ಚೀನಾ ಕನಸಿನ ಹಾದಿಯಲ್ಲಿ...
ನಮ್ಮ ಮುಖ್ಯಮಂತ್ರಿಗಳು ತಮಗೆ ಪ್ಯಾಂಟ್ ಸೂಟ್ ಸರಿ ಹೊಂದದು ಏನಿದ್ದರೂ ಪಂಚೆ ಸರಿ ಎಂದು ಹೇಳಿ ನಮ್ಮ ಕರ್ನಾಟಕದ ವಸ್ತ್ರ ಪರಂಪರೆಯನ್ನು ಬಿಂಬಿಸಿರುವುದು ಶ್ಲಾಘನೀಯ. ಅದರ ಜತೆಯಲ್ಲೇ ಅವರು ಮೈಸೂರು- ಬೆಂಗಳೂರು ನಡುವೆ ಬುಲೆಟ್ ಟ್ರೈನ್ ತರಲು ಜಪಾನ್ನೊಂದಿಗೆ ಕೈ ಜೋಡಿಸುವ ಯೋಚನೆ ಹರವಿಟ್ಟಿದ್ದಾರೆ. ಇದರಿಂದ 30 ನಿಮಿಷದಲ್ಲಿ ಪ್ರಯಾಣ ಮಾಡಬಹುದು ಹಾಗು ವಿದೇಶಿ ನೇರ ಬಂಡವಾಳ ಹೂಡಿಕೆಯು ಆಗುತ್ತದೆ ಎಂಬ ವಿಚಾರವೇನೊ ಸರಿ. ಇದರಿಂದ ಹೊಸ ತಂತ್ರಜ್ಞಾನ ನಮಗೆ ದೊರೆತು ನಮ್ಮ ಆರ್ಥಿಕ ಸಂಕಷ್ಟ ತಾತ್ಕಾಲಿಕವಾಗಿ ಸರಿಹೋಗಬಹುದು. ಆದರೆ ಇದೇ ನಮಗೆ ನಾಳೆ ಮುಳುವಾಗಿ ರಾಜ್ಯ ಹಾಗು ದೇಶವನ್ನು ಸಂಕಷ್ಟಕ್ಕೆ ಒಡ್ಡುತ್ತದೆ.
ವಿದೇಶಿ ನೇರ ಬಂಡವಾಳ ಹೂಡುವ ಯಾವುದೇ ಖಾಸಗಿ ಕಂಪನಿ ತನ್ನ ಲಾಭವನ್ನೇ ನೋಡುತ್ತದೆ ಹೊರತು ಇನ್ನೊಂದು ದೇಶದ ಏಳಿಗೆಯನ್ನಲ್ಲ. ನಮಗೆ ಬಂಡವಾಳ ಬಂದರೂ ನಂತರದಲ್ಲಿ ಖಾಸಗಿ ಕಂಪನಿಯ ಲಾಭ ತನ್ನ ಮಾತೃ ದೇಶಕ್ಕೆ.
ಇದರ ಬದಲು ನಮ್ಮಲ್ಲಿಯೇ ಇರುವ ತಜ್ಞರ ಜೊತೆ ಈ ಕುರಿತು ವಿಚಾರ ಪ್ರಸ್ತಾಪಿಸಿದರೆ ನಮ್ಮ ಬಲ ಏನು ಅನ್ನುವುದು ಗೊತ್ತಾಗುತ್ತದೆ. ನಮ್ಮ ಮಾಜಿ ರಾಷ್ಟ್ರಪತಿ ಹಾಗು ಟ್ಝಡಡ್ಝಟಜ ಟಛಟಿ ಎಂದೇ ಪ್ರಖ್ಯಾತರಾಗಿರುವ ಡಾ. ಅಬ್ದುಲ್ ಕಲಾಮ್ ಅವರು ತಮ್ಮ ್ಝ್ಜಟ್ಝಿಡಿಜಜ ಟ್ಝಟಿಜಡ ನಲ್ಲಿ ಹೇಳುತ್ತಾರೆ. ವಿದೇಶಿ ಕಂಪೆನಿಗಳ ತಂತ್ರಜ್ಞಾನದ ಗದ್ದಲ ನಮ್ಮ ಸಾಮರ್ಥ್ಯದ ಕಡೆಗೆ ನೋಡಲು ಬಿಡದಂತೆ ಮಾಡಿದೆ ಎಂದು.
