಬೆಲೆ ಕೊಡುವುದು ಸಾಧ್ಯ ಎನ್ನುವುದೂ ಸರಿಯಾಗಿ ಅಂದಾಜಾಗಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ಈ ಜನಕಲ್ಯಾಣ ಯೋಜನೆಗಳನ್ನು ಓಟ್ ಬ್ಯಾಂಕ್‌ಗಳ ಸೃಷ್ಟಿಗೆ ಬಳಸಬಾರದು. ಈಗ ಜಾರಿಗೆ ಬಂದಿರುವ ಸ್ವರೂಪದಲ್ಲಿ ಈ ಯೋಜನೆ, ದೇಶದಲ್ಲಿ ಅಕ್ಕಿ-ಗೋದಿಗೆ ವ್ಯಾಪಕವಾದ ಕಳ್ಳಪೇಟೆಯನ್ನು ಸೃಷ್ಟಿಸುವ ಲಕ್ಷಣಗಳು ಕಂಡುಬರುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ (ರಾಜ್ಯದ ಇತರ ನಗರಗಳಲ್ಲೂ ಹಾಗೇ ಆಗಿರಬಹುದು) ಬಡವರು ರುಪಾಯಿಗೊಂದು ಕೇಜಿ ದರದಲ್ಲಿ ಕೊಳ್ಳಬೇಕಾದ ಅಕ್ಕಿಯನ್ನು ಮುಂಗಡವಾಗಿಯೇ ಮಾರಾಟ ಮಾಡುವ ಜಾಲ-ಸೃಷ್ಟಿಯಾಗಿರುವಂತಿದೆ. ಅದರ ಪರಿಣಾಮ ನಿಜಕ್ಕೂ ಅಪಾಯಕಾರಿ. ಸರ್ಕಾರ ಬಹಿರಂಗವಾಗಿ ಅಗ್ಗದ ಅಕ್ಕಿಯ ಕಳ್ಳಮಾರಾಟವನ್ನು ಅಲ್ಲಗಳೆಯಬಹುದು. ಆದರೆ ಕಳ್ಳ ಪೇಟೆ ಇರುವುದು ನಿಜ ಎನ್ನುವುದು ಸರ್ಕಾರಕ್ಕೂ ಗೊತ್ತು. ಅದನ್ನು ತಪ್ಪಿಸಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

