ತಪ್ಪಾಯ್ತು ತಿದ್ಕೋತೀವಿ
ಬಾಗಲಕೋಟದ ಹುನಗುಂದದಿಂದ ಸಂಗಪ್ಪ ನೂ. ಗಾಣಿಗೇರ ಅವರು ಬರೆಯುತ್ತಾರೆ- 'ತಮ್ಮ 'ಸಾಪ್ತಾಹಿಕ ಪ್ರಭ' ಅ.13ರ ರಮಟ (!) ದಲ್ಲಿ ಅಂಬಾರಿ ಕತೆ ವಿವರಿಸುವಾಗ ಮಹಾರಾಷ್ಟ್ರದ 'ದೇವಗಿ' ಎಂಬುದು 'ದೇವಗಿರಿ' ಅಂತಾಗಬೇಕಿತ್ತು. ಅದಲ್ಲದೇ 'ಇದ್ದಿತು' ಅಂಬುದು 'ಇತ್ತು' ಅಥವಾ 'ಇದ್ದಿತ್ತು' ಅಂತಾ ಆಗಬೇಕಲ್ಲವೇ?'
'ದೇವಗಿರಿ ನಾಶವಾದ ವೇಳೆ ಬದಲಾಗಿ ಮೇಲೆ ಎಂತು ಬರೆಯಬೇಕಾಗಿತ್ತಲ್ಲವೇ? ಇದನ್ನು ದೇವಗಿರಿಯ ರಾಜ ಎಂದು ಬರೆದು ರಾಜನ ಮುಂದೆ 2 (ರಾವಣ) ಬರೆಯಬೇಕಾಗಿತ್ತು. ರಾಜನ ಮಂದೆ ಕಾಮಾ (,) ಬರೆಯದಿದ್ರೆ ಮುನ್ನುಡಿ ಸಿಂಗ ನಾಯಕನೇ ದೇವಗಿರಿಯ ರಾಜ ಅಂತಾ ಅರ್ಥವಾಗುತ್ತಿದೆ.'
'ಅದರಂತೆ 'ಸಾಪ್ತಾಹಿಕಪ್ರಭ'ದ ಪುಟ 5ರಲ್ಲಿ 'ದೇವಿಯರಿಗೆ ಉಘೇ' ಲೇಖನದಲ್ಲಿ ಫತ್ತರ್ಗಿ ಭಾಗಮ್ಮನ ಕಥೆ ವಿವರಿಸುವಾಗ, ದೇವಿ ಆರಾಧಕರು ಸಸಿ ಹಾಕುವುದು ಅಂತಾಬರೆದಿದ್ದಾರೆ. ಅದು ಸಿಡಿ ಹಾಕುವುದು ಅಂತಾಗಬೇಕಿತ್ತಲ್ಲವೇ? ಅದರಂತೆ ಭಕ್ತರು ಉರುಲು ಸೇವೆ ಮಾಡುತ್ತಾರೆ ಅಂತಾ ತಪ್ಪು ಬರೆದಿದ್ದಾರೆ. ಉರುಲು ಅಪರಾಧ. ಅದು ಉರುಳು ಸೇವೆ ಅಂತಾಗಬೇಕಿತ್ತು' ಎಂದಿದ್ದಾರೆ.
ದಾವಣಗೆರೆಯಿಂದ ಟಿ.ಆರ್. ಹೇಮಂತಕುಮಾರ್ ಅವರು ಬರೆಯುತ್ತಾರೆ- 'ಅ.12ರಂದು ಮೊದಲನೇ ಪುಟದಲ್ಲಿ ಕಾಲುಬಾಯಿಗೆ ಪರಿಹಾರ ವಿಷಯದಲ್ಲಿ ಮೊದಲನೇ ಸಾಲಿನಲ್ಲಿ ಅಸು ನೀಗಿರುವ ಹಸುಗಳಿಗೆ ತಲಾ 25 ಸಾವಿರ ರು. ಪರಿಹಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಂದುವರಿಯುತ್ತದೆ. ಅಸು ನೀಗಿರುವ ಹಸುಗಳ ಮಾಲಕರಿಗೆ ಪರಿಹಾರ ನೀಡಲು ಸಚಿವ ಸಂಪುಟಕ್ಕೆ ತೊಂದರೆಯೇ? ಜನಸಾಮಾನ್ಯರ ವಿಷಯದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುತ್ತಾರೆ. ಅದೇ ರೀತಿ ಅಸು ನೀಗಿರುವ ಹಸುಗಳ ಮಾಲೀಕರಿಗೆ ಎಂದಾಗಬೇಕಿತ್ತು.'