ನಮ್ಮ ದೇಶ ಈ ಜಗತ್ತಿಗೆ ಎಲ್ಲ ಕೊಟ್ಟಿದೆ. ಭೌತಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಅರ್ಥಶಾಸ್ತ್ರ, ನೀರಾವರಿ, ಕೃಷಿ, ಪ್ರತಿಯೊಂದು ಕ್ಷೇತ್ರದಲ್ಲಿ ಒಬ್ಬ ಧೀಮಂತ ವ್ಯಕ್ತಿಯನ್ನು ನೋಡಬಹುದು. ನಮ್ಮ ಪೂರ್ವಜರು ಅದನ್ನು ಏನು ಸೌಲಭ್ಯಗಳಿಲ್ಲದೆ ನಮಗೆ ನೀಡಿದ್ದಾರೆ. ಇಂದು ನಮ್ಮಲ್ಲಿ ಏನಿಲ್ಲ, ಎಲ್ಲವೂ ಇದೆ. ಇರುವುದನ್ನು ಬಿಟ್ಟು ಇರದುದೆಡೆಗೆ ಜೀವನ ಎಂಬಂತೆ ನಾವು ಏಕೆ ನೋಡಬೇಕು?
ನಮ್ಮ ಉನ್ನತ ತಂತ್ರಜ್ಞಾನಕ್ಕೆ ಬೇಕಿರುವ ಎಲ್ಲವು ಕರ್ನಾಟಕದಲ್ಲೇ ಇದೆ. ನಿಪುಣ ವ್ಯಕ್ತಿಗಳು ಇದ್ದಾರೆ. ಬೆಂಗಳೂರಿನಲ್ಲಿ ಃಆಔ, ಏಆಔ, ಐಐಖ್ಛ, ಇಊಔ. ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆ, ಮೈಸೂರು, ಬೆಂಗಳೂರು, ಕೆಜಿಎಫ್ನಲ್ಲಿ ಇಊಂಔ. ಇನ್ನು ಹಲವು ಭಾರತೀಯ ಮೂಲದ ಕಂಪನಿಗಳು ಇವೆ. ಈ ಎಲ್ಲ ಸಂಸ್ಥೆಗಳನ್ನು ಸೇರಿಸಿ ನಮಗೆ ಬೇಕಾದ ತಂತ್ರಜ್ಞಾನಕ್ಕೆ ಅನುಗುಣವಾಗಿ ಗುಂಪುಗಳಾಗಿ ವಿಂಗಡಿಸಿ ರಾಜ್ಯಕ್ಕೆ ಬೇಕಾದ ತಂತ್ರಜ್ಞಾನ ತರಬಹುದು. ವಿದೇಶಿ ಕಂಪನಿ ಕೊಡುವ ಬಿಲ್ ಪಾವತಿ ಮಾಡುವ ಬದಲು ಅದೇ ಹಣವನ್ನು ನಮ್ಮಲಿರುವ ನಿಪುಣ ಗುಂಪುಗಳಿಗೆ ನೀಡಿ. ಇದರಿಂದ ನಮ್ಮ ಹಣ ನಮ್ಮಲ್ಲೇ ಉಳಿದು ಈ ಮಾರ್ಗದಲ್ಲಿ ಕೆಲಸ ಮಾಡುವವರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ. ಪ್ರತಿಭಾವಂತರು ವಿದೇಶಕ್ಕೆ ಹೋಗದೇ ಉದ್ಧಾರ ಸಾಧ್ಯವಿಲ್ಲ ಎಂಬಂತಿರುವ ಸ್ಥಿತಿ ಬದಲಾವಣೆಗೆ ಕೊಡುಗೆ ಸಲ್ಲಿಸಿದಂತೆಯೂ ಆಯಿತು.
ಗಾಂಧೀಜಿ ಹೆಸರನ್ನು ಕಾಂಗ್ರೆಸ್ ಧಾರಾಳವಾಗಿ ಉಪಯೋಗಿಸಿಕೊಳ್ಳುತ್ತದೆ. ಅವರು ಹೇಳಿದ ಸ್ವರಾಜ್ಯದ ಕನಸು ನನಸಾದರೂ ಆದೀತು. ನೀವು ಇದನ್ನು ಕರ್ನಾಟಕದಲ್ಲಿ ಅಳವಡಿಸಿ ಬೇರೆ ರಾಜ್ಯಗಳಿಗೆ ಮಾದರಿಯಾಗಬಹುದು. ಹೀಗೆ ನಡೆದರೆ ನಮ್ಮ ಕಲಾಂ ಅವರು ಕಂಡ ಐಟಿಜ್ಝಛ 2020 ಕನಸು ಕೊಂಚ ವಿಳಂಬವಾದರು ನನಸಾಗುತ್ತದೆ.
- ಶ್ರೀಪಾದರಾಜ್ ಕೆ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

