ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಶೇಷಾದ್ರಿಪುರಂನಿಂದ ರವಿಕುಮಾರ ಜಿ.ಬಿ. ಅವರು ಬರೆಯುತ್ತಾರೆ- 'ನನ್ನ ಪ್ರೀತಿಯ ಪತ್ರಿಕೆ 'ಕನ್ನಡಪ್ರಭ'ದಲ್ಲಿ ಹಿಂದೆ ಒಮ್ಮೆ ಪತ್ರಿಕೆಯಲ್ಲಿ ಒಂದು ವಿಷಯ ಎರಡು ಕಡೆ ಪ್ರಕಟಗೊಂಡಿತ್ತು. ಈಗ ಮತ್ತೆ ಅದೇ ತಪ್ಪು ಆಗಿದೆ.'
'ಅ.16ರ ಸಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಆಡಿದ ಮಾತುಗಳ ವರದಿ ಪುಟ 5, ಪುಟ 12 ಮತ್ತು ಪುಟ 13ರಲ್ಲಿ ಹೀಗೆ ಮೂರು ಪುಟಗಳಲ್ಲಿ ಪ್ರಕಟವಾಗಿದೆ' ಎಂದಿದ್ದಾರೆ.
ಪತ್ರದ ಜತೆಗೆ ಅವರು ಮೂರೂ ಪುಟಗಳಲ್ಲಿ ಪ್ರಕಟವಾದ ವರದಿಯ ತುಣುಕುಗಳನ್ನು ಕಳುಹಿಸಿದ್ದಾರೆ. ಕಣ್ಮುಂದೆ ತಪ್ಪು ಸ್ಪಷ್ಟವಾಗಿ ಕಾಣುವಾಗ ಒಪ್ಪಿಕೊಳ್ಳುವುದು ಬಿಟ್ಟು ಬೇರೆ ದಾರಿಯಿಲ್ಲ.
ಉಡುಪಿಯ ಸಾಸ್ತಾನದಿಂದ ಪಾಮರ ಚಡಗ ಅವರು ಬರೆಯುತ್ತಾರೆ- 'ಅ.18ರಂದು ಪತ್ರಿಕೆಯ ಮುಖಪುಟದ ಮೊದಲ ಸುದ್ದಿ 'ಮತ್ತೇಳು ಬಂದರಿಗೆ...' ಇದರ ಸುದ್ದಿ ವಿವರದ ಏಳನೇ ಸಾಲಿನಲ್ಲಿ 'ರಫ್ತಾಗಿರುವುದು ಹಾಗೂ ಜನಾರ್ದನ ರೆಡ್ಡಿ ಹಾಗೂ' ಅಂತ ಇದೆ. ಇಲ್ಲಿ ಎರಡು ಬಾರಿ 'ಹಾಗೂ' ಪದ ಪ್ರಯೋಗವಾಗಿದೆ.'
'ಅದೇ ಸುದ್ದಿಯಲ್ಲಿ ಬರುವ ಉಪಶೀರ್ಷಿಕೆ 'ಮೂರು ಕ್ಷೇತ್ರಗಳೀಗ ಅನಾಥ' ಸುದ್ದಿಯ ಮೂರನೇ ಸಾಲಿನಲ್ಲಿ 'ಈದೀಗ' ಅಂತ ಇದೆ. ಅದು ಬಹುಶಃ 'ಇದೀಗ' ಅಂತಾಗಬೇಕಿತ್ತು ಅನಿಸುತ್ತೆ.'
'ಪುಟ 11ರ 'ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹ ಆರೋಪ' ಶೀರ್ಷಿಕೆಯ ಸುದ್ದಿ ವಿವರಣೆಯ ಕೊನೆಯ ಸಾಲಿನಲ್ಲಿ 'ಹುಟ್ಟಿಹಾಕಿತ್ತು' ಪದ ಸರಿ ಅನ್ನಿಸಲಿಲ್ಲ.'
'ಪುಟ 7ರ 'ಪದ ಪದರ'ದಲ್ಲಿ 'ಲಿಂಗ' ಇದರ ವಿವರಣೆಯಲ್ಲಿ ಇನ್ನೊಂದು ವಿವರಣೆ ಸೇರಿಸಬಹುದಿತ್ತು. 'ಈಶ್ವರ ಅರ್ಥಾತ್ ದೇವರು ಸ್ತ್ರೀಲಿಂಗವೂ ಅಲ್ಲ, ಪುಲ್ಲಿಂಗವೂ ಅಲ್ಲ, ನಪುಂಸಕ ಲಿಂಗವಂತೂ ಅಲ್ಲವೇ ಅಲ್ಲ (ಅರ್ಧನಾರೀಶ್ವರನನ್ನು ಇಲ್ಲಿ ನೆನಪಿಸಿಕೊಳ್ಳಬಹುದು)' ಈಶ್ವರ 'ಮಹಾಲಿಂಗ' ಹಾಗಾಗಿ, ಭಾರತದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ 'ಮಹಾಲಿಂಗೇಶ್ವರ' ದೇವಸ್ಥಾನಗಳನ್ನು ಕಾಣಬಹುದು' ಎಂದಿದ್ದಾರೆ.
'ಪದ ಪದರ' ಅಂಕಣ ಓದಿದ ನಂತರ ನಿಮಗೆ ಆ ಪದದ ಇನ್ನೊಂದು ಅರ್ಥ ಹೊಳೆಯಬಹುದು. ಬರೆಯುವಾಗಲೇ ವಿಶ್ವನಾಥ ಸುಂಕಸಾಳ ಅವರಿಗೆ ಇನ್ನೂ ಹಲವು ಅರ್ಥಗಳು ಹೊಳೆದಿರಲೂ ಸಾಕು. ಆದರೆ ಅವರು ಹೊಳೆದಿದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ. ಅದರಲ್ಲಿ ಉತ್ತಮ ಅನ್ನಿಸಿದ್ದನ್ನು ಮಾತ್ರ ಆರಿಸಿ ಬರೆಯುತ್ತಾರೆ. ಲೇಖಕರಿಗೆ ಹೊಳೆದ ಅರ್ಥಗಳು ಓದುಗರಿಗೂ ಹೊಳೆದಿರಲು ಸಾಕು. ಹೊಸ ಅರ್ಥಗಳು ಹೊಳೆದಿರಲೂ ಸಾಕು. ಅದಕ್ಕೆ ಸಾಧ್ಯತೆಗಳು ಅಪಾರ. ಅದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಪತ್ರಿಕೆಯಲ್ಲಿ ಅಂಕಣಕ್ಕೆ ಜಾಗದ ಮಿತಿಯಿದೆ. ಹಾಗಾಗಿ ಅಷ್ಟನ್ನೇ ಪ್ರಕಟಿಸಲು ಸಾಧ್ಯ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