'ಅದೇ ರೀತಿ ಸಂಪಾದಕೀಯ ಅಂಕಣದಲ್ಲಿ (ಇದೇ ದಿನ) 'ಹೈಕೋರ್ಟ್ ಮಹತ್ವದ ತೀರ್ಪು' ವಿಷಯದಲ್ಲಿ ಕಡೆಯ ಪ್ಯಾರಾದ ಹಿಂದಿನ ಪ್ಯಾರಾದಲ್ಲಿ ತೀರ್ಪನ್ನು ಜಾತ್ಯತೀತ ಜನತಾದಳದ ನಾಯಕರು ಹೈಕೋರ್ಟ್ನ ವಿಭಾಗೀಯ ಪೀಠದ ಸುಪ್ರಿಂಕೋರ್ಟಿನಲ್ಲಿ ಪ್ರಶ್ನಿಸಬಹುದು. ಕಾಯಿದೆಯಂತೆ ಆ ಅಧಿಕಾರ ಅವರಿಗೆ ಇದೆ ಎಂದಿದ್ದೀರಿ.'
'ಜಿಲ್ಲಾ ನ್ಯಾಯಾಲಯದ ನಂತರದ ಮೇಲ್ಮನವಿಯ ಕೋರ್ಟ್ ಹೈಕೋರ್ಟ್ ಆಗಿದೆ. ಅಂತೆಯೇ ಹೈಕೋರ್ಟ್ನ ನಂತರದ ಮೇಲ್ಮನವಿಯ ಕೋರ್ಟ್ ಸುಪ್ರಿಂಕೋರ್ಟ್ ಆಗಿರುತ್ತದೆ. ಅದು ಹೈಕೋರ್ಟ್ನ ವಿಭಾಗೀಯ ಪೀಠವಲ್ಲ ಹೈಕೋರ್ಟ್ ನಂತರದ ಮೇಲ್ಮನವಿಯ ನ್ಯಾಯಾಲಯ ಸುಪ್ರಿಂ ಕೋರ್ಟ್ ಆಗಬೇಕು.
ಅಂತೆಯೇ ಜಾತ್ಯತೀತ ಜನತಾದಳದವರಿಗೆ ಕೇವಲ ಹಕ್ಕು ಇದೆ. ಮೇಲ್ಮನವಿ ಸಲ್ಲಿಸಲು ಅಧಿಕಾರ ಇರುವುದಿಲ್ಲ. ಅಲ್ಲಿ ಅಧಿಕಾರ ಪದದ ಬದಲು ಹಕ್ಕು ಪದ ಬಳಕೆಯಾಗಬೇಕಿತ್ತು ಎಂದು ವಿಷಾದದಿಂದ ತಿಳಿಸುತ್ತಿದ್ದೇನೆ' ಎಂದಿದ್ದಾರೆ.
ಹೇಮಂತಕುಮಾರ್ ಹೇಳಿದಂತೆ ತಪ್ಪಾಗಿಲ್ಲ. ಬದಲಾಗಿ 'ಜಾತ್ಯತೀತಜನತಾದಳದ ನಾಯಕರು ಹೈಕೋರ್ಟ್ನ ವಿಭಾಗೀಯ ಪೀಠದ ಸುಪ್ರೀಂಕೋರ್ಟ್ನಲ್ಲಿ' ಎಂಬಲ್ಲಿ 'ವಿಭಾಗೀಯ ಪೀಠದ ತೀರ್ಪನ್ನು' ಎಂದಾಗಬೇಕಿತ್ತು. ಆಗ ಯಾವುದೇ ಗೊಂಲಕ್ಕೆ ಅವಕಾಶ ಇರುತ್ತಿರಲಿಲ್ಲ. 'ತೀರ್ಪನ್ನು' ಎಂಬ ಶಬ್ದ ಬಿಟ್ಟುಹೊಗಿದೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

