ತಪ್ಪಾಯ್ತು ತಿದ್ಕೋತೀವಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಶಂಕರನಾರಾಯಣ ಭಟ್ ಬರೆಯುತ್ತಾರೆ. 'ಮನಸ್ಸು ಮಾಡಿದರೆ ಯಾವ ಕಾರ್ಯವೂ ಅಸಾಧ್ಯವಲ್ಲವೆಂಬುದಕ್ಕೆ 'ಕನ್ನಡಪ್ರಭ'ದಲ್ಲಿ ಕಡಿಮೆಯಾಗುತ್ತಿರುವ ತಪ್ಪುಗಳೇ ನಿದರ್ಶನ. ಆದರೂ ಆ.27ರ ಸಂಚಿಕೆಯಲ್ಲಿ ಕೆಲವು ತಪ್ಪುಗಳು ನುಸುಳಿ ಬಿಟ್ಟಿವೆ.'
'ಪುಟ 9 'ಹಿರಿಯರ ಹಾದಿ' ಅಂಕಣ 20ನೇ ಸಾಲಿನಲ್ಲಿ, 'ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದ ಏಕೈಕ ಸಾಹಿತಿ ಜಾರ್ಜ್ ಬರ್ನಾಡ್ ಷಾ ಒಬ್ಬರೇ' ಅಂತ ಬರೆಯುವ ಅವಶ್ಯವಿತ್ತೇ? ಇಲ್ಲಿ 'ಏಕೈಕ' ಅಂದಮೇಲೆ ಮತ್ತೆ 'ಒಬ್ಬರೇ' ಅಂತ ಬರೆಯುವ ಅವಶ್ಯವಿತ್ತೇ?'
'ಶೇಖರ್ಗುಪ್ತ ಅವರ ಅಂಕಣದ 3ನೇ ಪ್ಯಾರಾದಲ್ಲಿ, 'ಯುಪಿಎ-2ದ ಮೊದಲ ವರ್ಷದಲ್ಲಿ...' ಅಂತ ಬರೆದಿದೆ. ಅದು ಯುಪಿಎ-2ರ ಅಂತ ಆಗಬೇಕಿತ್ತು. 8ನೇ ಪ್ಯಾರಾದ 5ನೇ ಸಾಲಿನಲ್ಲಿ 'ಪ್ರಾಂತ್ಯಗಳಲ್ಲಿ 5ದ ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಅಂತ ಬರೆದಿದೆ. ಇದು 5 ಸಾವಿರ ಅಂತಲೋ 50 ಸಾವಿರ ಅಂತಲೋ ತಿಳಿಯಲಿಲ್ಲ. ಪೂರಕ ಪ್ರತಿಕ್ರಿಯೆ ಅಂಕಣದ 3ನೇ ಸಾಲಿನಲ್ಲಿ ವಿನಾಯಕಭಟ್ ಮೂರೂರೂರವರು ಅಂತ ಬರೆದಿದೆ. ಒಂದು 'ರೂ' ಹೆಚ್ಚಾದಂತೆ ಕಂಡಿತು. 4ನೇ ಪ್ಯಾರಾದ 4ನೇ ಸಾಲಿನಲ್ಲಿ 'ಇಂತ್ತು ಮುಸ್ಲಿಮರೆಂದಾಕ್ಷಣ' ಅಂತ ಇದೆ, ಅದು 'ಇಂದು ಮುಸ್ಲಿಮರೆಂದಾಕ್ಷಣ' ಆಗಬೇಕಿತ್ತು. ಪುಟ 10ರ 'ಅಲ್ಪಸಂಖ್ಯಾತರ ಮಕ್ಕಳ ಸ್ಕಾಲರ್ಶಿಪ್ ಅನ್ಲೈನ್' ಶೀರ್ಷಿಕೆಯ 3ನೇ ಪ್ಯಾರಾದಲ್ಲಿ ಕೇಂದ್ರ 70ಯಷ್ಟು ತನ್ನ ಪಾಲು ನೀಡಿದ್ದು, ರಾಜ್ಯ 32 ಕೋಟಿ ಹೊಂದಿಸಿದ್ದು, ಈ ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ 102 ಕೋಟಿ ಲಭ್ಯವಿದೆ ಅಂತ ಬರೆದಿದೆ. ಇಲ್ಲಿ ಎರಡು ತಪ್ಪುಗಳು ಕಂಡುಬಂದಿವೆ. ಒಂದು, 70ರಷ್ಟು ಅಂತ ಆಗಬೇಕಾದದ್ದು ಇನ್ನೊಂದು 70 ಕೋಟಿಯಷ್ಟು ಅಂತ. ಇಲ್ಲವಾದರೆ 32 ಕೋಟಿಗೆ ರು. 70 ಕೂಡಿಸಿದರೆ 32 ಕೋಟಿ 70 ರೂಪಾಯಿ ಆಗುತ್ತದೆಯೇ ಹೊರತು 102 ಕೋಟಿ ಅಲ್ಲ.'
'ಪುಟ 13ರಲ್ಲಿ 'ಆರ್ಟಿಇ ದೂರು ನೀಡೋದಿನ್ನು ಸಲೀಸು' ಶೀರ್ಷಿಕೆಯ 4ನೇ ಪ್ಯಾರಾ 4ನೇ ಸಾಲಿನಲ್ಲಿ ಪ್ರಾಥಮಿಕ ಶಿಕ್ಷವನ್ನು ಎಂದು ಹೇಳಲಾಗಿದೆ. ಬದಲಾಗಿ ಶಿಕ್ಷಣ ಎಂದಾಗಬೇಕಿತ್ತು. 7ನೇ ಪ್ಯಾರಾದಲ್ಲಿ ಈಗಾಗಲೇ ಸ್ಥ್ಥಳೀಯ ಪ್ರಾಧಿಕಾರ ಇದ್ದರೂ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಅಂತ ಬರೆದಿದೆ. ಅದು ಸಮರ್ಪಕವಾಗಿ ಆಗಬೇಕು.' ಎಂದಿದ್ದಾರೆ.
ಮೈಸೂರಿನ ಭಾರ್ಗವಿ ಕುಲಕರ್ಣಿ ಪತ್ರ ಕಳುಹಿಸಿದ್ದಾರೆ. 'ಆ.28ರ ಬೈಟುಕಾಫಿಯ ಸುಹಾಸಿನಿಯಲ್ಲಿ 'ಮತ್ತೆ ಐಕೂ ಮಿಂಚು' ಶೀರ್ಷಿಕೆಯಡಿಯ ಸುದ್ದಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಾಮ್ಲೀಲಾದಲ್ಲಿ 'ಮಾಜಿ' ಐಶ್ವರ್ಯ ರೈ ಬಚನ್ (ಮಾಜಿ ಏಕೆ ತಿಳಿಯಲಿಲ್ಲ!) ಮುಂದುವರಿದ ಸುದ್ದಿ 'ರಾಮ್ಲೀಲಾ'ದಲ್ಲಿ ಮಾಜಿ ಪ್ರೇಮಿಗಳಾದ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಒಟ್ಟಿಗೆ ನಟಿಸುತ್ತಿದ್ದಾರೆ ಎಂದಿದೆ. ಆದರೆ ಅದು ರಣಬೀರ್ ಕಪೂರ್ ಅಲ್ಲ. ಅದು 'ರಣವೀರ್ ಸಿಂಗ್' ಎಂದಾಗಬೇಕಿತ್ತು. ಈತ ದೀಪಿಕಾ ಪಡುಕೋಣೆಯ ಮಾಜಿ ಪ್ರೇಮಿಯಲ್ಲ'.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

