ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಕ್ರೀಡಾಪ್ರೇಮಿಗಳ ಬೇಕು ಬೇಡಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಕರಾರುವಾಕ್ಕಾಗಿ 'ಸರ್ವ್' ಮಾಡುವ 'ಕನ್ನಡಪ್ರಭ' ಯು ಎಸ್ ಓಪನ್ ಟೆನಿಸ್ ಪಂದ್ಯಾವಳಿಯುನ್ನು ವರದಿ ಮಾಡುವಲ್ಲಿ ಸೆ.3ರಂದು 'ಡಬಲ್ ಫಾಲ್ಟ್' ಮಾಡಿ 'ಮುಖಪುಟ ಭಂಗ' ಅನುಭವಿಸಿದೆ ಎಂದು ತಿಳಿಸಲು ವಿಷಾದವಾಗುತ್ತೆ.'
'ಬ್ರಿಟನ್ ದೇಶದ ಖ್ಯಾತಿಯ ಮರ್ರೆ ಮಹಾಶಯ ಹಾಗೂ ಹೆವಿಟ್ ಕ.ಪ್ರ. ಸಂಚಿಕೆಯ ಮುಖಪುಟ ಕಣ್ಣಾಡಿಸಿದ್ದೇ ಆದಲ್ಲಿ ಕೋರ್ಟ್‌ನಲ್ಲೇ ಕುಸಿದು ಬೀಳುವುದು ಖಾತರಿ. ಮುಖಪುಟದಲ್ಲಿ ಮರ್ರೆ ಕ.ಪ್ರ ಕರುಣೆಯಿಂದಾಗಿ ಕ್ವಾರ್ಟರ್ ಫೈನಲ್ ಆಗಲೇ ತಲುಪಿದ್ದಾಗಿದೆ. ಹೆವಿಟ್ ಕೂಡ ಹನ್ನೆರಡನೇ ಪುಟದಲ್ಲಿ ಮಾತ್ರ ಹದಿನಾರರ ಹಂತಕ್ಕೆ, ಅಂದರೆ ಪ್ರಿಕ್ವಾರ್ಟರ್ ಫೈನಲ್ ಹಂತಕ್ಕೆ!' ಎಂದಿದ್ದಾರೆ.
ಬೆಂಗಳೂರಿನಿಂದ ರಾಜೀವ್ ಪಟವರ್ಧನ್ ಅವರು ಬರೆಯುತ್ತಾರೆ- 'ಆ.30ರಂದು 'ಸಿನಿ ಪ್ರಭ' (ಹನಿ ಹನಿ ಕಹಾನಿ) ವರದಿಯಲ್ಲಿ ಗೊಂದಲವಾಗಿದೆ. ಪುಟ 4ರಲ್ಲಿ 'ಇರುವುದೆಲ್ಲವ ಬಿಟ್ಟು ಚಿತ್ರ ವೈರಾಗ್ಯ'ದ ವರದಿಯಲ್ಲಿ ಪ್ರೊತಿಮಾ ಬೇಡಿಯ ಬಗ್ಗೆ ಲೇಖನವನ್ನು 'ನಾಗೇಶ್ ಸೂರ್ಯ' ಅವರು ಬರೆದಿದ್ದಾರೆ. ಆದರೆ ವರದಿ ಓದಿದರೆ ಅದು ಪೂಜಾ ಬೇಡಿ ಬಗ್ಗೆ ಇದೆ ಮತ್ತು ಪೂಜಾ ಬೇಡಿ ಇನ್ನೂ ಜೀವಂತವಿದ್ದಾರೆ. ವರದಿಯನ್ನು ಓದಿದರೆ 'ಪ್ರೋತಿಮ ಬೇಡಿ' ಖ್ಯಾತ ಒಡಿಸ್ಸಿ ನೃತ್ಯಗಾರ್ತಿ. ಅವರು ನೃತ್ಯಗ್ರಾಮ ಸ್ಥಾಪನೆಗಾಗಿ ಮಾನಸ ಸರೋವರದಲ್ಲಿ ನೆಲಸಿ, ಭೂ ಕುಸಿತದಿಂದಾಗಿ ಮೃತಪಟ್ಟರು. ವರದಿಯಲ್ಲಿ ಗೊಂದಲವೆನಿಸುತ್ತದೆ.'
'ಆ.31ರ ಪತ್ರಿಕೆಯಲ್ಲಿ 31.08.2013 ಇಂದಿನ ಪತ್ರಿಕೆಯ ಪುಟ9 ರ 'ಪದಪದರ'ದ ಚಿತ್ರ ಅಷ್ಟು ಸರಿಕಾಣಿಸಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ 'ವೃದ್ಧ'ರಿಗೆ ಅವರದ್ದೇ ಆದ ಸ್ಥಾನಮಾನ ಇದೆ. ಇದು ಅಂತರ್ಜಾಲದ ಚಿತ್ರ ಎಂದು ಹೇಳಿ ಜಾರಿಕೊಳ್ತೀರಿ. ನಮ್ಮ ನಾಡಿನಲ್ಲಿ ಎಷ್ಟು ವೃದ್ಧ-ವೃದ್ಧೆಯರು ಸಂತೋಷ ಕೂಟದಲ್ಲಿ ಭಾಗಿಯಾಗುವ ಅದೆಷ್ಟು ಚಿತ್ರಗಳು ಸಿಗುವುದಿಲ್ಲ ಹೇಳಿ' ಎಂದಿದ್ದಾರೆ.
ವೃದ್ಧರಿಗೊಂದೇ ಅಲ್ಲ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ಥಾನಮಾನಗಳಿವೆ. ಹುಟ್ಟಿದ ದಿನ ಆಚರಣೆಗೆಂದು ಕೇಕ್ ಮೇಲೆ ಹಚ್ಚಿದ ಮೊಂಬತ್ತಿಯಲ್ಲಿ ಅವರು ಸಿಗರೇಟು ಹಚ್ಚಿಕೊಳ್ಳುತ್ತಿರುವ ಚಿತ್ರ ಉತ್ತಮ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ ಎಂಬ ಅಂಶ ಒಪ್ಪಿಕೊಳ್ಳವಂಥದ್ದೇ. ಆದರೆ ಹೀಗೆ ಮಾಡುವ ಜನರೂ ಪ್ರಪಂಚದಲ್ಲಿದ್ದಾರೆ ಎಂಬುದು ಕೂಡ ಅಷ್ಟೇ ಸತ್ಯ.
ಈ ಚಿತ್ರ ಪ್ರಕಟಿಸಿದ್ದರಿಂದ ದೇಶದ ವೃದ್ಧರಿಗೆಲ್ಲ ಅಪಮಾನ ಮಾಡಿದಂತೆ ಅಥವಾ ಅಗೌರವ ತೋರಿದಂತೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಉತ್ತಮ ಚಿತ್ರ ಪ್ರಕಟಿಸಲು ಅವಕಾಶವಿತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

