ಹುಡುಗನೊಬ್ಬ ತನ್ನ ಗರ್ಲ್ಫ್ರೆಂಡ್ ಮನೆಗೆ ಹೋಗಿ, ತಮ್ಮಿಬ್ಬರ ಮದುವೆ ಮಾಡುವಂತೆ ಆಕೆಯ ತಂದೆಯ ಬಳಿ ಹೇಳಿದ..
ಹುಡುಗಿಯ ಅಪ್ಪ: "ನನ್ನ ಮಗಳನ್ನ ಮದುವೆ ಆಗ್ತೀಯಾ? ಏನು ಕೆಲ್ಸ ಮಾಡೋದು?"
ಹುಡುಗ: ನಿನ್ನೆ ತಾನೆ ಜೈಲಿಂದ ಹೊರಗೆ ಬಂದೆ. ಇನ್ಮೇಲೆ ಹುಡುಕ್ತೀನಿ.
ಹುಡುಗಿಯ ಅಪ್ಪ: ಎಷ್ಟು ಧೈರ್ಯ ನಿನಗೆ, ಇಂಥ ಕೆಟ್ಟ ಹಿನ್ನೆಲೆ ಇದ್ದವನಿಗೆ ನನ್ನ ಮಗಳನ್ನ ಕೊಡ್ತೀನಿ ಅನ್ಕೊಂಡ್ಯಾ. ಸಾಧ್ಯಾನೇ ಇಲ್ಲ. ಅಂದಹಾಗೆ ಜೈಲಲ್ಲಿ ಯಾಕೆ ಇದ್ದೆ?
ಹುಡುಗ: ನಾನೊಬ್ಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದೆ...
ಹುಡುಗಿಯ ಅಪ್ಪ: ಯಾಕೆ?
ಹುಡುಗ: ತನ್ನ ಮಗಳನ್ನ ನನ್ನ ಜೊತೆಗೆ ಮದುವೆ ಮಾಡಿಕೊಡೋದಕ್ಕೆ ಅವನು ಒಪ್ಪಲಿಲ್ಲ!
ಹುಡುಗಿಯ ಅಪ್ಪ: ಮತ್ತೆ ಏನು ಸಮಾಚಾರ ಅಳಿಯಂದ್ರೆ. ಅಪ್ಪ ಅಮ್ಮ ಹೇಗಿದಾರೆ?!
Advertisement