ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಕಾರ್ನಾಡಿನಿಂದ ಎಂ. ಸುಬ್ರಹ್ಮಣ್ಯ ಭಟ್ ಬರೆಯುತ್ತಾರೆ- 'ಆ.30 ರ ಪತ್ರಿಕೆಯಲ್ಲಿ 'ವಾರಿಧಿಯ ವಿವರಿಸಿದವರುಂಟೆ ವರಾಹನ ತರಹ' ಲೇಖನದಲ್ಲಿ ವರಾಹಮಿಹಿರನ ಕೃತಿಗಳು ತಪ್ಪಾಗಿ ಮುದ್ರಿಸಲ್ಪಟ್ಟಿವೆ. ಅವನ ಕೃತಿಗಳ ಹೆಸರು ಹೀಗಿವೆ-
1. ಬೃಹಜ್ಜಾತಕ.
2. ಲಘು ಜಾತಕ.
3. ಬೃಹತ್ ಸಂಹಿತಾ.
4. ಯೋಗ ಯಾತ್ರಾ.
5. ಪಂಚ ಸಿದ್ಧಾಂತಿಕಾ.
6. ವಿವಾಹ ಪಟಲ.
7. ಷಟ್ ಪಂಚಾಶಿಕಾ.
ಲೇಖನದಲ್ಲಿ (ಮುದ್ರಣದಲ್ಲಿ) ಇನ್ನೂ ಅನೇಕ ತಪ್ಪುಗಳಿವೆ-ಕತೃ (ಕರ್ತೃ)... ವಹತಿ ಸಪ್ತನಮಾ (..ವಹತಿ ಸಪ್ತ ನಾಮಾ), ವಿಷದ (ವಿಶದ)... ಆದರೂ ಲೇಖನ ಚೆನ್ನಾಗಿದೆ' ಎಂದಿದ್ದಾರೆ.
ರಾಮನಗರದಿಂದ ಮಾಗಡಿ ಶ್ರೀನಿವಾಸ ಅವರು ಬರೆಯುತ್ತಾರೆ- 'ಆ.27ರ ಕ.ಪ್ರ. 9ನೇ ಪುಟದಲ್ಲಿ 'ಆರ್.ಟಿ.ಇ. ದೂರು ನೀಡೋದಿನ್ನು ಸಲೀಸು' ಶೀರ್ಷಿಕೆಯ 3ನೇ ಪ್ಯಾರಾದ ಮೊದಲ ಪದ 'ಕರಡು' ಬದಲಾಗಿ 'ಕರುಡು' ಎಂದು ಮುದ್ರಣಗೊಂಡಿದೆ. ಹಾಗೆಯೇ 4ನೇ ಪ್ಯಾರಾದ 3ನೇ ಸಾಲಿನಲ್ಲಿ 'ಶಿಕ್ಷಣವನ್ನು' ಎಂಬ ಪದದಲ್ಲಿ 'ಣ' ಕಾಣೆಯಾಗಿ 'ಶಿಕ್ಷವನ್ನು' ಆಗಿದೆ. ಇದೇ ಸುದ್ದಿಯ 7ನೇ ಪ್ಯಾರಾದಲ್ಲಿ (2ನೇ ಸಾಲು) 'ಈಗಾಗಲೇ ಸ್ಥಳೀಯ ಪ್ರಾಧಿಕಾರ ಇದ್ದರೂ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಾಲಿದೆ. ಇದು 'ಸಮರ್ಪಕವಾಗಿ' ಎಂದರೆ ವಾಕ್ಯ ಅರ್ಥಗರ್ಭಿತವಾಗುತ್ತದಲ್ಲವೆ?'
'ಹಾಗೆಯೇ ಪತ್ರಿಕೆಯಲ್ಲಿ (ಆಗಸ್ಟ್ 26 ಹಾಗೂ ಆಗಸ್ಟ್ 27 ಸೇರಿ) ತಿಳುವಳಿಕೆ, ನಡವಳಿಕೆ, ಮೆರವಣಿಗೆ - ಈ ಮೂರು ಪದಗಳ ಬಳಕೆಯಾಗಿದೆ. ಈ ಹಿಂದೆ ಈ ಪದಗಳ ಶುದ್ಧರೂಪವನ್ನೂ ಕೂಡ ತಮ್ಮ ಅಂಕಣದಲ್ಲಿಯೇ ಪ್ರಕಟಿಸಿದ್ದೀರಿ. (ತಿಳಿವಳಿಕೆ, ನಡವಳಿಕೆ, ಮೆರವಣಿಗೆ) ಆದರೂ ರೂಢಿಯಲ್ಲಿರುವ ಪದಗಳೆಂದು ತಾವು ಪ್ರಸ್ತಾಪಿಸಿದ್ದು ನೆನಪಿದೆ.'
'ಕೆಲವು ಪದಗಳು ರೂಢಿಯಲ್ಲಿವೆ ನಿಜ. ಆದರೆ, ಅದೇ ರೂಪ ಮುಂದುವರಿದರೆ ಮುಂದೊಂದು ದಿನ ಕನ್ನಡದ ಶುದ್ಧರೂಪವೇ ಮರೆಯಾಗುವ ಅಪಾಯವಿದೆ. ಪ್ರತಿಯೊಬ್ಬರೂ ಶಬ್ದಕೋಶವನ್ನು ನೋಡಿ ಕಲಿಯಲು ಸಾಧ್ಯವಿಲ್ಲ. ಆದರೆ ಬಹುಪಾಲು ಮಂದಿ ಪತ್ರಿಕೆಯನ್ನಂತೂ ಓದುತ್ತಾರೆ. ಹೀಗಾಗಿ ಪತ್ರಿಕೆಗಳಲ್ಲಿಯೇ ಕನ್ನಡದ ಶುದ್ಧ ರೂಪಗಳನ್ನು ಪರಿಚಯಿಸುವುದು ಒಳ್ಳೆಯದಲ್ಲವೆ? ಇದು ತುಸು ಹೊರೆ ಎನಿಸಿದರೂ ಕನ್ನಡಕ್ಕಾಗಿ ನಾವು ನೀಡುವ 'ಕಿರುಕಾಣಿಕೆ' ಎಂದು ಭಾವಿಸಬಹುದು. ತಮ್ಮ ಪ್ರಯತ್ನ ಮುಂದುವರಿಯಲಿ' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.